ರಾಘವ ಲಾರೆನ್ಸ್ ಎಂದರೆ ನೆನಪಾಗುವುದು ಅವರ 'ಕಾಂಚನ' ಸಿನಿಮಾ ಸರಣಿ. ತಮಿಳು ಹಾಗೂ ತೆಲುಗಿನಲ್ಲಿ ಇದುವರೆಗೂ ಕಾಂಚನ 2 ಭಾಗಗಳು ಸಕ್ಸಸ್ ಆಗಿದ್ದು, ಇದೀಗ ಕಾಂಚನ -3 ಸಿನಿಮಾ ತೆರೆಗೆ ಬರಲು ಸಜ್ಜಾಗುತ್ತಿದೆ.
- " class="align-text-top noRightClick twitterSection" data="">
ಇತ್ತಿಚೆಗೆ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಮೊದಲೆರಡು ಸರಣಿಗಳಿಗಿಂದ ಭಯಾನಕವಾಗಿದೆ. ಇದು ಹಾರರ್ ಸಿನಿಮಾವಾಗಿದ್ದು, ಸಿನಿಮಾಗೆ ಸೆನ್ಸಾರ್ ಮಂಡಳಿಯಿಂದ ಯು/ಎ ಸರ್ಟಿಫಿಕೇಟ್ ಕೂಡಾ ಸಿಕ್ಕಿದೆ. ರಾಘವ ಲಾರೆನ್ಸ್ ಈ ಸಿನಿಮಾದ ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಸನ್ ಪಿಕ್ಚರ್ಸ್ ಹಾಗೂ ರಾಘವೇಂದ್ರ ಪ್ರೊಡಕ್ಷನ್ಸ್ ಜೊತೆ ಸೇರಿ ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಓವಿಯಾ, ವೇದಿಕಾ, ನಿಕ್ಕಿ ತಂಬೊಲಿ, ಕೋವೈ ಸರಳ ಹಾಗೂ ಇನ್ನಿತರರು ಸಿನಿಮಾದಲ್ಲಿ ನಟಿಸಿದ್ದಾರೆ.
'ಕಾಂಚನ' ಸಿನಿಮಾ ಕನ್ನಡದಲ್ಲಿ 'ಕಲ್ಪನ' ಆಗಿ ರೀಮೇಕ್ ಆಗಿತ್ತು. ಉಪೇಂದ್ರ ಈ ಎರಡೂ ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿದ್ದರು. ತೆಲುಗು, ತಮಿಳು ಎರಡೂ ಭಾಷೆಗಳಲ್ಲೂ 'ಕಾಂಚನ-3' ಏಪ್ರಿಲ್ 19ರಂದು ವಿಶ್ವಾದ್ಯಂತ ಬಿಡುಗಡೆಯಾಗುತ್ತಿದೆ. ನಾಣಿ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ಜೆರ್ಸಿ' ಸಿನಿಮಾ ಕೂಡಾ ಅಂದೇ ಬಿಡುಗಡೆಯಾಗುತ್ತಿದ್ದು, ಎರಡೂ ಸಿನಿಮಾಗಳ ನಡುವೆ ಪೈಪೋಟಿ ಆರಂಭವಾಗಲಿದೆ.