ETV Bharat / sitara

ಕಿರುತೆರೆ ಡ್ಯಾನ್ಸ್ ಶೋನಲ್ಲಿ ಯುವರತ್ನನ ಕಲರವ! - punith rajkumar visits dance karnataka dance show

'ಡಾನ್ಸ್ ಕರ್ನಾಟಕ ಡಾನ್ಸ್' ನಲ್ಲಿ ಪುನೀತ್​ ಭಾಗಿಯಾಗಿದ್ದಾರೆ. ಸದ್ಯ 'ಜೇಮ್ಸ್' ಸಿನಿಮಾ ಚಿತ್ರೀಕರಣಕ್ಕಾಗಿ ಕಾಶ್ಮೀರದಲ್ಲಿರುವ ಅಪ್ಪು , ಕಾಶ್ಮೀರ ಪ್ರವಾಸ ಹೋಗುವುದಕ್ಕಿಂತ ಮುಂಚೆ, ಡಿಕೆಡಿ ಕಾರ್ಯಕ್ರಮಕ್ಕೆ ಗೆಸ್ಟ್ ಆಗಿ ಹೋಗಿದ್ರು.

punith rajkumar in dance karnataka dance reality show
ಡಿಕೆಡಿ ರಿಯಾಲಿಟಿ ಶೋನಲ್ಲಿ ಪುನೀತ್
author img

By

Published : Mar 5, 2021, 7:58 AM IST

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕನ್ನಡ ಚಿತ್ರರಂಗದ, ಬೆಳ್ಳಿ ತೆರೆಯಲ್ಲಿ ದೊಡ್ಮನೆ ಮಗನಾಗಿ ವಿಜೃಂಭಿಸುತ್ತಿರುವ ನಟ. ಸದ್ಯ 'ಜೇಮ್ಸ್' ಸಿನಿಮಾ ಚಿತ್ರೀಕರಣಕ್ಕಾಗಿ ಕಾಶ್ಮೀರದಲ್ಲಿರುವ ಅಪ್ಪು , ಕಾಶ್ಮೀರ ಪ್ರವಾಸ ಹೋಗುವುದಕ್ಕಿಂತ ಮುಂಚೆ, ಕಿರುತೆರೆಯ ಒಂದು ಕಾರ್ಯಕ್ರಮಕ್ಕೆ ಗೆಸ್ಟ್ ಆಗಿ ಹೋಗಿ ಮಿಂಚಿದ್ದಾರೆ.

punith rajkumar in dance karnataka dance reality show
ಡಿಕೆಡಿ ರಿಯಾಲಿಟಿ ಶೋನಲ್ಲಿ ಪುನೀತ್
punith rajkumar in dance karnataka dance reality show
ಕಿರುತೆರೆಯ ಡ್ಯಾನ್ಸ್ ಶೋನಲ್ಲಿ ಯುವರತ್ನ
ಯುವರತ್ನನ ಕಲರವ

ಹೌದು, ಕನ್ನಡ ಕಿರುತೆರೆಯ ಪ್ರಸಿದ್ಧ ಡಾನ್ಸ್ ರಿಯಾಲಿಟಿ ಶೋ 'ಡಾನ್ಸ್ ಕರ್ನಾಟಕ ಡಾನ್ಸ್' ನಲ್ಲಿ ಪುನೀತ್​ ಭಾಗಿಯಾಗಿದ್ದಾರೆ. ನಟಿ ರಕ್ಷಿತಾ, ವಿಜಯ್ ರಾಘವೇಂದ್ರ, ಅರ್ಜುನ್ ಜನ್ಯ ಜಡ್ಜ್ ಆಗಿ ಕಾಣಿಸಿಕೊಂಡಿರುವ ಡಿಕೆಡಿ ರಿಯಾಲಿಟಿ ಶೋನಲ್ಲಿ ಪುನೀತ್ ರಾಜ್ ಕುಮಾರ್ ವಿಶೇಷ ಗೆಸ್ಟ್ ಆಗಿ ಕಾಣಿಸಿಕೊಂಡಿರೋದು ಅಭಿಮಾನಿಗಳಲ್ಲಿ ಸಂತಸ ಇಮ್ಮಡಿಗೊಳಿಸಿದೆ. ಯಾಕೆಂದರೆ ಕೆಲ ದಿನಗಳ ಹಿಂದಷ್ಟೇ ಪುನೀತ್ ರಾಜ್‍ಕುಮಾರ್ ಕನ್ನಡ ಚಿತ್ರರಂಗದಲ್ಲಿ, ಬರೋಬ್ಬರಿ 45 ವರ್ಷಗಳನ್ನ ಪೂರೈಸಿದ್ದಾರೆ. ಆರು ತಿಂಗಳ ಮಗುವಾಗಿದ್ದಾಗಲೆ ಸಿನಿಮಾ ಜರ್ನಿ ಶುರು ಮಾಡಿದ ಅಪ್ಪು, ಸಿನಿಮಾ‌ ಕಲಾ ಸೇವೆಗೆ 45 ವರ್ಷಗಳ ತುಂಬುತ್ತಿದೆ. ಈ ಖುಷಿಯನ್ನ ಪುನೀತ್ ರಾಜ್‍ಕುಮಾರ್ ಈ ಡ್ಯಾನ್ಸ್ ಶೋನಲ್ಲಿ ಸೆಲೆಬ್ರೆಟ್ ಮಾಡಿದ್ದಾರೆ ಎನ್ನಲಾಗಿದೆ. ಅಪ್ಪು ಡ್ಯಾನ್ಸ್ ಗೆ ಫಿದಾ ಆಗದವರೇ ಇಲ್ಲ, ಅದಕ್ಕೆ ಸಾಕ್ಷಿ ಯುವರತ್ನ ಈ ಡಾನ್ಸ್ ಕರ್ನಾಟಕ ಡಾನ್ಸ್ ಕಲರ್​ಫುಲ್ ಸ್ಟೇಜ್ ಮೇಲೆ ಹಾಕಿರುವ ಈ ಸ್ಟೆಪ್​ಗಳು.

ಕಿರುತೆರೆಯ ಡ್ಯಾನ್ಸ್ ಶೋನಲ್ಲಿ ಅಪ್ಪು

ಡಾನ್ಸ್ ಕರ್ನಾಟಕ ಡಾನ್ಸ್

ನಿರ್ದೇಶಕ ಚೇತನ್ ಕುಮಾರ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಜೇಮ್ಸ್ ಸಿನಿಮಾ ಕಾಶ್ಮೀರದಲ್ಲಿ ಚಿತ್ರೀಕರಣ ನಡೆಯುತ್ತಿದೆ.ಇತ್ತೀಚಿಗಷ್ಟೆ ಕಾಶ್ಮೀರ ಚಿತ್ರೀಕರಣದ ಒಂದಿಷ್ಟು ಪುನೀತ್​ ಫೋಟೋಗಳನ್ನು ಹಂಚಿಕೊಂಡಿದ್ದರು. ಹಾಗೆಯೇ ಅಪ್ಪು ಕಾಶ್ಮೀರ ಜನರ ಜೊತೆ ಮಾತನಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪುನೀತ್​ ರಾಜ್​ಕುಮಾರ್​ ಸಿನಿಮಾ‌ ಕಲಾ ಸೇವೆಗೆ 45 ವರ್ಷ

ಇದನ್ನೂ ಓದಿ:'ನೀಲಿ ಆರ್ಥಿಕ ಕರಡು' ವಿರುದ್ಧ ಮೀನುಗಾರರ ಆಕ್ರೋಶ ಸ್ಫೋಟ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.