ETV Bharat / sitara

‘ನಿನ್ನ ಸನಿಹಕೆ’ ಕುರಿತಾದ ಆಸಕ್ತಿದಾಯಕ ವಿಚಾರ ಹಂಚಿಕೊಂಡ ರಘು ದೀಕ್ಷಿತ್ - Dhanya Ram Kumar

ಕನ್ನಡ ಚಿತ್ರರಂಗ ಮಾತ್ರವಲ್ಲದೆ ತೆಲುಗು, ಮಲಯಾಳಂ ಹಾಗೂ ಹಿಂದಿ ಸಿನಿಮಾರಂಗದಲ್ಲಿ ಗಾಯನ ಹಾಗೂ ಸಂಗೀತ ನಿರ್ದೇಶನದಿಂದ ಗುರುತಿಸಿಕೊಂಡಿರುವ ಜಾನಪದ ಗಾಯಕ ರಘು ದೀಕ್ಷಿತ್ ‘ನಿನ್ನ ಸನಿಹಕೆ’ ಚಿತ್ರದ ಕುರಿತು ಕೆಲ ಅಭಿಪ್ರಾಯ ಹಂಚಿಕೊಂಡಿದ್ದಾರೆ.

Raghu Dixit
Raghu Dixit
author img

By

Published : Oct 7, 2021, 8:13 AM IST

ರಾಜ್​ಕುಮಾರ್​ ಮೊಮ್ಮಗಳು ಧನ್ಯಾ ರಾಮ್​ಕುಮಾರ್​ ಮತ್ತು ಸೂರಜ್​ ಗೌಡ ಜೋಡಿಯಾಗಿ ನಟಿಸಿರುವ ‘ನಿನ್ನ ಸನಿಹಕೆ’ ಚಿತ್ರದ ಟ್ರೇಲರ್​ ಮೂಲಕವೇ ಭರವಸೆ ಮೂಡಿಸಿದೆ. ಈ ಸಿನಿಮಾ ಕುರಿತು ಮ್ಯೂಸಿಕ್​ ಡೈರೆಕ್ಟರ್​ ರಘು ದೀಕ್ಷಿತ್​ ಕೆಲವು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಕನ್ನಡ ಚಿತ್ರರಂಗ ಮಾತ್ರವಲ್ಲದೆ ತೆಲುಗು, ಮಲಯಾಳಂ ಹಾಗೂ ಹಿಂದಿ ಸಿನಿಮಾರಂಗದಲ್ಲಿ ಗಾಯನ ಹಾಗೂ ಸಂಗೀತ ನಿರ್ದೇಶನದಿಂದ ಗುರುತಿಸಿಕೊಂಡಿರುವ ಜಾನಪದ ಗಾಯಕ ರಘು ದೀಕ್ಷಿತ್. 'ಲವ್ ಮಾಕ್ ಟೈಲ್' ಸಿನಿಮಾ ನಂತರ 'ನಿನ್ನ ಸನಿಹಕೆ' ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಸದ್ಯಕ್ಕೆ ಈ ಚಿತ್ರದ ಬಿಡುಗಡೆ ಹಂತದಲ್ಲಿದ್ದು, ನಟ ಸೂರಜ್ ಮತ್ತು ಧನ್ಯಾ ರಾಮ್ ಕುಮಾರ್ ಕುರಿತಾದ ಕೆಲವೊಂದು ಆಸಕ್ತಿದಾಯಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

‘ನಿನ್ನ ಸನಿಹಕೆ’ ಕುರಿತು ಮಾತನಾಡಿದ ರಘು ದೀಕ್ಷಿತ್

'ನಿನ್ನ ಸನಿಹಕೆ' ಸಿನಿಮಾ ಅಂದಾಕ್ಷಣ ನೆನಪಿಗೆ ಬರೋದು ನಟ, ನಿರ್ದೇಶಕ ಸೂರಜ್ ಗೌಡ. ಅವರಿಗೆ ಸಿನಿಮಾ ವ್ಯಾಮೋಹ ಹೆಚ್ಚು. ಐದು ವರ್ಷಗಳ ಹಿಂದೆ ಕಂಪೋಸ್ ಮಾಡಿದ್ದ ಹಾಡನ್ನು ನಿನ್ನ ಸನಿಹಕೆ ಚಿತ್ರದಲ್ಲಿ ಬಳಸಿಕೊಂಡಿದ್ದಾರೆ. ಈಗಾಗಲೇ ಚಿತ್ರದ ಎಲ್ಲಾ ಹಾಡುಗಳು ಸೂಪರ್ ಹಿಟ್ ಆಗಿವೆ. ಈ ಸಿನಿಮಾಕ್ಕಾಗಿ ನಾನು ಸೂರಜ್ ಗೌಡ ಹಲವಾರು ಬಾರಿ ಜಗಳ ಮಾಡಿಕೊಂಡು ಕೆಲಸ ಮಾಡಿದ್ದೇವೆ. ಆ ಕೋಪ ಮತ್ತು ಜಗಳ ಸ್ವಲ್ಪ ಹೊತ್ತು ಮಾತ್ರ. ಯಾಕೆಂದ್ರೆ, ಸೂರಜ್ ಮತ್ತು ನನ್ನಲ್ಲಿ ಯಾವುದೆ ಸ್ವಾರ್ಥ ಇಲ್ಲ. ಆ ಕಾರಣಕ್ಕೆ ನಿನ್ನ ಸನಿಹಕೆ ಚಿತ್ರದಲ್ಲಿ ಹಿಟ್ ಹಾಡುಗಳನ್ನು ಮಾಡಲು ಸಾಧ್ಯವಾಯಿತು ಎಂದು ರಘು ದೀಕ್ಷಿತ್ ಹೇಳಿದ್ರು.

ಇದನ್ನೂ ಓದಿ: 'ರಾಜ್​ಕುಮಾರ್ ಫ್ಯಾಮಿಲಿ ಅಂತ ಧನ್ಯಾ ರಾಮ್​​​ಕುಮಾರ್​ ಅವರನ್ನು ಆಯ್ಕೆ ಮಾಡಲಿಲ್ಲ'

ಧನ್ಯಾ ರಾಮ್​ಕುಮಾರ್ ಅಭಿನಯದ ಬಗ್ಗೆ ಮಾತನಾಡಿದ ಸಂಗೀತ ನಿರ್ದೇಶಕ ರಘು ದೀಕ್ಷಿತ್, ಧನ್ಯಾಗೆ ಫುಲ್ ಮಾರ್ಕ್ ಕೊಟ್ಟಿದ್ದಾರೆ. ಅಷ್ಟೇಅಲ್ಲದೆ, ಧನ್ಯಾರಾಮ್ ಕುಮಾರ್ ನಟನೆ ನೋಡಿ ರಘು ಫಿದಾ ಆಗಿದ್ದಾರಂತೆ.

ಈ ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಬೀಟ್ ಸಾಂಗ್ ಸೇರಿ ಒಟ್ಟು ಎಂಟು ಸಾಂಗ್​ಗಳಿವೆ. ಹಿಂದಿನ ಕಾಲದಲ್ಲಿ ಚಿ ಉದಯ್ ಶಂಕರ್ ಹಾಗೂ ಆರ್.ಎನ್ ಜಯಗೋಪಾಲ್ ತರ ಒಂದು ಸಿನಿಮಾಗೆ ಒಬ್ಬರೇ ಸಾಹಿತ್ಯ ಬರೆಯುತ್ತಿದ್ದರು. ಅದೇ ರೀತಿ ಈ ಸಿನಿಮಾದ ಪೂರ್ತಿ ಹಾಡುಗಳನ್ನು ವಾಸುಕಿ ವೈಭವ್ ಬರೆದಿದ್ದಾರೆ.

ಇದನ್ನೂ ಓದಿ: "ನನ್ನ‌ ಮೊದಲ ಸಿನಿಮಾ‌ ನೋಡಿ ತುಂಬಾ ಎಮೋಷನಲ್​ ಆದೆ.." ಧನ್ಯಾ ರಾಮ್​ಕುಮಾರ್

ಇನ್ನು ರಘು ದೀಕ್ಷಿತ್​ಗೆ ಮೆಲೋಡಿ ಹಾಡುಗಳನ್ನು ‌ಮಾಡೋದಕ್ಕೆ ಬರೋಲ್ಲ ಎಂಬ ಮಾತಿ ಇದೆ. ಅವರಿಗೆಲ್ಲಾ 'ನಿನ್ನ ಸನಿಹಕೆ' ಸಿನಿಮಾ ಉತ್ತರ ಕೊಡುತ್ತದೆ ಎಂದರು. ಈ ವೇಳೆ ಸುದೀಪ್ ಕುರಿತು ಮಾತನಾಡಿದ ಅವರು, ಕರ್ನಾಟಕದಲ್ಲಿ ನನ್ನ ಮೀಟರ್ ಓಡ್ತಾ ಇದೆ ಅಂದರೆ ಅದಕ್ಕೆ ಅವರೇ ಕಾರಣ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.