ETV Bharat / sitara

ಶ್ರೀರಾಘವೇಂದ್ರ ಸ್ವಾಮಿ ಮಠದೊಂದಿಗೆ ನಟ ಪುನೀತ್ ಅವರಿಗಿತ್ತು ಅವಿನಾಭಾವ ಸಂಬಂಧ

ಎಸ್‌ಎನ್‌ಟಿ ಚಿತ್ರಮಂದಿರದ ಮೇಲೆ ನಿಂತು ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ್ದ ಪುನೀತ್, ಅಲ್ಲಿನ ಜನರ ಅಭಿಮಾನಕ್ಕೆ ಋಣಿಯಾಗಿರುವುದಾಗಿ ಹೇಳಿದ್ದರು.

Dr. Subudhendra Thirtha
ಪುನೀತ್​ಗೆ ಸನ್ಮಾನಿಸಿದ ಡಾ.ಸುಬುಧೇಂದ್ರ ತೀರ್ಥರು
author img

By

Published : Oct 29, 2021, 8:01 PM IST

Updated : Oct 29, 2021, 8:09 PM IST

ಡಾ. ರಾಜ್​ಕುಮಾರ್ ಕುಟುಂಬ ಮೊದಲಿನಿಂದಲೂ ಶ್ರೀರಾಘವೇಂದ್ರ ಸ್ವಾಮಿಗಳ ಪರಮ ಭಕ್ತರು. ಇಂದಿಗೂ ಅವರ ಕುಟುಂಬದವರು ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿಗಳ ದರ್ಶನಕ್ಕೆ ಆಗಮಿಸುತ್ತಾರೆ. ಅದರಂತೆ ಇಂದು ಅಗಲಿದ ಪವರ್ ಸ್ಟಾರ್ ಪುನೀತ್​ ರಾಜ್‌ಕುಮಾರ್ ಸಹ ಮಂತ್ರಾಲಯದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು.

dr. subudendra thirtha
ಪುನೀತ್​ಗೆ ಆರ್ಶೀವದಿಸಿದ ಡಾ.ಸುಬುಧೇಂದ್ರ ತೀರ್ಥರು

ಹೀಗಾಗಿ, ಶ್ರೀರಾಘವೇಂದ್ರ ಸ್ವಾಮಿಯವರ ಮೂಲ ಬೃಂದಾವನ ದರ್ಶನ ಪಡೆದುಕೊಂಡು ನಂತರ ಧ್ಯಾನ ಮಾಡುತ್ತಿದ್ದರು. ಸ್ಯಾಂಡಲ್‌ವುಡ್​ನ ದೊಡ್ಡ ನಟ ಸಾಮಾನ್ಯರಂತೆ ರಾಯರ ಬಳಿ ಬಂದು ವಿಶೇಷ ಪೂಜೆ ಸಲ್ಲಿಸುತ್ತಿದ್ದರು.

punith-rajkumar-relationship-with-shri-ragavendra-swamy-mata
ಶ್ರೀಮಠದ ಪೀಠಾಪತಿ ಡಾ.ಸುಬುಧೇಂದ್ರ ತೀರ್ಥರು ಪುನೀತ್‌ ರಾಜ್​ಕುಮಾರ್ ಅವರಿಗೆ ಸನ್ಮಾನಿಸಿರುವುದು

2016ರಲ್ಲಿ 'ದೊಡ್ಮನೆ ಹುಡುಗ' ಸಿನೆಮಾ ಬಿಡುಗಡೆ ಬಳಿಕ ಮಂತ್ರಾಲಯಕ್ಕೆ ಭೇಟಿ ನೀಡಿದ್ದರು. 2020ರಲ್ಲಿ ಪುನೀತ್ ರಾಜ್​ಕುಮಾರ್​ ಶ್ರೀಮಠದಿಂದ ನೀಡಲಾದ ಶ್ರೀ ರಾಘವೇಂದ್ರ ಅನುಗ್ರಹ ಪ್ರಶಸ್ತಿ ಸ್ವೀಕರಿಸಲು ಮಂತ್ರಾಲಯಕ್ಕೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ರಾಯರು ಮತ್ತು ತಮ್ಮ ಕುಟುಂಬಕ್ಕೂ ಇರುವ ಅವಿನಾಭಾವ ಸಂಬಂಧದ ಬಗ್ಗೆ ತಮ್ಮ‌ ಅನಿಸಿಕೆ ಹಂಚಿಕೊಂಡಿದ್ದರು.

ಅಲ್ಲದೇ ಡಾ. ರಾಜ್​ಕುಮಾರ್ ಅಗಲಿಕೆಯ ನಂತರದಲ್ಲಿ ಮರಣೋತ್ತರವಾಗಿ ನೀಡಲಾದ ಅನುಗ್ರಹ ಪ್ರಶಸ್ತಿಯನ್ನ ಪುನೀತ್​ ರಾಜ್​ಕುಮಾರ್ ತಮ್ಮ ಕುಟುಂಬ ಸದಸ್ಯರೊಡನೆ ಆಗಮಿಸಿ ಸ್ವೀಕರಿಸಿದ್ದರು.

ಅನುಗ್ರಹ ಪ್ರಶಸ್ತಿ ಸ್ವೀಕರಿಸಿದ ನಟ ಪುನೀತ್ ರಾಜ್​ಕುಮಾರ್

ನಟ ಜಗ್ಗೇಶ್​ ಜತೆಗೆ 2021 ಏ. 5 ರಂದು ಮಂತ್ರಾಲಯಕ್ಕೆ ಆಗಮಿಸಿ ರಾಯರಿಗೆ ವಿಶೇಷ ಪೂಜೆ ಸಲ್ಲಿಸಿ ಮಠದ ಪೀಠಾಧಿಪತಿಗಳೊಂದಿಗೆ ಕುಶಲೋಪಕಾರಿ ವಿಚಾರಿಸಿ, ಶ್ರೀಗಳ ಆರ್ಶಿವಾದ ಪಡೆದುಕೊಂಡಿದ್ದರು. ಬಳಿಕ ಶ್ರೀಮಠದ ಪೀಠಾಪತಿ ಡಾ.ಸುಬುಧೇಂದ್ರ ತೀರ್ಥರು ಪುನೀತ್‌ಗೆ ಸನ್ಮಾನಿಸಿ, ಆಶೀರ್ವದಿಸಿದ್ದರು. ಅದು ಅವರ ಕೊನೆಯ ಮಂತ್ರಾಲಯ ಭೇಟಿಯಾಗಿತ್ತು. ‌ದೊಡ್ಮನೆ ಹುಡುಗ ಚಿತ್ರ ಬಿಡುಗಡೆ ನಂತರದಲ್ಲಿ ಪ್ರಮೋಷನ್‌ಗಾಗಿ ರಾಯಚೂರಿಗೆ ಅವರು ಆಗಮಿಸಿದ್ದರು.

punith rajkumar
ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ್ದ ಪುನೀತ್

ಆ ಸಂದರ್ಭದಲ್ಲಿ ಎಸ್‌ಎನ್‌ಟಿ ಚಿತ್ರಮಂದಿರದ ಮೇಲೆ ನಿಂತು ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ್ದ ಪುನೀತ್, ಅಲ್ಲಿನ ಜನರ ಅಭಿಮಾನಕ್ಕೆ ಋಣಿಯಾಗಿರುವುದಾಗಿ ಹೇಳಿದ್ದರು.

ಓದಿ: ’’ಸ್ವಲ್ಪ ಮಿಸ್​ ಆಗ್ಬಿಟ್ಟಿದೆ, ಫಸ್ಟ್​ ನಾನು ಹೋಗ್ಬೇಕಿತ್ತು.. ಆದರೆ ಅವನು ಹೋಗ್ಬಿಟ್ಟ‘‘: ತಮ್ಮನ ಅಗಲಿಕೆಗೆ ಅಣ್ಣನ ಭಾವುಕ ನುಡಿ

Last Updated : Oct 29, 2021, 8:09 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.