ಈಗ ನಾವೇನು ಅಷ್ಟೋ ಇಷ್ಟೋ ಹಾಡುತ್ತಿದ್ದೆವೆಯೋ ಅದು ಎಸ್ಪಿಬಿ ಅವರು ಹಾಕಿದ ಭಿಕ್ಷೆ. ಇಂಥ ಮತ್ತೊಂದು ಗಾಯಕ ಹುಟ್ಟಿ ಬರಬೇಕೆಂದ್ರೆ ಇನ್ನೂ 500 ವರ್ಷಬೇಕು. ಅಂಥದ್ದೊಂದು ಮೇರು ಪರ್ವತವನ್ನು ನಾವಿಂದು ಕಳೆದುಕೊಂಡಿದ್ದೇವೆ' ಎಂದು ಗಾಯಕ ರಾಜೇಶ್ ಕೃಷ್ಣನ್ ಭಾವುಕರಾಗಿದ್ದಾರೆ.
ಹಿರಿಯ ಗಾಯಕ ಎಸ್ಪಿ ಬಾಲಸುಬ್ರಮಣ್ಯಂ ಅವರ ನಿಧನ ನೋವುಂಟು ಮಾಡಿದೆ. ಶಾಲೆ ಮತ್ತು ಕಾಲೇಜಿನ ಸಮಯದಿಂದಲೇ ಅವರ ಹಾಡುಗಳನ್ನು ಕೇಳಿ ಅಭಿಮಾನಿಯಾಗಿದ್ದೆ ಎಂದಿರುವ ರಾಜೇಶ್ ಕೃಷ್ಣನ್, ಮುಂದೊಂದು ದಿನ ಅವರ ಜತೆ ವೇದಿಕೆ ಹಂಚಿಕೊಳ್ಳುವ ಸೌಭಾಗ್ಯ ಸಿಗುತ್ತೆ ಎಂದು ಭಾವಿಸಿರಲಿಲ್ಲ. ಆದರೆ, ಆ ಗಳಿಗೆಯೂ ನನಗೆ ಸಿಕ್ಕಿತ್ತು.
ಇದೀಗ ಅವರೊಂದಿಗೆ ಕಳೆದ ಆ ಸಮಯ ಮತ್ತು ಬಿಟ್ಟು ಹೋದ ಹಾಡುಗಳನ್ನೇ ಕೇಳುತ್ತ ಅವರ ನೆನಪು ಮಾಡಿಕೊಳ್ಳುತ್ತಿದ್ದೇನೆ ಎಂದು ಶಿಷ್ಯ ರಾಜೇಶ್ ಕೃಷ್ಣ ಕಂಬನಿ ಮಿಡಿದಿದ್ದಾರೆ.