ETV Bharat / sitara

ಶ್ವೇತಾ ಪ್ರಸಾದ್ ಹೊಸ ಫೋಟೊ ಶೂಟ್... ಅಭಿಮಾನಿಗಳ ಹೃದಯಕ್ಕೆ ಲಗ್ಗೆಯಿಟ್ಟ ನಟಿ - ಶ್ವೇತಾ ಹೊಸ ಫೋಟೋಶೂಟ್

ಕಿರುತೆರೆಯಿಂದ ರಾಜ್ಯದ ಜನರಿಗೆ ಪರಿಚಯವಾದ ಆರ್ ​ಜೆ ಪ್ರದೀಪ್ ಪತ್ನಿ ಶ್ವೇತಾ ಆರ್​. ಪ್ರಸಾದ್​​​ ಇದೀಗ ಹೊಸ ಫೋಟೊ ಶೂಟ್ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದಾರೆ. ಶ್ವೇತಾ 'ಕಳ್ಬೆಟ್ಟದ ದರೋಡೆಕೋರರು' ಚಿತ್ರದ ಮೂಲಕ ಬೆಳ್ಳಿತೆರೆಗೂ ಕಾಲಿಟ್ಟಿದ್ದಾರೆ.

ಶ್ವೇತಾ ಪ್ರಸಾದ್
author img

By

Published : Sep 12, 2019, 12:51 PM IST

'ರಾಧಾರಮಣ' ಧಾರಾವಾಹಿ ರಾಧಾ ಟೀಚರ್ ಆಗಿ ಕಿರುತೆರೆ ವೀಕ್ಷಕರ ಗಮನ ಸೆಳೆದಿರುವ ಶ್ವೇತಾ ಆರ್. ಪ್ರಸಾದ್ ಇದೀಗ ಹೊಸ ಫೋಟೊ ಶೂಟ್ ಮೂಲಕ ಅಭಿಮಾನಿಗಳ ಕಣ್ಮನ ಸೆಳೆದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಮುದ್ದು ಮುಖದ ಚೆಲುವೆ ತಮ್ಮ ಫೋಟೋಗಳ ಮೂಲಕ ಅಭಿಮಾನಿಗಳ ಮನಕ್ಕೆ ಮತ್ತೊಮ್ಮೆ ಲಗ್ಗೆಯಿಟ್ಟಿದ್ದಾರೆ.

Shwetha R Prasad
ಶ್ವೇತಾ ಪ್ರಸಾದ್ ಹೊಸ ಫೋಟೋಶೂಟ್

'ಶ್ರೀರಸ್ತು ಶುಭಮಸ್ತು' ಧಾರಾವಾಹಿಯ ಜಾಹ್ನವಿ ಆಲಿಯಾಸ್ ಜಾನು ಆಗಿ ಮನ ಸೆಳೆದಿದ್ದ ಈ ಶ್ವೇತ ಸುಂದರಿ ಮತ್ತೆ ರಮಣನ ಮನದನ್ನೆ ಆರಾಧನಾ ಆಗಿ ಬದಲಾದರು. ಧಾರಾವಾಹಿಯ ಕಾಂಟ್ರಾಕ್ಟ್​​ ಮುಗಿದಿದ್ದರಿಂದ ಧಾರಾವಾಹಿಯಿಂದ ಅರ್ಧದಿಂದ ಹೊರಬಂದರು. ಆದರೂ ಮೊದಲ ಧಾರಾವಾಹಿಯಲ್ಲೇ ಸಾವಿರಾರು ಅಭಿಮಾನಿಗಳನ್ನು ಪಡೆದಿದ್ದಾರೆ ಈ ಸುಂದರಿ. ಈ ಧಾರಾವಾಹಿ ಜೊತೆಜೊತೆಗೆ 'ಕಳ್ಬೆಟ್ಟದ ದರೋಡೆಕೋರರು' ಸಿನಿಮಾದ ನಾಯಕಿಯಾಗಿ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿರುವ ಶ್ವೇತಾ ಇದೀಗ ಪೋಟೋ ಶೂಟ್ ಮೂಲಕ ಸುದ್ದಿಯಾಗಿದ್ದಾರೆ. ಇದರೊಂದಿಗೆ ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗಾಗಿ ಪತಿ ಆರ್​​​​​​​​​ಜೆ ಪ್ರದೀಪ್ ಮತ್ತು ಸ್ನೇಹಿತರ ಸಹಾಯದಿಂದ ಸಹಾಯ ಹಸ್ತ ಕೂಡಾ ಚಾಚಿದ್ದಾರೆ.

Shwetha R Prasad
ಶ್ವೇತಾ ಆರ್​. ಪ್ರಸಾದ್​​​

Intro:Body:
ರಾಧಾ ರಮಣ ಧಾರಾವಾಹಿಯ ಆರಾಧನಾ ಳಾಗಿ ಕಿರುತೆರೆ ವೀಕ್ಷಕರ ಮನ ಸೆಳೆದಿರುವ ಶ್ವೇತಾ ಆರ್.ಪ್ರಸಾದ್ ಇದೀಗ ಹೊಸ ಫೋಟೋ ಶೂಟ್ ಮೂಲಕ ಅಭಿಮಾನಿಗಳ ಕಣ್ ಸೆಳೆದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಮುದ್ದು ಮುಖದ ಚೆಲುವೆ ತಮ್ಮ ಹೊಸ ಫೋಟೋಗಳ ಮೂಲಕ ಅಭಿಮಾನಗಳ ಮನಕ್ಕೆ ಮತ್ತೊಮ್ಮೆ ಲಗ್ಗೆಯಿಟ್ಟಿದ್ದಾರೆ.

ಶ್ರೀರಸ್ತು ಶುಭಮಸ್ತು ಧಾರಾವಾಹಿಯ ಜಾಹ್ನವಿ ಆಲಿಯಾಸ್ ಜಾನು ಆಗಿ ಮನ ಸೆಳೆದಿದ್ದ ಈ ಶ್ವೇತ ಸುಂದರಿ ಮತ್ತೆ ರಮಣನ ಮನದನ್ನೆ ಆರಾಧನಾಳಾಗಿ ಬದಲಾದರು. ಅರ್ಥಾತ್ ರಾಧಾ ರಮಣ ಧಾರಾವಾಹಿಯ ನಾಯಕಿ ರಾಧಾ ಮಿಸ್ ಆಗಿ ಮನ ಮಿಂಚಿದ್ದ ಶ್ವೇತಾ ಕಿರುತೆರೆಯ ತುಂಬಾ ಮನೆ ಮಾತಾದರು.

ಜಾನು ಆಲಿಯಾಸ್ ಜಾಹ್ನವಿಯಾಗಿ ನಟನಾ ಕ್ಷೇತ್ರಕ್ಕೆ ಕಾಲಿಟ್ಟ ಚೆಂದುಳ್ಳಿ ಚೆಲುವೆ ಶ್ವೇತಾ ಮೊದಲ ಧಾರಾವಾಹಿಯಲ್ಲೇ ನೂರಾರು ಅಭಿಮಾನಿಗಳನ್ನು ಪಡೆದಿದ್ದಾರೆ. ತದ ನಂತರ ಆರಾಧನಾ ಪಾತ್ರಕ್ಕೆ ಜೀವ ತುಂಬಿರುವ ಆಕೆ ಅಲ್ಲೂ ಕೂಡಾ ತಮ್ಮದೇ ಆದ ಅಭಿಮಾನಿಗಳನ್ನು ಪಡೆದಿದ್ದಾರೆ.
ಜೊತೆಗೆ ಕಳ್ಬೆಟ್ಟದ ದರೋಡೆಕೋರರು ಸಿನಿಮಾದ ನಾಯಕಿಯಾಗಿ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿರುವ ಶ್ವೇತಾ ಇದೀಗ ಪೋಟೋ ಶೂಟ್ ಮೂಲಕ ಸುದ್ದಿಯಾಗಿದ್ದಾರೆ.

ಇದರ ಜೊತೆಗೆ ಮತ್ತೊಂದು ಮಹತ್ಕಾರ್ಯದ ಮೂಲಕ ಶ್ವೇತಾ ವೀಕ್ಷಕರ ಮನದಲ್ಲಿ ಶಾಶ್ವತ ಸ್ಥಾನವನ್ನು ಪಡೆದಿದ್ದಾರೆ. ತಮ್ಮ ಪತಿ ಆರ್ ಜೆ ಪ್ರದೀಪ್ ಮತ್ತು ಸ್ನೇಹಿತರ ಸಹಾಯದಿಂದ ನೆರೆ ಸಂತ್ರಸ್ತರಿಗೆ ಸಹಾಯ ಹಸ್ತವನ್ನು ಇವರು ನೀಡಿದ್ದಾರೆ.
ಹೌದು. ಇತ್ತೀಚೆಗಷ್ಟೇ ಉತ್ತರ ಕರ್ನಾಟಕದಲ್ಲಿ ನೆರೆ ಪ್ರವಾಹದಿಂದಾಗಿ ನೊಂದ ಸಂತ್ರಸ್ತರಿಗೆ ಸಹಾಯವನ್ನು ಮಾಡುವ ಮಾಡಿರುವ ಶ್ವೇತಾ ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿತ್ತು.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.