ETV Bharat / sitara

ಎಲ್ಲೆಲ್ಲಿ ನೋಡಲಿ.. ನಿನ್ನನ್ನೇ ಕಾಣುವೆ.. ಅಪ್ಪು ಜೊತೆ ಹಾಡಿದ ವಿಡಿಯೋ ಹಂಚಿಕೊಂಡ ರಾಘವೇಂದ್ರ ರಾಜ್​ಕುಮಾರ್ - last memory

ರಾಘವೇಂದ್ರ ರಾಜ್​ಕುಮಾರ್​, ಪುನೀತ್​ ಜೊತೆಯಾಗಿ "ಎಲ್ಲೆಲ್ಲಿ ನೋಡಲಿ ನಿನ್ನನ್ನೇ ಕಾಣುವೆ" ಎಂಬ ಡಾ.ರಾಜಕುಮಾರ್ ಅವರ​ ಸಿನಿಮಾ ಗೀತೆಯನ್ನು ಜೊತೆಯಾಗಿ ಹಾಡಿದ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ragavendra rajkumar shared a video with puneeth rajkumar
ಅಪ್ಪು ಜೊತೆ ಹಾಡಿದ ಹಾಡಿನ ವಿಡಿಯೋ ಹಂಚಿಕೊಂಡ ರಾಘವೇಂದ್ರ ರಾಜ್​ಕುಮಾರ್
author img

By

Published : Nov 4, 2021, 7:34 PM IST

Updated : Nov 4, 2021, 7:49 PM IST

ಬೆಂಗಳೂರು: ಯುವರತ್ನ ಪುನೀತ್​ ರಾಜ್​ಕುಮಾರ್ ಅಕಾಲಿಕ ನಿಧನ ಅವರ ಕುಟುಂಬ ಮಾತ್ರವಲ್ಲದೇ, ಅಭಿಮಾನಿಗಳ ಹೃದಯವನ್ನೂ ಘಾಸಿಗೊಳಿಸಿದೆ. ಪುನೀತ್​ ನಮ್ಮನ್ನಗಲಿ ಏಳು ದಿನ ಕಳೆದರೂ ಅವರ ನೆನಪು ಮಾತ್ರ ಎಲ್ಲರನ್ನೂ ಇನ್ನೂ ಕಾಡುತ್ತಿದೆ.

ಅಪ್ಪು ಜೊತೆ ಹಾಡಿದ ಹಾಡಿನ ವಿಡಿಯೋ ಹಂಚಿಕೊಂಡ ರಾಘವೇಂದ್ರ ರಾಜ್​ಕುಮಾರ್

ಪ್ರೀತಿಯ ಅಪ್ಪು ರಾಜ್ ಕುಟುಂಬದಲ್ಲಿ ಎಲ್ಲರ ಮುದ್ದಿನ ಮಗನಾಗಿದ್ದ. ಸಹೋದರರಾದ ರಾಘವೇಂದ್ರ ರಾಜ್​ಕುಮಾರ್​, ಶಿವರಾಜ್​ಕುಮಾರ್​ ಅವರು ಅಪ್ಪುನನ್ನು ಅವರ ಮಗನಂತೆ ಕಾಣುತ್ತಿದ್ದರು. ರಾಘವೇಂದ್ರ ರಾಜ್​ಕುಮಾರ್​ ಅವರಿಗೆ ಅಪ್ಪು ಕಣ್ಮರೆಯನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ಕಾರಣ ಈ ಹಿಂದೆ ಅವರು ಅಪ್ಪು ಜೊತೆಯಲ್ಲಿ ಹಾಡಿದ್ದ ಹಾಡಿನ ತುಣುಕೊಂದನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಹಳೆಯ ನೆನಪನ್ನು ಹಂಚಿಕೊಂಡಿದ್ದಾರೆ.

ಸಂಬಂಧಿಕರ ಮನೆಯ ಮಗುವಿನ ಜನ್ಮದಿನದ ಕಾರ್ಯಕ್ರಮದಲ್ಲಿ ರಾಘವೇಂದ್ರ ರಾಜ್​ಕುಮಾರ್​ ಮತ್ತು ಪುನೀತ್​ ಜೊತೆಯಾಗಿ "ಎಲ್ಲೆಲ್ಲಿ ನೋಡಲಿ ನಿನ್ನನ್ನೇ ಕಾಣುವೆ" ಎಂಬ ಅವರ ತಂದೆ ಡಾ.ರಾಜಕುಮಾರ್ ಅವರ​ ಸಿನಿಮಾ ಗೀತೆಯನ್ನು ಜೊತೆಯಾಗಿ ಹಾಡಿದ ವಿಡಿಯೋವನ್ನು ಹಂಚಿಕೊಂಡು, ಇದು ನಾನು ಮತ್ತು ಅಪ್ಪು ಜೊತೆಯಾಗಿ ಹಾಡಿದ ಹಾಡಿನ ಕೊನೆಯ ವಿಡಿಯೋಗಳಲ್ಲೊಂದು ಎಂದು ಬರೆದುಕೊಂಡಿದ್ದಾರೆ.

ಅಲ್ಲದೇ, ಮರೆಯಲಾಗದ ನೆನಪುಗಳು, ಮಿಸ್​ ಯೂ ಮಗನೇ ಅಂತಾ ರಾಘವೇಂದ್ರ ರಾಜ್​ಕುಮಾರ್​ ಅವರು ಅಪ್ಪು ಜತೆಗಿನ ದಿನಗಳನ್ನು ಸ್ಮರಿಸಿದ್ದಾರೆ.

Last Updated : Nov 4, 2021, 7:49 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.