ನನಗೂ ಡ್ರಗ್ಸ್‌ಗೂ ಸಂಬಂಧ ಇಲ್ಲ. ಅದನ್ನು ಊಹಿಸಿಕೊಂಡರೆ ಭಯ ಆಗುತ್ತೆ. ಈ ವಿಷಯದಲ್ಲಿ ನನ್ನ ಹೆಸರು ಬಂದಿದ್ದು, ಬೇಸರ ಆಗಿದೆ. ಜೊತೆಗೆ ಸಿಟ್ಟು ಬರುತ್ತಿದೆ. ಈ ಬಗ್ಗೆ ಏನೇ ತನಿಖೆ ಮಾಡಿದರೂ ನಾನು ರೆಡಿ ಇದ್ದೀನಿ. ನಾನು ಪ್ರಶಾಂತ್ ಸಂಬರಗಿ ಸಂಪರ್ಕ ಮಾಡಿ ಏಳೆಂಟು ವರ್ಷ ಆಗಿದೆ. ಈ ವಿಷಯದಲ್ಲಿ ಪ್ರಶಾಂತ್ ನನ್ನ ನೇರವಾಗಿ ಸಂಪರ್ಕ ಮಾಡಬಹುದಿತ್ತು ಎಂದು ರಘು ದೀಕ್ಷಿತ್ ಹೇಳಿದ್ದಾರೆ.
ಅಲ್ಲದೆ ನನ್ನ ನೋಡಿದ್ರೆ ಡ್ರಗ್ ಅಡಿಕ್ಟ್ ರೀತಿ ಕಾಣ್ತೀನಾ. ಯಾಕೆ ಈ ಆರೋಪ ಮಾಡಿದ್ದಾರೆ ನನಗೆ ಗೊತ್ತಿಲ್ಲ. ನನ್ನ ಕುಟುಂಬಸ್ಥರು, ಅಭಿಮಾನಿಗಳಿಗೆ ನಾನು ಇದಕ್ಕೆ ಏನು ಹೇಳಬೇಕು. ನನ್ನ ರಕ್ತದಲ್ಲಿ ಸಂಗೀತ ಇದೆ. ಅದನ್ನ ಬಿಟ್ಟು ಬೇರೇನೂ ಸಿಗಲ್ಲ. ಯಾರು ಏನು ಬೇಕಾದರೂ ಮಾತನಾಡಲಿ, ತುಂಬಾ ಕಷ್ಟದಿಂದ ಮೇಲೆ ಬಂದಿದ್ದೇನೆ. ಇಂತಹ ಅರೋಪಗಳು ಬರುವುದರಿಂದ ನನ್ನ ಕೆರಿಯರ್ಗೆ ಸಮಸ್ಯೆ ಆಗುತ್ತೆ. ಅಲ್ಲದೆ ನನ್ನ ಕೆಲಸಗಳಿಗೆ ತೊಂದರೆ ಆಗುತ್ತೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಚಿತ್ರರಂಗದಲ್ಲಿ ಬೇರೆಯವರಿಗೆ ಡ್ರಗ್ ವ್ಯಾಮೋಹ ಇದೆಯೋ, ಇಲ್ಲವೋ ನನಗೆ ಗೊತ್ತಿಲ್ಲ. ನಾನು ಅಂಥವನು ಅಲ್ಲ. ಸಂಗೀತದ ಕೆಲಸ ಮಾಡಲು ನಾನು ಇಂಡಸ್ಟ್ರಿಗೆ ಬಂದಿದ್ದೇನೆ. ಅಲ್ಲದೆ ನನ್ನ ಮೇಲೆ ಆರೋಪ ಮಾಡಿದವರನ್ನು ಕೂಡ ನನ್ನ ಕೆರಿಯರ್ ದೃಷ್ಟಿಯಿಂದ ಕ್ಷಮಿಸಿದ್ದೇನೆ ಎಂದು ರಘು ದೀಕ್ಷಿತ್ ಪ್ರಶಾಂತ್ ಸಂಬರಗಿ ಅರೋಪಕ್ಕೆ ಕೂಲ್ ಆಗೇ ಉತ್ತರಿಸಿದ್ದಾರೆ.