ದಸರ ಹಬ್ಬ ಯಾವಾಗ ಬರುತ್ತೋ ನಾವು "ಯುವರತ್ನ"ನನ್ನ ಯಾವಾಗ ಕಣ್ ತುಂಬಿಕೊಳ್ಳುತ್ತೇವೋ ಎಂದು ಚಾತಕ ಪಕ್ಷಿಯಂತೆ ಕಾದು ಕುಳಿತಿದ್ದ ಅಪ್ಪು ಅಭಿಮಾನಿಗಳ ಕತೂಹಲ ಅಂತೂ ತಣಿದಿದೆ. ದಸರಾ ಹಬ್ಬಕ್ಕೆ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಯೂತ್ ಲುಕ್ ನಲ್ಲಿ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ. ಸ್ಪೋರ್ಟ್ ಪರ್ಸನ್ ಆಗಿ ಪುನೀತ್ ರಾಜ್‍ಕುಮಾರ್ ಯುವರತ್ನ ಚಿತ್ರದ ಟೀಸರ್ ನಲ್ಲಿ ಅಬ್ಬರಿಸಿದ್ದಾರೆ.
ಹೌದು ಪುನೀರ್ ರಾಜ್ ಕುಮಾರ್ ಅಂದ್ರೆನೇ ಹಾಗೆ ತಮ್ಮ ಸಿನಿಮಾದಲ್ಲಿ ಏನಾದರೂ ವಿಶೇಷ ತರುತ್ತಾರೆ ಎಂದು ಅಭಿಮಾನಿಗಳು ನಂಬಿದ್ದಾರೆ. ಅವರ ನಿರೀಕ್ಷೆಯಂತೆ ಇಂದು ಬಿಡುಗಡೆಯಾಗಿರುವ ಯುವರತ್ನ ಸಿನಿಮಾದ ಟೀಸರ್ನಲ್ಲಿ "ರಾಜಕುಮಾರ" ಕಾಲೇಜ್ ಬಾಯ್ ಆಗಿ ಕಾಣಿಸಿ ಕೊಂಡಿದ್ದಾರೆ.
ಇನ್ನು ಟೀಸರ್ನಲ್ಲಿ ಈ ದುನಿಯಾದಲ್ಲಿ ಮೂರು ಜನ ಗಂಡಸರು ಇರ್ತಾರೆ. ರೂಲ್ಸ್ ಫಾಲೋ ಮಾಡೋರೋ, ರೂಲ್ಸ್ ಬ್ರೇಕ್ ಮಾಡೋರೋ, ಮೂರನೇಯವರು ನನ್ನ ಥರ, ರೂಲ್ ಮಾಡೋರೋ. ಹೀಗೆ ಪವರ್ ಫುಲ್ ಡೈಲಾಗ್ ಹೊಂದಿರುವ ಯುವರತ್ನ ಸಿನಿಮಾದ ಟೀಸರ್ ರಿವೀಲ್ ಆಗಿದೆ.
ಯೂ ಟ್ಯೂಬ್ನಲ್ಲಿ ರಿಲೀಸ್ ಆದ ಕೆಲವೆ ನಿಮಿಷಗಳಲ್ಲಿ ಯುವರತ್ನ ಟೀಸರ್ ಒಂದು ಲಕ್ಷದಷ್ಟು ವೀಕ್ಷಣೆಯಾಗಿದೆ. ಈ ಮೂಲಕ ಯೂ ಟ್ಯೂಬ್ ನಲ್ಲಿ ಅಬ್ಬರಿಸುತ್ತಿದೆ. ಈ ಟೀಸರ್ನಲ್ಲಿ ಪವರ್ ಸ್ಟಾರ್ ಉದ್ದವಾದ ಹೇರ್ ಸ್ಟೈಲ್ನಲ್ಲಿ ಸಖತ್ ಎನರ್ಜಿಟಿಕ್ ಆಗಿ ಕಾಣ್ತಾ ಇದ್ದಾರೆ.
- " class="align-text-top noRightClick twitterSection" data="">
ಈ ಹಿಂದೆ ರಾಜಕುಮಾರ ಸಿನಿಮಾವನ್ನು ನಿರ್ದೇಶಿಸಿದ ಸಂತೋಷ್ ಯುವರತ್ನ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಈ ಸಿನಿಮಾದಲ್ಲಿ ಪುನೀತ್ ಜೋಡಿಯಾಗಿ ಸಯೇಶ್ ಸೈಗಲ್ ನಟಿಸುತ್ತಿದ್ದು, ಸಿನಿಮಾದಲ್ಲಿ ಸೋನು ಗೌಡ, ಡಾಲಿ ಧನಂಜಯ್, ಪ್ರಕಾಶ್ ರಾಜ್ ಸೇರಿದಂತೆ ದೊಡ್ಡ ತಾರಾಗಣವೇ ಇದೆ.