ಸ್ಯಾಂಡಲ್ವುಡ್ನಲ್ಲಿ ಕೆಲವೊಂದು ಸಿನಿಮಾಗಳು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿ ಸಕ್ಸಸ್ ಆಗದೆ ಇದ್ರೂ, ಡಿಜಿಟಲ್ ಪ್ಲ್ಯಾಟ್ಫಾರ್ಮ್ನಲ್ಲಿ ಹಿಟ್ ಆಗಿರುವ ಉದಾಹರಣೆಗಳಿವೆ. ಇದೀಗ ಡ್ರಗ್ಸ್ ದಂಧೆ ಪ್ರಕರಣದಲ್ಲಿ ಸಿಸಿಬಿ ವಶದಲ್ಲಿರುವ ರಾಗಿಣಿ ದ್ವಿವೇದಿ ಅಭಿನಯದ 'ದಿ ಟೆರರಿಸ್ಟ್' ಸಿನಿಮಾಗೆ ಬೇಡಿಕೆ ಬಂದಿದೆ.
ಕಳೆದ ವರ್ಷ ಬಿಡುಗಡೆಯಾಗಿದ್ದ ರಾಗಿಣಿ ಅಭಿನಯದ 'ದಿ ಟೆರರಿಸ್ಟ್' ಚಿತ್ರಕ್ಕೆ ಈಗ ಭಾರೀ ಡಿಮ್ಯಾಂಡ್ ಬಂದಿದ್ದು ಹಿಂದಿಗೆ ಈ ಚಿತ್ರದ ರೀಮೇಕ್ ರೈಟ್ಸ್ ಸೇಲ್ ಆಗಿದೆ. ಇದುವರೆಗೂ ಈ ಚಿತ್ರದ ರೀಮೇಕ್ ಹಕ್ಕನ್ನು ಯಾರೂ ಕೇಳಿರಲಿಲ್ಲ. ಆದರೆ ಈಗ ರಾಗಿಣಿ ಡ್ರಗ್ಸ್ ದಂಧೆಯಲ್ಲಿ ಸಿಲುಕಿದ್ದೇ ತಂಡ ಚಿತ್ರಕ್ಕೆ ಭಾರೀ ಬೇಡಿಕೆ ಬಂದಿದೆ. ಬಾಲಿವುಡ್ ಎಂಕ್ ಲ್ಯಾನ್ ಪ್ರೊಡಕ್ಷನ್ಸ್ ಸಂಸ್ಥೆಗೆ 'ದಿ ಟೆರರಿಸ್ಟ್' ಚಿತ್ರದ ಹಿಂದಿ ರೈಟ್ಸ್ ಸೇಲ್ ಆಗಿದೆ. ದಿ ಫೈನಲ್ ಎಕ್ಸಿಟ್, ಬ್ಲೂ ಎಂಬ ಚಿತ್ರಗಳನ್ನು ವಿತರಣೆ ಮಾಡಿರುವ ವಿಶಾಲ್ ರಾಣಾ ಎಂಬುವರು ಈಗ ರಾಗಿಣಿ ದ್ವಿವೇದಿ ಅಭಿನಯದ 'ದಿ ಟೆರರಿಸ್ಟ್' ಹಿಂದಿ ಹಕ್ಕನ್ನು 50 ಲಕ್ಷ ರೂಪಾಯಿಗೆ ಖರೀದಿಸಿದ್ದಾರೆ ಎನ್ನಲಾಗಿದೆ.
ಈ ಸಿನಿಮಾ ಇಷ್ಟು ದೊಡ್ಡ ಮೊತ್ತಕ್ಕೆ ಮಾರಾಟವಾಗಿರುವುದಕ್ಕೆ ನಿರ್ದೇಶಕ ಪಿ.ಸಿ. ಶೇಖರ್ ಹಾಗೂ 'ದಿ ಟೆರರಿಸ್ಟ್' ಸಿನಿಮಾ ನಿರ್ಮಾಪಕ ಅಲಂಕಾರ್ ಸಖತ್ ಖುಷಿಯಾಗಿದ್ದಾರೆ. ಆದರೆ ಈ ಚಿತ್ರದ ರೀಮೇಕ್ ರೈಟ್ಸ್ ಈಗ ಮಾರಾಟವಾಗಿರುವುದು ಆಶ್ಚರ್ಯದ ವಿಚಾರವೇ ಸರಿ.