ಸ್ಯಾಂಡಲ್ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ 'ಶಬರಿ ಇನ್ ಸರ್ಚ್ ಆಫ್ ರಾವಣ' ಎಂಬ ಚಿತ್ರದಲ್ಲಿ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಗೊತ್ತಿತ್ತೇ ಹೊರತು, ಚಿತ್ರದಲ್ಲಿ ಅವರ ಪಾತ್ರವೇನು, ಹೇಗೆ ಕಾಣುತ್ತಾರೆ ಮುಂತಾದ ಯಾವುದೇ ವಿಷಯಗಳು ಬಹಿರಂಗವಾಗಿರಲಿಲ್ಲ. ಹೀಗಿರುವಾಗಲೇ, ಭಾನುವಾರ ರಚಿತಾ ರಾಮ್ ಹುಟ್ಟುಹಬ್ಬದ ಸಲುವಾಗಿ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ರಚಿತಾ ವಿಭಿನ್ನ ಲುಕ್ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಶಬರಿ ಚಿತ್ರದಲ್ಲಿ ರಚಿತಾಗೆ ಎರಡು ಲುಕ್ಗಳಿವೆಯಂತೆ. ಅದರಲ್ಲೊಂದು ಬಾಬ್ ಕಟ್ ಲುಕ್ ಆಗಿದ್ದು, ಈ ಪೋಸ್ಟರ್ ಬಿಡುಗಡೆಯಾಗಿದೆ. ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡದವರು ರಚಿತಾಗೆ ಶುಭ ಕೋರಿದ್ದಾರೆ. ಎರಡರಲ್ಲಿ ಒಂದೇನೋ ಗೊತ್ತಾಯಿತು, ಇನ್ನೊಂದು ಹೇಗಿರುತ್ತದೆ ಎಂಬ ಪ್ರಶ್ನೆಗೆ ಇನ್ನೂ ಸ್ವಲ್ಪ ದಿನಗಳ ಕಾಲ ಕಾಯಬೇಕು. ಇನ್ನೊಂದು ಲುಕ್ನ್ನು ಚಿತ್ರತಂಡದವರು ಗೌಪ್ಯವಾಗಿ ಇಟ್ಟಿದ್ದು, ಬಿಡುಗಡೆಯ ಸಂದರ್ಭದಲ್ಲಿ ಹೊರಬೀಳುವ ಸಾಧ್ಯತೆ ಇದೆ.
- — Rachita Ram (@RachitaRamDQ) October 3, 2021 " class="align-text-top noRightClick twitterSection" data="
— Rachita Ram (@RachitaRamDQ) October 3, 2021
">— Rachita Ram (@RachitaRamDQ) October 3, 2021
ಶಬರಿ ಚಿತ್ರವನ್ನು ನವೀನ್ ಶೆಟ್ಟಿ ನಿರ್ದೇಶಿಸಿದ್ದಾರೆ. ಕೆಲವು ತಿಂಗಳುಗಳ ಹಿಂದೆಯೇ ಚಿತ್ರೀಕರಣ ಪ್ರಾರಂಭವಾಗಿದ್ದು, ಮೈಸೂರು ಮುಂತಾದ ಕಡೆ ಶೇ. 30ರಷ್ಟು ಚಿತ್ರೀಕರಣ ಈಗಾಗಲೇ ಮುಗಿದಿದೆ. ಆಯುಧ ಪೂಜೆ ಬಳಿಕ ಎರಡನೆಯ ಹಂತದ ಚಿತ್ರೀಕರಣ ಶುರುವಾಗಲಿದೆ. ಈ ಚಿತ್ರದಲ್ಲಿ ರಚಿತಾ ಜೊತೆಗೆ ರಘು ಮುಖರ್ಜಿ ಸಹ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ಶಬರಿ ಪಾತ್ರದಲ್ಲಿ ರಚಿತಾ ಕಾಣಿಸಿಕೊಂಡರೆ, ರಾವಣನ ಪಾತ್ರ ಯಾರು ಮಾಡುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಇದೆ. ಕೆಕೆ ಪ್ರೊಡಕ್ಷನ್ಸ್ ಮತ್ತು ಎಟಿಎಂ ಸ್ಟುಡಿಯೋಸ್ನಡಿ ಕಿರಣ್ ಕುಮಾರ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ಇದನ್ನೂ ಓದಿ: ಅಪ್ಪನ ಹಾದಿಯಲ್ಲಿ ಅಭಿ: 'ಬ್ಯಾಡ್ ಮ್ಯಾನರ್ಸ್'ನಲ್ಲಿ ಪೊಲೀಸ್ ಅಧಿಕಾರಿ