ವಿಶ್ವದ ಬಹುತೇಕ ರಾಷ್ಟ್ರಗಳು ಕೊರೊನಾದಿಂದ ನರಳಾಡುತ್ತಿವೆ. ಭಾರತದಲ್ಲಿ ಕೊರೊನಾ ಪೀಡಿತರ ಸಂಖ್ಯೆ 29 ಸಾವಿರ ದಾಟಿದ್ದು ರಾಜ್ಯದಲ್ಲಿ ಕೂಡಾ 523ಕ್ಕೆ ಏರಿದೆ. ಲಾಕ್ಡೌನ್ ವಿಸ್ತರಣೆ ಬಗ್ಗೆ ಕೇಂದ್ರ ಸರ್ಕಾರ ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಲಿದೆ.
ಈ ನಡುವೆ ಜನರು ತಮ್ಮ ಸಮಾಜಸೇವೆಯನ್ನು ಮುಂದುವರೆಸುತ್ತಿದ್ದಾರೆ. ನಟಿ ರಾಗಿಣಿ ಈಗಾಗಲೇ ಬಹಳಷ್ಟು ಸಹಾಯ ಮಾಡಿದ್ದಾರೆ. ಇದೀಗ ಸ್ಲಂ ನಿವಾಸಗಳ ಹಸಿವು ನೀಗಿಸಿದ್ದಾರೆ. ಬನಶಂಕರಿಯಲ್ಲಿ ನೆಲೆಸಿರುವ ಸುಮಾರು 150 ಸ್ಲಂ ನಿವಾಸಿಗಳಿಗೆ ರಾಗಿಣಿ ಅನ್ನದಾನ ಮಾಡಿದ್ದಾರೆ. ಸ್ವತ: ತಾವೇ ಆ ಪ್ರದೇಶಗಳಿಗೆ ತೆರಳಿ ಎಲ್ಲರಿಗೂ ಅನ್ನದಾನ ಮಾಡಿದ್ದಾರೆ. ಇದಕ್ಕೂ ಮುನ್ನ ರಾಗಿಣಿ ಪೌರಕಾರ್ಮಿಕರಿಗೆ ಸಹಾಯ ಮಾಡಿದ್ದರು. ವೈದ್ಯರಿಗೆ ತಾವೇ ತಯಾರಿಸಿದ ಪೌಷ್ಠಿಕ ಆಹಾರ ನೀಡಿದ್ದರು. ಅಲ್ಲದೆ 100 ಪೊಲೀಸ್ ಸಿಬ್ಬಂದಿಗೆ ಕೂಡಾ ರಾಗಿಣಿ ಊಟದ ವ್ಯವಸ್ಥೆ ಮಾಡಿದ್ದರು. ಅನ್ನದಾನಕ್ಕಿಂತ ಮಿಗಿಲಾದದ್ದು ಏನೂ ಇಲ್ಲ ಎನ್ನುತ್ತಾರೆ. ಅದೇ ರೀತಿ ಕಷ್ಟ ಬಂದಾಗಲೇ ನಿಜವಾದ ಬಂಧುಗಳು ಯಾರೆಂಬುದು ಅರ್ಥವಾಗುವುದಾಗಿ ಹಿರಿಯರು ಹೇಳಿದ್ದಾರೆ. ರಾಗಿಣಿ ಸೆಲಬ್ರಿಟಿಯಾಗಿ ಇಂತ ಕಷ್ಟದ ಕೆಲಸದಲ್ಲಿ ಸಮಾಜಸೇವೆ ಮಾಡುತ್ತಿರುವುದು ನಿಜಕ್ಕೂ ಸಂತೋಷದ ವಿಚಾರ. ರಾಗಿಣಿಯ ಈ ಕೆಲಸಕ್ಕೆ ನೆಟಿಜನ್ಸ್ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.