ಎಸ್.ಮೋಹನ್ ಕುಮಾರ್ ನಿರ್ಮಾಣದ, ಕಾಂತರಾಜ್ ಗೌಡ ನಿರ್ದೇಶನ ಮಾಡಿರುವ 'ರಾಜಲಕ್ಷ್ಮಿ' ಚಿತ್ರ ಸದ್ಯ ರಿಲೀಸ್ಗೆ ರೆಡಿಯಾಗಿದ್ದು, ಇದೇ ನವೆಂಬರ್ 22ರಂದು ರಾಜ್ಯಾದ್ಯಂತ ಸುಮಾರು 80ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿದೆ. ಸದ್ಯ ಚಿತ್ರತಂಡ ಪ್ರಮೋಷನ್ನಲ್ಲಿ ಬ್ಯುಸಿ ಇದ್ದು, ಇಂದು ಚಿತ್ರದ ಬಿಡುಗಡೆ ದಿನಾಂಕವನ್ನು ಅನೌನ್ಸ್ ಮಾಡಿದೆ.
ಮಂಡ್ಯದಳ್ಳಿ ಕೆರಗೋಡು ಸಮೀಪದ ಸಿದ್ದಗೌಡನ ಹೋಬಳಿಯಲ್ಲಿ ನಡೆದ ನೈಜ ಘಟನೆಯನ್ನ ಈ ಚಿತ್ರದಲ್ಲಿ ತರಲಾಗಿದೆ. ರಾಜಲಕ್ಷ್ಮಿ ಚಿತ್ರದ ಹಾಡುಗಳಿಗೆ ಈಗಾಗಲೇ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ಹಳ್ಳಿಯ ರಾಜಕಾರಣದ ನೈಜತೆಯನ್ನು ಈ ಚಿತ್ರದ ಮೂಲಕ ಜನರಿಗೆ ತೋರಿಸಲು ನಿರ್ದೇಶಕ ಕಾಂತರಾಜ್ ಗೌಡ ರೆಡಿಯಾಗಿದ್ದು, ಚಿತ್ರದಲ್ಲಿ ನಾಯಕನಾಗಿ ರಂಗಭೂಮಿ ಕಲಾವಿದ ನವೀನ್ ತೀರ್ಥಹಳ್ಳಿ ಕಾಣಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ನಾಯಕನನ್ನು ಕಾಲೇಜು ವ್ಯಾಸಂಗ ಮಾಡಿಕೊಂಡೇ ವ್ಯವಸಾಯ ಮಾಡುವ ಯುವ ರೈತನ ಪಾತ್ರದಲ್ಲಿ ತೋರಿಸಲಾಗಿದೆ. ನವೀನ್ಗೆ ಜೋಡಿಯಾಗಿ ರಶ್ಮಿಗೌಡ ಕಾಣಿಸಿಕೊಂಡಿದ್ದಾರೆ.
ಇನ್ನು ಚಿತ್ರದ ಟೈಟಲ್ ವಿಚಾರಕ್ಕೆ ಬಂದ್ರೆ ನಿರ್ಮಾಪಕ ಮೋಹನ್ ತಂದೆಯ ಹೆಸರು ರಾಜ ಮತ್ತು ತಾಯಿಯ ಹೆಸರು ಲಕ್ಷ್ಮಿಯಂತೆ. ಅವರಿಬ್ಬರ ಹೆಸರನ್ನು ಸೇರಿಸಿ ಚಿತ್ರಕ್ಕೆ ಟೈಟಲ್ ಇಡಲಾಗಿದೆ. ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಹೊನ್ನವಳ್ಳಿ ಕೃಷ್ಣ, ಟೆನ್ನಿಸ್ ಕೃಷ್ಣ, ಕೆ.ಹೆಚ್.ಮೀಸೆಮೂರ್ತಿ, ಕಿರಣ್‍ಗೌಡ, ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಮುತ್ತುರಾಜ್ ಅಭಿನಯಿಸಿದ್ದು, ಚಿತ್ರ ಮುಂದಿನ ವಾರ ಚಿತ್ರಮಂದಿರಕ್ಕೆ ಲಗ್ಗೆ ಇಡಲಿದೆ.