ಹೈದರಾಬಾದ್: ಬಾಹುಬಲಿ ಖ್ಯಾತಿಯ ಡಾರ್ಲಿಂಗ್ ಪ್ರಭಾಸ್ ಅವರ 20ನೇ ಸಿನಿಮಾ 'ರಾಧೆಶ್ಯಾಮ್' ಚಿತ್ರದ ಟೀಸರ್ ಪ್ರೇಮಿಗಳ ದಿನವಾದ ಇಂದು ಬಿಡುಗಡೆಯಾಗಿದೆ.
ಯೂರೋಪ್ನಲ್ಲಿ 1970 ರಲ್ಲಿ ನಡೆದ ಪ್ರೇಮಕಥೆಯೊಂದನ್ನು ಆಧರಿಸಿ ರಾಧೆಶ್ಯಾಮ್ ಚಿತ್ರ ಮೂಡಿಬರಲಿದ್ದು, ಪ್ರಭಾಸ್ ಜೊತೆ ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸಿದ್ದಾರೆ. ನಿರ್ದೇಶಕ ರಾಧಾಕೃಷ್ಣ ಕುಮಾರ್ ಆ್ಯಕ್ಷನ್ ಕಟ್ ಹೇಳಿರುವ ಈ ಸಿನಿಮಾ 2021ರ ಜುಲೈ 30ರಂದು ಬಿಡುಗಡೆಯಾಗುತ್ತಿರುವುದಾಗಿ ಪ್ರಭಾಸ್ ಹೇಳಿದ್ದಾರೆ.

ಈ ಪ್ರೇಮಿಗಳ ದಿನವನ್ನು 'ರಾಧೆಶ್ಯಾಮ್'ನ ಒಂದು ನೋಟದೊಂದಿಗೆ ಆಚರಿಸಿ. ಜುಲೈ 30 ರಂದು ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ಕಾಣಲಿದೆ ಎಂದು ಟೀಸರ್ ಹಂಚಿಕೊಳ್ಳುವ ಮೂಲಕ ಪ್ರಭಾಸ್, ಅಭಿಮಾನಿಗಳಿಗೆ ವ್ಯಾಲಂಟೈನ್ಸ್ ಡೇ ಗಿಫ್ಟ್ ನೀಡಿದ್ದಾರೆ.
- " class="align-text-top noRightClick twitterSection" data="">
ಯುವಿ ಕ್ರಿಯೇಷನ್ಸ್ ಮತ್ತು ಗೋಪಿಕೃಷ್ಣ ಫಿಲ್ಮ್ ಬ್ಯಾನರ್ ಅಡಿ ನಿರ್ಮಾಣವಾಗಿರುವ ರಾಧೆಶ್ಯಾಮ್, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ - ಈ ನಾಲ್ಕು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
- " class="align-text-top noRightClick twitterSection" data="
">