ETV Bharat / sitara

ಪ್ಲಾಸ್ಟಿಕ್ ಬಿಡಿ ಬಟ್ಟೆ ಬ್ಯಾಗ್ ಬಳಸಿ: ಅಭಿಮಾನಿಗಳಲ್ಲಿ ಪುನೀತ್​​ ರಾಜಕುಮಾರ್​​​ ಮನವಿ - punith rajkumar says use cloth bags instead of plastic bags

ಪ್ಲಾಸ್ಟಿಕ್​​​ ಬ್ಯಾಗ್​​ ಬದಲಿಗೆ ಬಟ್ಟೆ ಬ್ಯಾಗ್​ ಬಳಸುವಂತೆ ಅಭಿಮಾನಿಗಳಲ್ಲಿ ಹಾಗೂ ಸಾರ್ವಜನಿಕರಲ್ಲಿ ಪವರ್​​ ಸ್ಟಾರ್​​ ಪುನೀತ್​​ ರಾಜ್​​ಕುಮಾರ್​​ ಮನವಿ ಮಾಡಿದ್ದಾರೆ.

punith rajkumar says use cloth bags instead of plastic bags
ಪ್ಲಾಸ್ಟಿಕ್ ಬಿಡಿ ಬಟ್ಟೆ ಬ್ಯಾಗ್ ಬಳಸಿ
author img

By

Published : Jan 21, 2020, 1:03 AM IST

ಬೆಂಗಳೂರು: ಡಾ.ರಾಜ್​​​​ಕುಮಾರ್ ಅಭಿಮಾನಿಗಳ ಪಾಲಿಗೆ ದೇವರು, ಅಣ್ಣಾವ್ರ ಹಾದಿಯಲ್ಲೇ ಅವರ ಮಕ್ಕಳು ಕೂಡ ಸಾಗಿದ್ದಾರೆ. ಈಗ ಅಭಿಮಾನಿಗಳಲ್ಲಿ ಪರಿಸರದ ಬಗ್ಗೆ ಕಾಳಜಿ ಮೂಡಿಸಲು ಅಣ್ಣಾವ್ರ ಮಕ್ಕಳು ಸಜ್ಜುಗೊಂಡಿದ್ದಾರೆ.

punith rajkumar says use cloth bags instead of plastic bags
ಪ್ಲಾಸ್ಟಿಕ್ ಬಿಡಿ ಬಟ್ಟೆ ಬ್ಯಾಗ್ ಬಳಸಿ

ನಿತ್ಯವೂ ಪ್ಲಾಸ್ಟಿಕ್​​​ ಬ್ಯಾಗ್​​​ಗಳ ಬದಲಿಗೆ ಬಟ್ಟೆ ಬ್ಯಾಗ್​​ ಬಳಕೆ ಮಾಡುವಂತೆ ಅಭಿಮಾನಿಗಳಲ್ಲಿ ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಹೊರಟಿದ್ದಾರೆ. ಅಣ್ಣಾವ್ರ ಹೆಸರಿನಲ್ಲಿ ಪರಿಸರ ಸ್ನೇಹಿ ಬಟ್ಟೆ ಬ್ಯಾಗ್​​ ರೆಡಿ ಮಾಡಿಸಿದ್ದಾರೆ. ಬಟ್ಟೆ ಬ್ಯಾಗಿನ‌ ಮೇಲೆ ಅಣ್ಣಾವ್ರ ಪೋಟೋ ಪ್ರಿಂಟ್ ಮಾಡಿಸಿದ್ದು, ಪ್ರತಿದಿನ ಅಣ್ಣಾವ್ರ ಮನೆಗೆ ಭೇಟಿ ನೀಡುವವರಿಗೆ ಬಟ್ಟೆ ಬ್ಯಾಗ್​ ಉಡುಗೊರೆಯಾಗಿ ನೀಡುವ ಮೂಲಕ ಪ್ಲಾಸ್ಟಿಕ್ ತ್ಯಜಿಸುವಂತೆ ಅಣ್ಣಾವ್ರ ಮಕ್ಕಳು ಮನವಿ ಮಾಡ್ತಿದ್ದಾರೆ. ಇನ್ನು ಈ ಕೈಚೀಲದ ಐಡಿಯಾ ಮೊದಲು ರಾಘಣ್ಣನಿಗೆ ಹೊಳೆದಿದ್ದು, ರಾಘಣ್ಣನ ಕಾರ್ಯಕ್ಕೆ ಶಿವಣ್ಣ ಹಾಗೂ ಅಪ್ಪು ಕೂಡ ಕೈಜೋಡಿಸಿದ್ದಾರೆ. ಅಲ್ಲದೆ ಪ್ಲಾಸ್ಟಿಕ್ ಬಿಟ್ಟು ಬಟ್ಟೆ ಬ್ಯಾಗ್​​​ಗಳನ್ನೇ ಬಳಸಿ ಅಭಿಯಾನದ ಬಗ್ಗೆ ಎಕ್ಸಕ್ಲೂಸಿವ್​ ಆಗಿ ಈಟಿವಿ ಭಾರತ ಜೊತೆ ಪವರ್ ಸ್ಟಾರ್ ಪುನೀತ್ ರಾಜ್​​​​ಕುಮಾರ್ ಮಾತನಾಡಿದ್ದಾರೆ.

ಪ್ಲಾಸ್ಟಿಕ್ ಬಿಡಿ ಬಟ್ಟೆ ಬ್ಯಾಗ್ ಬಳಸಿ
ಪ್ಲಾಸ್ಟಿಕ್ ಬಳಕೆ ನಿಲ್ಲಿಸಿ ಬಟ್ಟೆ ಬ್ಯಾಗ್ ಬಳಸುವಂತೆ ಅಭಿಯಾನ ಶುರು ಮಾಡಿದ್ದು ರಾಘಣ್ಣ. ನಮ್ಮ ಪರಿಸರಕ್ಕೆ ಹಾನಿಕಾರಕವಾಗುವ ವಸ್ತುಗಳನ್ನು ಆದಷ್ಟು ಅವೈಡ್ ಮಾಡುವುದು ನಮ್ಮೆಲ್ಲರ ಕರ್ತವ್ಯ, ಹಾಗಾಗಿ ಯಾರು ಪ್ಲಾಸ್ಟಿಕ್ ಬಳಸಬೇಡಿ, ಎಲ್ಲೆಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ತಡೆಯೋಕೆ ಸಾಧ್ಯವಾಗುತ್ತೋ ಅಂತ ಕಡೆ ಪ್ಲಾಸ್ಟಿಕ್ ಬಳಕೆ ತಡೆಯಿರಿ. ಆದಷ್ಟು ಪ್ಲಾಸ್ಟಿಕ್ ಬಳಕೆ ಕಮ್ಮಿ ಮಾಡೋದು ನಮ್ಮ ಪರಿಸರಕ್ಕೆ ಒಳ್ಳೆಯದು ಎಂದು ಅಪ್ಪು ಅಭಿಮಾನಿಗಳಲ್ಲಿ ಹಾಗೂ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

Intro:ಪ್ಲಾಸ್ಟಿಕ್ ಬಳಕೆ ಕಮ್ಮಿ ಮಾಡಿ ಬಟ್ಟೆ ಬ್ಯಾಗ್ ಬಳಸಿBody:ಅಭಿಮಾನಿಗಳು ಹಾಗೂ ಸಾರ್ವಜನಿಕರಲ್ಲಿ ಮನೆ ಮಾಡಿದ ಪೋಸ್ಟರ್ ಪುನೀತ್ ರಾಜಕುಮಾರ್

ಸತೀಶ ಎಂಬಿConclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.