ETV Bharat / sitara

ವಿಡಿಯೋ ನೋಡಿ: ನಟ ಪ್ರೇಮ್ 25ನೇ ಸಿನಿಮಾಗೆ ಶುಭ ಕೋರಿದ್ದ ಪುನೀತ್ ರಾಜ್‌ಕುಮಾರ್ - ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್

ಹೊಸಬರು ಹಾಗು ಟ್ಯಾಲೆಂಟೆಡ್ ನಿರ್ದೇಶಕರ ಸಿನಿಮಾಗಳಿಗೆ ಬೆನ್ನೆಲುಬಾಗಿ ಇರುತ್ತಿದ್ದ ಪುನೀತ್‌ ನಿಧನರಾಗಿ 13 ದಿನಗಳು ಕಳೆಯುತ್ತಿದೆ. ಆದರೆ ಅಪ್ಪು ಎಂಥ ಸ್ನೇಹಜೀವ ಅನ್ನೋದಕ್ಕೆ ನೆನಪಿರಲಿ ಪ್ರೇಮ್ ಸಿನಿಮಾದ ಟ್ರೈಲರ್ ನೋಡಿ, ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರೋ ವಿಡಿಯೋ ಈಗ ಗಮನ ಸೆಳೆಯುತ್ತಿದೆ.

ಪ್ರೇಮ್ 25ನೇ ಸಿನಿಮಾಗೆ ಸಿಕ್ತು ಪವರ್ ಸ್ಟಾರ್ ಅಭಯ ಹಸ್ತ

author img

By

Published : Nov 10, 2021, 10:33 PM IST

Updated : Nov 10, 2021, 10:42 PM IST

'ಲವ್ಲಿ ಸ್ಟಾರ್' ಪ್ರೇಮ್ ಅಭಿನಯಿಸುತ್ತಿರುವ 25ನೇ ಸಿನಿಮಾ 'ಪ್ರೇಮಂ ಪೂಜ್ಯಂ' ಕನ್ನಡ ಚಿತ್ರರಂಗವಲ್ಲದೆ ಪರಭಾಷೆಯವರು ಕೂಡಾ ಮಾತನಾಡುವ ಮಟ್ಟಿಗೆ ಸೆನ್ಸೇಷನಲ್ ಕ್ರಿಯೇಟ್ ಮಾಡಿದೆ. ಈ ಚಿತ್ರಕ್ಕೆ ಪವರ್‌ಸ್ಟಾರ್ ಪುನೀತ್ ರಾಜ್‍ಕುಮಾರ್ ಶುಭ ಕೋರಿದ್ದರು.

ಹೊಸಬರು ಹಾಗು ಟ್ಯಾಲೆಂಟೆಡ್ ನಿರ್ದೇಶಕರ ಸಿನಿಮಾಗಳಿಗೆ ಬೆನ್ನೆಲುಬಾಗಿ ಇರುತ್ತಿದ್ದ ಪುನೀತ್‌ ನಿಧನರಾಗಿ 13 ದಿನಗಳು ಕಳೆಯುತ್ತಿದೆ. ಆದರೆ ಅಪ್ಪು ಎಂಥ ಸ್ನೇಹಜೀವ ಅನ್ನೋದಕ್ಕೆ ನೆನಪಿರಲಿ ಪ್ರೇಮ್ ಸಿನಿಮಾದ ಟ್ರೈಲರ್ ನೋಡಿ, ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರೋ ವಿಡಿಯೋ ಈಗ ಗಮನ ಸೆಳೆಯುತ್ತಿದೆ.

ಸದ್ಯ ಪ್ರೇಮಂ ಪೂಜ್ಯಂ ಚಿತ್ರತಂಡ, ಪವರ್ ಸ್ಟಾರ್‌ಗೆ ಈ ವಿಡಿಯೋ ಅರ್ಪಿಸುತ್ತಿದ್ದೇವೆ ಎಂದು ಈ ವಿಡಿಯೋ ಅನಾವರಣ ಮಾಡಿದೆ‌. ಅಚ್ಚರಿ ಸಂಗತಿ ಅಂದ್ರೆ, ಈ ಸಿನಿಮಾದಲ್ಲಿ ಪವರ್ ಸ್ಟಾರ್ ಒಂದು ಹಾಡನ್ನು ಕೂಡ ಹಾಡಿದ್ದಾರೆ. ಈ ಚಿತ್ರದಲ್ಲಿ ನೆನಪಿರಲಿ ಪ್ರೇಮ್ ಒಂಬತ್ತು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದು, ವೃತ್ತಿಯಲ್ಲಿ ವೈದ್ಯರಾಗಿರೋ ರಾಘವೇಂದ್ರ ಬಿ.ಎಸ್, ಈ ಚಿತ್ರವನ್ನು ನಿರ್ದೇಶಿಸುವುದರ ಜೊತೆಗೆ, ಕಥೆ ಮತ್ತು ಚಿತ್ರಕಥೆ ಬರೆದು, ಈ ಚಿತ್ರಕ್ಕೆ ಸಂಗೀತ ಸಂಯೋಜನೆಯನ್ನೂ ಮಾಡಿದ್ದಾರೆ.

ಚಿತ್ರದಲ್ಲಿ ಪ್ರೇಮ್‌ಗೆ ನಾಯಕಿಯಾಗಿ ಶೃಂಗೇರಿ ಹುಡುಗಿ ಬೃಂದಾ ಆಚಾರ್ಯ ಜೋಡಿಯಾಗಿದ್ದಾರೆ. ಇದರ ಜೊತೆಗೆ ಐಂದ್ರಿತಾ ರೇ, ಸುಮನ್, ಮಾಸ್ಟರ್ ಆನಂದ್​, ಸಾಧು ಕೋಕಿಲ, ಅನು ಪ್ರಭಾಕರ್, ನಿರ್ದೇಶಕ ಟಿ.ಎಸ್. ನಾಗಾಭರಣ, ತಪಸ್ವಿನಿ ಸೇರಿದಂತೆ ಸಾಕಷ್ಟು ಕಲಾವಿದರ ದಂಡು ಚಿತ್ರದಲ್ಲಿದೆ.

ಈ ಚಿತ್ರದಲ್ಲಿ 12 ಹಾಡುಗಳಿವೆ. ಹರಿಹರನ್, ಮೋಹಿತ್ ಚೌಹಾಣ್, ವಿಜಯ್ ಪ್ರಕಾಶ್, ಸೋನು ನಿಗಮ್ ಮತ್ತು ಅರ್ಮಾನ್ ಮಲಿಕ್ ಸೇರಿದಂತೆ ದೇಶದ ಹೆಸರಾಂತ ಗಾಯಕರು ಹಾಡಿದ್ದಾರೆ. ಡಾ.ರಕ್ಷಿತ್ ಕೆಡಂಬಾಡಿ, ಡಾ.ರಾಜಕುಮಾರ್ ಜಾನಕಿರಾಮನ್‌, ಮನೋಜ್ ಕೃಷ್ಣನ್ ಅದ್ದೂರಿ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದು, ಮಾಧವ್ ಕ್ರಿನಿ ಸಿನಿಮಾದ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.

ಪ್ರೇಮಂ ಪೂಜ್ಯಂ ನವೆಂಬರ್ 12ಕ್ಕೆ ವಿಶ್ವದ್ಯಾಂತ ಬಿಡುಗಡೆ ಆಗಲಿದೆ.

Last Updated : Nov 10, 2021, 10:42 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.