ರಜನಿಕಾಂತ್ 168ನೇ ಸಿನಿಮಾ 'ಅಣ್ಣಾತೆ' ಮತ್ತೆ ಚಿತ್ರೀಕರಣ ಆರಂಭಿಸುವುದು ಯಾವಾಗ ಎಂದು ಕಾಯುತ್ತಿದ್ದ ಅಭಿಮಾನಿಗಳಿಗೆ ಚಿತ್ರತಂಡದಿಂದ ಗುಡ್ ನ್ಯೂಸ್ ದೊರೆತಿದೆ. ಕಳೆದ ವರ್ಷ ರಜನಿಕಾಂತ್ಗೆ ಅನಾರೋಗ್ಯ ಕಾಡಿದ್ದರಿಂದ ಹೈದರಾಬಾದ್ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದು ಚೆನ್ನೈಗೆ ವಾಪಸಾಗಿದ್ದರು. ಈ ಕಾರಣದಿಂದ ಚಿತ್ರೀಕರಣವನ್ನು ಮುಂದೂಡಲಾಗಿತ್ತು.
ಇದನ್ನೂ ಓದಿ: ಚಾಲೆಂಜಿಂಗ್ ಸ್ಟಾರ್ ಜೊತೆ ಮುತ್ತಿನ ನಗರಿಯಲ್ಲಿ ಬೀಡು ಬಿಟ್ಟ'ರಾಬರ್ಟ್' ಚಿತ್ರತಂಡ
ಮಾರ್ಚ್ 15 ರಿಂದ ಮತ್ತೆ 'ಅಣ್ಣಾತೆ' ಚಿತ್ರೀಕರಣವನ್ನು ಆರಂಭಿಸಲಾಗುವುದು ಎಂದು ಚಿತ್ರತಂಡ ಪ್ರಕಟಿಸಿದೆ. ರಜನಿಕಾಂತ್ ಕೂಡಾ "ನಾನು ಆರೋಗ್ಯವಾಗಿದ್ದೇನೆ, ಶೀಘ್ರದಲ್ಲೇ ಮತ್ತೆ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದೇನೆ" ಎಂದು ತಿಳಿಸಿದ್ದಾರೆ. ಚಿತ್ರೀಕರಣ ಆರಂಭಿಸಲು ಚಿತ್ರತಂಡ ಮತ್ತೆ ಸಕಲ ತಯಾರಿ ಮಾಡಿಕೊಳ್ಳುತ್ತಿದೆ. ಆದರೆ ಚಿತ್ರೀಕರಣ ಮತ್ತೆ ಹೈದರಾಬಾದ್ನಲ್ಲಿ ನಡೆಯಲಿದೆಯಾ ಅಥವಾ ಚೆನ್ನೈನಲ್ಲಿ ಮುಂದುವರೆಯಲಿದೆಯೇ ಎಂಬ ವಿಚಾರ ತಿಳಿದುಬಂದಿಲ್ಲ. 'ಅಣ್ಣಾತೆ' ಚಿತ್ರಕ್ಕೆ ಸನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ದೇಶಕ ಶಿವ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರದಲ್ಲಿ ರಜನಿ ಜೊತೆಗೆ ನಯನತಾರಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಇವರೊಂದಿಗೆ ಕೀರ್ತಿ ಸುರೇಶ್, ಮೀನಾ, ಖುಷ್ಬೂ, ಪ್ರಕಾಶ್ ರಾಜ್, ರೋಬೋ ಶಂಕರ್ ಹಾಗೂ ಇನ್ನಿತರರು ನಟಿಸುತ್ತಿದ್ದಾರೆ. ಡಿ. ಇಮ್ಮಾನ್ ಈ ಚಿತ್ರದ ಹಾಡುಗಳಿಗೆ ಸಂಗೀತ ನಿರ್ದೇಶಿಸುತ್ತಿದ್ದಾರೆ. ಇದೇ ವರ್ಷ ನವೆಂಬರ್ 4 ರಂದು ಸಿನಿಮಾ ಬಿಡುಗಡೆಯಾಗಲಿದೆ.