ಖ್ಯಾತ ನಟ ಆರ್. ಮಾಧವನ್ ಅವರಿಗೆ ಸಿನಿಮಾ ಮತ್ತು ಕಲೆಯ ಸಾಧನೆಗಳನ್ನು ಗುರುತಿಸಿ ಡಾಕ್ಟರ್ ಆಫ್ ಲಿಟರೇಚರ್ ಗೌರವ ಲಭಿಸಿದೆ.
ಮಾಧವನ್ ತಮಿಳು ಮತ್ತು ಹಿಂದಿ ಸಿನಿಮಾಗಳ ಮೂಲಕ ಹೆಸರು ಮಾಡಿದ್ದಾರೆ. ಇವರ ಸಾಧನೆ ಗುರುತಿಸಿರುವ ಕೋಲ್ಕತಾದ ಪಾಟೀಲ್ ಎಜುಕೇಶನ್ ಸೊಸೈಟಿ ಈ ಗೌರವ ಡಾಕ್ಟರೇಟ್ ನೀಡಿದೆ.
![ನಟ ಮಾಧವನ್ಗೆ 'ಡಾಕ್ಟರ್ ಆಫ್ ಲಿಟರೇಚರ್' ಗೌರವ](https://etvbharatimages.akamaized.net/etvbharat/prod-images/10664847_646_10664847_1613565776147.png)
ಈ ಗೌರವದಿಂದ ನಾನು ವಿನಮ್ರನಾಗಿದ್ದೇನೆ. ಅಲ್ಲದೆ ಈ ಡಾಕ್ಟರೇಟ್ ನನ್ನ ಮುಂದಿನ ಹೆಜ್ಜೆಗೆ ಹಾಗೂ ಮುಂದಿನ ಪ್ರಾಜೆಕ್ಟ್ಗಳಿಗಾಗಿ ಸ್ಫೂರ್ತಿದಾಯಕವಾಗಿದೆ ಎಂದು ಮಾಧವನ್ ಸಂತಸ ವ್ಯಕ್ತಪಡಿಸಿದ್ದಾರೆ.
ಸದ್ಯ ನಟ ಮಾಧವನ್ ತಮ್ಮ ನಿರ್ದೇಶನದ ರಾಕೆಟ್ರಿ : ದಿ ನಂಬಿ ಎಫೆಕ್ಟ್ ಸಿನಿಮಾದ ರಿಲೀಸ್ಗೆ ಕಾಯುತ್ತಿದ್ದಾರೆ. ಈ ಸಿನಿಮಾವು ವಿಜ್ಞಾನಿ ನಂಬಿ ನಾರಾಯಣನ್ ಜೀವನ ಆಧಾರಿತವಾಗಿದೆ.