ETV Bharat / sitara

350 ಚಿತ್ರಗಳಲ್ಲಿ ಸಂಗೀತದ ಮೂಲಕ ಮೋಡಿ ಮಾಡಿದ್ದ ರಾಜನ್​​​-ನಾಗೇಂದ್ರ ಜೋಡಿ...! - Sandalwood music director

ಸುಮಾರು 350 ಚಿತ್ರಗಳ 200 ಹಾಡುಗಳಿಗೆ ಸಂಗೀತ ನಿರ್ದೇಶನ ಮಾಡಿ ಸಂಗೀತ ಪ್ರಿಯರನ್ನು ರಂಜಿಸಿದ್ದ ರಾಜನ್- ನಾಗೇಂದ್ರ ಜೋಡಿ ಇಂದು ನಮ್ಮೊಂದಿಗೆ ಇಲ್ಲ. 2000 ರಲ್ಲಿ ನಾಗೇಂದ್ರ ಅನಾರೋಗ್ಯದಿಂದ ನಿಧನರಾಗಿದ್ದರು. ಇದೀಗ ರಾಜನ್ ಕೂಡಾ ನಮ್ಮನ್ನು ಅಗಲಿದ್ದಾರೆ.

Rajan nagendra
ರಾಜನ್​​​-ನಾಗೇಂದ್ರ ಜೋಡಿ
author img

By

Published : Oct 12, 2020, 8:45 AM IST

ಕನ್ನಡ ಚಿತ್ರರಂಗದಲ್ಲಿ ಸುಮಾರು 60 ವರ್ಷಗಳ ಕಾಲ ಸಿನಿಮಾಗಳಿಗೆ ಸಂಗೀತ ನೀಡಿದ್ದ ರಾಜನ್ ನಾಗೇಂದ್ರ ಜೋಡಿ ದೊಡ್ಡ ಹೆಸರು ಮಾಡಿತ್ತು. ಆದರೆ 2000 ರಲ್ಲಿ ನಾಗೇಂದ್ರ ಅವರು 65 ವರ್ಷದವರಿರುವಾಗ ನಿಧನರಾಗುವ ಮೂಲಕ ರಾಜನ್​-ನಾಗೇಂದ್ರ ಎಂಬ ಜೋಡಿಯ ಕೊಂಡಿ ದೂರವಾಗಿತ್ತು. ಆದರೆ ಇದೀಗ ರಾಜನ್ ಕೂಡಾ ಇಹಲೋಕ ತ್ಯಜಿಸಿದ್ದಾರೆ.

Rajan nagendra
ಸಂಗೀತ ನಿರ್ದೇಶಕ ರಾಜನ್

ಚಿತ್ರರಂಗದಲ್ಲಿ ಹೆಸರು ಮಾಡಿದ್ದರೂ ಕೂಡಾ ನಾಗೇಂದ್ರ ಅವರು ಯಾರಿಂದಲೂ ಯಾವ ಸಹಾಯ ಕೂಡಾ ಬಯಸಿರಲಿಲ್ಲ. ಅವರ ಆಸ್ಪತ್ರೆ ವೆಚ್ಚವನ್ನು ಕರ್ನಾಟಕ ಸರ್ಕಾರ ಭರಿಸಲು ಮುಂದಾಗಿತ್ತು. ಆಗಿನ ಆರೋಗ್ಯ ಸಚಿವ ಎ.ಬಿ. ಮಲಕ ರೆಡ್ಡಿ ನಾಗೇಂದ್ರ ಅವರಿಗೆ ಸಹಾಯ ಮಾಡಲು ಸಿದ್ಧರಿದ್ದರು. ಡಾ. ವಿಷ್ಣುವರ್ಧನ್, ಜಗ್ಗೇಶ್, ಶ್ರೀನಿವಾಸಮೂರ್ತಿ, ದೊಡ್ಡಣ್ಣ ಕೂಡಾ ಆಸ್ಪತ್ರೆಗೆ ಧಾವಿಸಿ ಸಹಾಯ ನೀಡಲು ಮುಂದಾದರು. ನಾಗೇಂದ್ರ ಅವರ ಪತ್ನಿ ವಿಜಯಲಕ್ಷ್ಮಿ, ಅವರೊಬ್ಬ ಸ್ವಾಭಿಮಾನಿ ಯಾರೊಂದಿಗೂ ಕೈ ನೀಡಿ ಕೇಳಲಿಲ್ಲ ಎಂದು ಧನ ಸಹಾಯವನ್ನು ತಿರಸ್ಕರಿಸಿದ್ದರು. ಆದರೆ ನಾಗೇಂದ್ರ ಅವರು ಮೊದಲೇ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದರೆ ಆರೋಗ್ಯ ಸುಧಾರಿಸುತ್ತಿತ್ತು ಎಂದು ಕೂಡಾ ಅವರ ಪತ್ನಿ ಹೇಳಿಕೊಂಡಿದ್ದರು. ಜನರಲ್ ವಾರ್ಡ್​ನಿಂದ ಸ್ಪೆಷಲ್ ವಾರ್ಡ್​ಗೆ ಶಿಫ್ಟ್ ಆಗಿದ್ದೊಂದೇ ನಾಗೇಂದ್ರ ಒಂದು ತಿಂಗಳು ಅನುಭವಿಸಿದ ಸೌಕರ್ಯ ಅಷ್ಟೇ.

Rajan nagendra
ರಾಜನ್​ಗೆ ಸನ್ಮಾನ ಮಾಡುತ್ತಿರುವ ಡಾ. ರಾಜ್​​ಕುಮಾರ್

ಇಂದು 87 ನೇ ವಯಸ್ಸಿನಲ್ಲಿ ವಯಸ್ಸಿನಲ್ಲಿ ಅವರ ಹಿರಿಯ ಸಹೋದರ ರಾಜನ್ ವಯೋಸಹಜ ಕಾಯಿಲೆ ಇಂದ ನಿಧನರಾಗಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಈ ಜೋಡಿ ಮಾಡಿದ ಮೋಡಿ ಎಂದೆಂದಿಗೂ ಅಮರ. 350ಕ್ಕೂ ಹೆಚ್ಚು ಚಿತ್ರಗಳಲ್ಲಿ 200ಕ್ಕೂ ಹೆಚ್ಚು ಕನ್ನಡ ಚಿತ್ರಗಳಿಗೆ ಈ ಜೋಡಿ ಸಂಗೀತ ನೀಡಿತ್ತು. ಎರಡು ಕನಸು ಚಿತ್ರದ 'ಎಂದೆಂದೂ ನಿನ್ನನು ಮರೆತು ನಾ ಇರಲಾರೆ....'ಎಂಬ ಹಾಡಿಗೆ ಅನ್ವರ್ಥವಾಗಿ ಈ ರಾಜನ್ ನಾಗೇಂದ್ರ ಜೋಡಿ ಕನ್ನಡ ಚಿತ್ರರಸಿಕರ ಮನದಲ್ಲಿ ಸದಾ ಸ್ಥಾನ ಪಡೆಯುತ್ತಾರೆ.

Rajan nagendra
ಗೀತಪ್ರಿಯ ಅವರೊಂದಿಗೆ ರಾಜನ್

ರಾಜನ್ 2011 ರಲ್ಲಿ 'ಬೆಳ್ಳಿ ಹೆಜ್ಜೆ' ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸಂಗೀತಕ್ಕೆ ಒಳ್ಳೆಯ ಶರೀರದ ಜೊತೆಗೆ ಶಾರೀರ ಬೇಕು. ಇದರ ಜೊತೆಗೆ ಶಿಸ್ತು ಹಾಗೂ ಭಕ್ತಿ ಇರಬೇಕು ಎಂದು ಅನಿಸಿಕೆ ವ್ಯಕ್ತಪಡಿಸಿದ್ದರು. ಸಂಗೀತ ಕ್ಷೇತ್ರದಲ್ಲೂ ಸ್ಪರ್ಧೆ ಅನ್ನುವುದು ತೀವ್ರವಾಗಿದೆ. ಆದರ ಜೊತೆಗೆ ಗೀತ ಸಾಹಿತ್ಯದ ಪಕ್ವತೆ ಸಹ ಮಿಸ್ ಆಗಿದೆ ಎಂದು ಹೇಳುತ್ತಿದ್ದರು. ಇಂದು ಸ್ವಂತಿಕೆಯ ಬಗ್ಗೆ ಗಮನ ಕಡಿಮೆ. ಆಗಿನ ಕಾಲದಲ್ಲಿ ಕಥೆ, ಚಿತ್ರಕಥೆ, ಸಂಗೀತ, ಸಾಹಿತ್ಯಕ್ಕೆ ನೀಡುತ್ತಾ ಇದ್ದ ಪ್ರಾಶಸ್ತ್ಯ ಇಂದು ಮಿಸ್ ಆಗಿರುವುದರಿಂದಲೇ ಗುಣಮಟ್ಟ ಇಳಿಕೆ ಎಂದಿದ್ದರು.

Rajan nagendra
ರಾಜನ್​​​-ನಾಗೇಂದ್ರಗೆ ಸನ್ಮಾನ ಮಾಡುತ್ತಿರುವ ಡಾ. ವಿಷ್ಣುವರ್ಧನ್

76 ನೇ ವಯಸ್ಸಿನಲ್ಲಿ ರಾಜನ್ 'ಸೈಂಟಿಫಿಕ್ ಪ್ಲೇ ಬ್ಯಾಕ್ ಸಿಂಗಿಂಗ್' ಹೊಸ ಅನ್ವೇಷಣೆ ಸಹ ಮಾಡಿದ್ದರು. ಈ ಪದ್ದತಿಯಲ್ಲಿ ಹಾಡುಗಾರರು ಹಾಡುವಾಗ ಅವರ ಹಾಡಿನ ಏರಿಳಿತ ಸರಿಯಾಗಿ ಇದೆಯಾ ಎಂದು ತಿಳಿಯುವ ಕ್ರಮ ಆಗಿತ್ತು. ಇದರೊಂದಿಗೆ ಅವರು ಒಂದು ನೋಟೇಶನ್ ಬುಕ್ ಕೂಡಾ ಹೊರ ತಂದಿದ್ದರು. ಈ ಪುಸ್ತಕವನ್ನು ವಿಶೇಷ ಚೇತನರು ಸಂಗೀತ ಕಲಿಯಲು ಸಹಾಯ ಆಗುವಂತೆ ರಚನೆ ಮಾಡಿದ್ದರು ರಾಜನ್.

Rajan nagendra
ಸಾಹಿತಿ ಚಿ. ಉದಯಶಂಕರ್ ಜೊತೆ ರಾಜನ್-ನಾಗೇಂದ್ರ

ಒಟ್ಟಿನಲ್ಲಿ ಕನ್ನಡ ಚಿತ್ರರಂಗದ ಸಂಗೀತ ನಿರ್ದೇಶಕ ಜೋಡಿ ಇಂದು ನಮ್ಮೊಂದಿಗೆ ಇಲ್ಲದಿರುವುದು ನಿಜಕ್ಕೂ ಬೇಸರದ ಸಂಗತಿ.

Rajan nagendra
ಬೆಳ್ಳಿ ಹೆಜ್ಜೆ ಕಾರ್ಯಕ್ರಮ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.