ಹಲವು ಸಿನಿಮಾಗಳನ್ನ ಮಾಡಿ ಅಪಾರ ಅಭಿಮಾನಿಗಳಿಂದ ಸ್ಯಾಂಡಲ್ ವುಡ್ ಅನ್ನ ಸಿಂಡ್ರೆಲಾ ಎಂದು ಕರೆಯಿಸಿಕೊಂಡಿರುವ ನಟಿ ರಾಧಿಕಾ ಪಂಡಿತ್ ನಿನ್ನೆಯಷ್ಟೇ ತಮ್ಮ 38ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ವರ್ಷ ನನ್ನ ಹುಟ್ಟು ಹಬ್ಬವನ್ನು ಆಚರಣೆ ಮಾಡಿಕೊಳ್ಳುತ್ತಿಲ್ಲ ಎಂದು ತಮ್ಮ ಅಭಿಮಾನಿಗಳಲ್ಲಿ ಹೇಳಿಕೊಂಡಿದ್ದರು. ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಗಲಿಕೆಯಿಂದಾಗಿ ಸಾಕಷ್ಟು ತಾರೆಯರು ತಮ್ಮ ಹುಟ್ಟು ಹಬ್ಬ ಆಚರಿಸಿಕೊಂಡಿಲ್ಲ, ಅಂತೆಯೇ ರಾಧಿಕಾ ಪಂಡಿತ್ ಕೂಡ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.
ಸದಾ ಮುದ್ದಾದ ನಗುವಿನಂದಲೇ ಅಭಿಮಾನಿಗಳಿಗೆ ಇಷ್ಟ ಆಗುವ ರಾಧಿಕಾ ಪಂಡಿತ್, ಪತಿ ಯಶ್, ಮಕ್ಕಳಾದ ಯಥರ್ವ್ ಹಾಗೂ ಪುತ್ರಿ ಐರಾ ಜೊತೆ ರಾಧಿಕಾ ಪಂಡಿತ್ ಸರಳವಾಗಿ ಹುಟ್ಟಿ ಹಬ್ಬ ಆಚರಿಸಿಕೊಂಡಿದ್ದಾರೆ. ಸಿನಿಮಾ ಕೆಲಸದ ನಿಮಿತ್ತ ಮುಂಬಯಿನಲ್ಲಿದ್ದ ಯಶ್, ಪತ್ನಿ ರಾಧಿಕಾ ಪಂಡಿತ್ ಬರ್ತ್ ಡೇ ನಿಮಿತ್ತ ಬೆಂಗಳೂರಿಗೆ ಬಂದು , ಮುದ್ದಿನ ಮಡದಿಯ ಬರ್ತ್ ಡೇಯನ್ನ ಸೆಲೆಬ್ರೆಟ್ ಮಾಡಿದ್ದಾರೆ. ರಾಧಿಕಾ ಪಂಡಿತ್ ಹುಟ್ಟು ಹಬ್ಬದಲ್ಲಿ ಯಶ್ ಕುಟುಂಬ ಹಾಗು ರಾಧಿಕಾ ಪಂಡಿತ್ ಕುಟುಂಬ ಹಾಗೂ ಆಪ್ತರು ಮಾತ್ರ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎನ್ನಲಾಗಿದೆ. ಸದ್ಯ ರಾಧಿಕಾ ಪಂಡಿತ್ ಫ್ಯಾಮಿಲಿ ಜೊತೆ ಹುಟ್ಟು ಹಬ್ಬ ಆಚರಿಸಿಕೊಂಡಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
2008ರಲ್ಲಿ ತೆರೆಗೆ ಬಂದ ಮೊಗ್ಗಿನ ಮನಸು ಸಿನಿಮಾ ಮೂಲಕ ರಾಧಿಕಾ ಪಂಡಿತ್ ಸಾಂಡಲ್ ವುಡ್ಗೆ ಪದಾರ್ಪಣೆ ಮಾಡಿದ್ದರು. ಮೊದಲ ಸಿನಿಮಾದಲ್ಲೇ ಭರ್ಜರಿ ಯಶಸ್ಸು ಕಂಡ ನಂತರ ಸ್ಯಾಂಡಲ್ವುಡ್ನಲ್ಲಿ ರಾಧಿಕಾ ಪಂಡಿತ್ ಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ದರು. ಸದ್ಯ ಮದುವೆಯಾದ ಬಳಿಕ ಮಕ್ಕಳಾದ ಯಥರ್ವ್ ಹಾಗೂ ಪುತ್ರಿ ಐರಾ ಆರೈಕೆ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ. ಮತ್ತೊಂದು ಕಡೆ ರಾಧಿಕಾ ಪಂಡಿತ್ ಮತ್ತೆ ಕಮ್ ಬ್ಯಾಕ್ ಮಾಡಲಿ ಅನ್ನೋದು ಅವರ ಅಭಿಮಾನಿಗಳ ಆಸೆಯಾಗಿದೆ.
ಓದಿ :ಸದ್ದಿಲ್ಲದೆ 'ಎದ್ದೇಳು ಮಂಜುನಾಥ- 2' ಸಿನಿಮಾ ಕಂಪ್ಲೀಟ್ ಮಾಡಿದ 'ಮಠ' ಗುರುಪ್ರಸಾದ್