ETV Bharat / sitara

ಶೂಟಿಂಗ್ ಮುಗಿಸಿ ಪೋಸ್ಟ್​ ಪ್ರೊಡಕ್ಷನ್ ಹಂತದಲ್ಲಿ 'ರಾಜಲಕ್ಷ್ಮಿ' ಸಿನಿಮಾ - undefined

ಶ್ರೀಕಾಂತ್ ನಿರ್ದೇಶಿಸುತ್ತಿರುವ 'ರಾಜಲಕ್ಷ್ಮಿ' ಸಿನಿಮಾ ಶೂಟಿಂಗ್ ಮುಗಿಸಿ ಪೋಸ್ಟ್​ ಪ್ರೊಡಕ್ಷನ್ ಹಂತದಲ್ಲಿ ಬ್ಯುಸಿಯಾಗಿದೆ. 'ಅಯೋಗ್ಯ' ಚಿತ್ರದಿಂದ ಹಿಂದೆ ಸರಿದಿದ್ದ ಕಾರ್ಯಕಾರಿ ನಿರ್ಮಾಪಕ ಮೋಹನ್, ರಾಜಲಕ್ಷ್ಮಿ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ.

'ರಾಜಲಕ್ಷ್ಮಿ'
author img

By

Published : Jun 9, 2019, 7:51 PM IST

Updated : Jun 9, 2019, 8:00 PM IST

ಚಿತ್ರರಂಗಕ್ಕೆ ಇತ್ತೀಚಿನ ದಿನಗಳಲ್ಲಿ ಹೊಸಬರ ಆಗಮನ‌ ಜೋರಾಗಿದೆ. ಅವರಲ್ಲಿ ಕೆಲವರು ಉತ್ತಮ ಕಥೆಗಳನ್ನು ಹೆಣೆಯುವ ಮೂಲಕ ಎಲ್ಲರ ಗಮನ ಸೆಳೆಯುತ್ತಾರೆ. ಈಗ ಅಂತದ್ದೇ ಪ್ರತಿಭಾವಂತ ಹೊಸಬರ ತಂಡವೊಂದು ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡಿದೆ.

'ರಾಜಲಕ್ಷ್ಮಿ' ಚಿತ್ರತಂಡ

ಈ ತಂಡ ಚಿತ್ರದ ಶೂಟಿಂಗ್ ಕೂಡಾ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ. 'ರಾಜಲಕ್ಷ್ಮಿ' ಎಂಬ ಹೆಸರಿನ ಸಿನಿಮಾ ಸದ್ದಿಲ್ಲದೆ ಸೆಟ್ಟೇರಿ ಸೈಲೆಂಟಾಗಿ ಶೂಟಿಂಗ್ ಕೂಡಾ ಮುಗಿಸಿದೆ. ಚಿತ್ರತಂಡ ಇತ್ತೀಚೆಗೆ ಪ್ರೆಸ್​ಮೀಟ್ ಏರ್ಪಡಿಸಿತ್ತು. ಚಿತ್ರದಲ್ಲಿ ನವೀನ್ ತೀರ್ಥಹಳ್ಳಿ ಹಾಗೂ ರಶ್ಮಿ ನಾಯಕ-ನಾಯಕಿಯಾಗಿ ನಟಿಸಿದ್ದಾರೆ. ಇದೊಂದು ವಿಭಿನ್ನ ಬಗೆಯ ಕಥಾಹಂದರವನ್ನು ಒಳಗೊಂಡ ಚಿತ್ರವಾಗಿದೆ. ಇಲ್ಲಿ ರಾಜ ಎನ್ನುವ ನಾಯಕ, ಲಕ್ಷ್ಮಿ ಎಂಬ ನಾಯಕಿಯ ನಡುವೆ ನಡೆಯುವ ಕಥೆಯೇ ಸಿನಿಮಾ ಪ್ರಮುಖ ಅಂಶ.

ವಕೀಲ ಶ್ರೀಕಾಂತ್ ಎಂಬುವವರಿಗೆ ಸಿನಿಮಾದಲ್ಲಿ ಆಸಕ್ತಿ ಇರುವ ಕಾರಣ ಈ ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದು ಮೊದಲ ಬಾರಿಗೆ ನಿರ್ದೇಶನ ಮಾಡಿದ್ದಾರೆ.ಇದು ಹಳ್ಳಿ ಸೊಗಡಿನ ಸಿನಿಮಾವಾಗಿದ್ದು, ಮಂಡ್ಯದ ಹಳ್ಳಿಯೊಂದರಲ್ಲಿ ಚಿತ್ರದ ಕಥೆ ಸಾಗಲಿದೆ. ಗ್ರಾಮ, ರಾಜಕೀಯ ಕಿತ್ತಾಟ, ಪ್ರೇಮಕಥೆ ಹಾಗೂ ಇನ್ನಿತರ ಅಂಶಗಳನ್ನು ಚಿತ್ರ ಹೊಂದಿದೆ. 'ಅಯೋಗ್ಯ' ಚಿತ್ರದಿಂದ ಹಿಂದೆ ಸರಿದಿದ್ದ ಕಾರ್ಯಕಾರಿ ನಿರ್ಮಾಪಕ ಮೋಹನ್ ರಾಜಲಕ್ಷ್ಮಿ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಈ ಚಿತ್ರದ ಮೂಲಕ ಮೋಹನ್ ಪೂರ್ಣ ಪ್ರಮಾಣದ ನಿರ್ಮಾಪಕರಾಗಿ ಬಡ್ತಿ ಪಡೆದಿದ್ದಾರೆ. ಸದ್ಯಕ್ಕೆ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತಿದ್ದು ಸೆಪ್ಟೆಂಬರ್​​​​​​ನಲ್ಲಿ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ.

Intro:ಸದ್ದಿಲ್ಲದೆ ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೋಡಕ್ಷನ್ ವರ್ಕ್ ನಲ್ಲಿ ಬ್ಯುಸಿಯಾದ " ರಾಜಲಕ್ಷಿ" ಚಿತ್ರತಂಡ..

Body:ವಕೀಲರು ಸೇರಿ ರೆಡಿ ಮಾಡ್ತಿರುವ ಹೊಸಬರು ಅಭಿನಯದ ರಾಜಲಕ್ಷ್ಮಿ ಚಿತ್ರ.

ಸತೀಶ ಎಂಬಿ

( ಸ್ಕ್ರಿಪ್ಟ್ ಮೇಲ್ ಮಾಡಲಾಗಿದೆ)

Conclusion:
Last Updated : Jun 9, 2019, 8:00 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.