ETV Bharat / sitara

ಜೇಮ್ಸ್ ನೋಡಿ ಭಾವುಕರಾದ ಗೀತಾ ಶಿವರಾಜ್.. ಅಪ್ಪು ಬಗ್ಗೆ ಉಪೇಂದ್ರ ಹೇಳಿದ್ದೇನು? - punithrajkumar kannada cinema

ಜೇಮ್ಸ್ ಚಿತ್ರವನ್ನು ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್, ಪತ್ನಿ ಗೀತಾ ಶಿವರಾಜ್ ಕುಮಾರ್ ಹಾಗು ರಿಯಲ್ ಸ್ಟಾರ್ ಉಪೇಂದ್ರ ಬೆಂಗಳೂರಿನ ತ್ರಿವೇಣಿ ಚಿತ್ರಮಂದಿರದಲ್ಲಿ ಸಿನೆಮಾ ವೀಕ್ಷಿಸಿದ್ದಾರೆ.

punithraj-kumar-kannada-james-movie-reaction-of-upendra-shivarajkumar
ಜೇಮ್ಸ್ ನೋಡಿ ಭಾವುಕರಾದ ಗೀತಾ ಶಿವರಾಜ್! ಅಪ್ಪು ಬಗ್ಗೆ ಉಪೇಂದ್ರ ಹೇಳಿದ್ದೇನು ?
author img

By

Published : Mar 26, 2022, 10:58 PM IST

Updated : Mar 26, 2022, 11:09 PM IST

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ಜೇಮ್ಸ್ ಸಿನಿಮಾ ಬಿಡುಗಡೆಗೊಂಡು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಪವರ್ ಸ್ಟಾರ್ ನಟನೆಯ ಕೊನೆಯ ಚಿತ್ರವಾಗಿರೋ, ಈ ಚಿತ್ರದಲ್ಲಿ ಅಪ್ಪು ಖಡಕ್ ಆರ್ಮಿ ಆಫೀಸರ್ ಆಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ನೂರು ಕೋಟಿ ಕ್ಲಬ್ ಸೇರಿರುವ ಜೇಮ್ಸ್ ಚಿತ್ರವನ್ನು ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್, ಪತ್ನಿ ಗೀತಾ ಶಿವರಾಜ್ ಕುಮಾರ್ ಹಾಗು ರಿಯಲ್ ಸ್ಟಾರ್ ಉಪೇಂದ್ರ ಬೆಂಗಳೂರಿನ ತ್ರಿವೇಣಿ ಚಿತ್ರಮಂದಿರದಲ್ಲಿ ಸಿನೆಮಾ ವೀಕ್ಷಿಸಿದ್ದಾರೆ.

ಜೇಮ್ಸ್ ನೋಡಿ ಭಾವುಕರಾದ ಗೀತಾ ಶಿವರಾಜ್, ಶಿವರಾಜ್ ಕುಮಾರ್ ..

ಅಪ್ಪುಗೆ ಡೈರೆಕ್ಷನ್ ಮಾಡೋ ಆಸೆ ಹಾಗೆ ಉಳಿಯಿತು ಉಪೇಂದ್ರ : ಔಟ್ ಆ್ಯಂಡ್ ಔಟ್ ಆ್ಯಕ್ಷನ್ ಜೊತೆಗೆ ಸ್ನೇಹ ಬಾಂಧವ್ಯದ ಕಥೆ ಹೊಂದಿರುವ ಜೇಮ್ಸ್ ಸಿನಿಮಾ ನೋಡಿದ ಬಳಿಕ ಮಾತನಾಡಿದ ಉಪೇಂದ್ರ, ಯಾಕೆ ಅಪ್ಪು ಅವರನ್ನು ದೇವರಿಗೆ ಹೋಲಿಸಿದ್ದಾರೆ ಅನ್ನೋದಕ್ಕೆ ಈ ಸಿನಿಮಾ ನೋಡಿದರೆ ಗೊತ್ತಾಗುತ್ತೆ. ಸಿನಿಮಾದಲ್ಲಿ ಅವರ ಆ್ಯಕ್ಟಿಂಗ್, ಎಕ್ಸ್ ಪ್ರೆಶನ್, ಅವರ ಸ್ಟೈಲ್ ನೋಡಿ ನಿಜವಾಗಿಯೂ ನನಗೆ ಅಚ್ಚರಿಯಾಯಿತು. ಅಪ್ಪು ಅವರಿಗೆ ನಿರ್ದೇಶನ ಮಾಡುವ ಕನಸು ಹಾಗೇ ಉಳಿಯಿತು ಅಂತಾ ಉಪೇಂದ್ರ ಭಾವುಕರಾದರು. ಚಿತ್ರದಲ್ಲಿನ ಅದ್ಧೂರಿ ಮೇಕಿಂಗ್, ನಿರ್ದೇಶನದ ಬಗ್ಗೆ ಉಪೇಂದ್ರ ಮೆಚ್ಚುಗೆ ವ್ಯಕ್ತಪಡಿಸಿದರು. ಶಿವರಾಜ್ ಕುಮಾರ್ ಧ್ವನಿ ಕೂಡ ಬಹಳ ಚೆನ್ನಾಗಿ ಮೂಡಿ ಬಂದಿದೆ. ನಮಗೆ ಅಪ್ಪು ಹಾಗು ಶಿವಣ್ಣನ ಒಟ್ಟಿಗೆ ನೋಡಿದ ಅನುಭವ ಆಯಿತು ಎಂದು ಉಪೇಂದ್ರ ಇದೇ ವೇಳೆ ಹೇಳಿದ್ದಾರೆ.

ಜೇಮ್ಸ್ ನೋಡಿ ಭಾವುಕರಾದ ಗೀತಾ ಶಿವರಾಜ್.. ಅಪ್ಪು ಬಗ್ಗೆ ಉಪೇಂದ್ರ ಹೇಳಿದ್ದೇನು?

ಉಪೇಂದ್ರ ನಾನು ಒಟ್ಟಿಗೆ ಸಿನಿಮಾ ಮಾಡಬೇಕು ಅನ್ನೋದು ಅಪ್ಪು ಆಸೆಯಾಗಿತ್ತು : ಇನ್ನು ಶಿವರಾಜ್ ಕುಮಾರ್ ಮಾತನಾಡಿ, ಅಪ್ಪು ಸಿನಿಮಾನ್ನ ಫಸ್ಟ್‌‌ ಡೇ ಫಸ್ಟ್ ಶೋ ನೋಡಿದೆ, ನಾನು ಮತ್ತು ಗೀತಾ ಇಂದು ಸಿನಿಮಾ ನೋಡಬೇಕು ಅಂತ ಬಂದಿದ್ದೀವಿ. ನಾನು ಏನ್ ಹೇಳಿ ನನ್ನ ತಮ್ಮನ ಆ್ಯಕ್ಟಿಂಗ್ ಬಗ್ಗೆ. ಅವನ ಬಗ್ಗೆ ಸಾಕಷ್ಟು ಭಾರಿ ಹೇಳಿದ್ದೀನಿ, ಅಪ್ಪು ಇಲ್ಲ ಅನ್ನೋ ನೋವು ಸದಾ ಕಾಡುತ್ತೆ. ಅಪ್ಪು ಇದ್ದಾಗ ಮತ್ತೆ ಓಂ ಸಿನಿಮಾದ ನಂತರ ನಾನು ಮತ್ತು ಉಪೇಂದ್ರ ಸೇರಿ ಜೈಲು ಎಂಬ ಸಿನಿಮಾ ಮಾಡಬೇಕು ಎಂದು ಹೇಳುತ್ತಿದ್ದ. ನಾನು ಮದುವೆ ಮಾಡಿಕೊಂಡು ಬಂದಾಗ ಅವನು ತುಂಬಾ ಚಿಕ್ಕವನು, ಹೇಗೆ ಮರೆಯಲಿ ಎಂದು ಶಿವರಾಜ್ ಕುಮಾರ್ ಹೇಳಿದರು. ಜೇಮ್ಸ್ ಸಿನಿಮಾ ನೋಡಿ ಭಾವುಕರಾದ ಗೀತಾ ಶಿವರಾಜ್ ಕುಮಾರ್, ಸಿನಿಮಾ ನೋಡ್ತಿದ್ರೆ ಸಾಕಷ್ಟು ನೆನಪಾಗುತ್ತೆ, ಅವನು ಯಾವಾಗಲೂ ಸ್ಟಾರ್ ಎಂದು ಭಾವುಕರಾದರು.

ಓದಿ:ಅಭಿಮಾನಿಗಳ ಜೊತೆ ಜೇಮ್ಸ್ ಸಿನಿಮಾ ವೀಕ್ಷಿಸಿದ ಸೆಂಚುರಿ ಸ್ಟಾರ್ ಹಾಗು ರಿಯಲ್ ಸ್ಟಾರ್

Last Updated : Mar 26, 2022, 11:09 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.