ETV Bharat / sitara

ಜೇಮ್ಸ್ ಸಿನಿಮಾದ 'ಸಲಾಂ ಸೋಲ್ಜರ್' ಹಾಡು ರಿಲೀಸ್​​..ಅಪ್ಪುಗೆ ಉಘೇ.. ಉಘೇ ಎಂದ ಫ್ಯಾನ್ಸ್​ - ಜೇಮ್ಸ್ ಸಿನಿಮಾದ ಸಲಾಂ ಸೋಲ್ಜರ್ ಹಾಡು ರಿಲೀಸ್

ಪುನೀತ್​ ಅಭಿನಯದ ಜೇಮ್ಸ್​ ಸಿನಿಮಾದ ಎರಡನೇ ಹಾಡು ಬಿಡುಗಡೆ ಆಗಿದೆ. ಸಲಾಂ ಸೋಲ್ಜರ್​.. ಎಂಬ ಲಿರಿಕಲ್​ ವಿಡಿಯೋವನ್ನು ಪಿಆರ್​ಕೆ ಆಡಿಯೋ ಬಿಡುಗಡೆ ಮಾಡಿದೆ. ಹಾಡಿನಲ್ಲಿ ಪುನೀತ್​ ರಾಜ್​ಕುಮಾರ್​ ಅವರು ಸೈನಿಕನ ಗೆಟಪ್​ನಲ್ಲಿ ಮಿಂಚಿದ್ದಾರೆ.

James movie new song salaam soldier released
ಜೇಮ್ಸ್ ಸಿನಿಮಾದ ಸಲಾಂ ಸೋಲ್ಜರ್ ಹಾಡು ರಿಲೀಸ್
author img

By

Published : Mar 11, 2022, 12:26 PM IST

Updated : Mar 11, 2022, 12:40 PM IST

ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಅಭಿನಯದ ಹೈ ವೋಲ್ಟೇಜ್ ಸಿನಿಮಾ. ಸದ್ಯ ಟೀಸರ್​ನಿಂದ ಸಾಕಷ್ಟು ಹವಾ ಸೃಷ್ಟಿಸಿದೆ. ಈಗಾಗಲೇ ಚಿತ್ರದ ಬಿಡುಗಡೆ ಡೇಟ್​ ಕೂಡ ಘೋಷಣೆಯಾಗಿದೆ. ಈ ಹಿನ್ನೆಲೆಯಲ್ಲಿ ಜೇಮ್ಸ್​ ಚಿತ್ರತಂಡ ಹಾಗೂ ಅಪ್ಪು ಅಭಿಮಾನಿಗಳು ಸಿನಿಮಾದ ಪ್ರಚಾರಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಇದರ ನಡುವೆ ಚಿತ್ರತಂಡ 'ಸಲಾಂ ಸೋಲ್ಜರ್' ಎಂಬ ಲಿರಿಕಲ್​ ವಿಡಿಯೋ ರಿಲೀಸ್​​ ಮಾಡಿದೆ.

ಇತ್ತೀಚೆಗಷ್ಟೇ ಟ್ರೇಡ್​ಮಾರ್ಕ್​.. ಲಿರಿಕಲ್​ ವಿಡಿಯೋ ಸಖತ್​ ಸೌಂಡು ಮಾಡಿತ್ತು. ಈಗ ಸಲಾಂ ಸೋಲ್ಜರ್​ಹಾಡಿನ ಲಿರಿಕಲ್​ ವಿಡಿಯೋ ರಿಲೀಸ್​ ಆಗಿದೆ. ಪಿಆರ್​ಕೆ ಆಡಿಯೋ ಮೂಲಕ ಬಿಡುಗಡೆ ಆಗಿರುವ ಈ ಹಾಡಿನಲ್ಲಿ ಪುನೀತ್ ರಾಜ್‍ಕುಮಾರ್ ದೇಶ ಕಾಯುವ ಸೈನಿಕನಾಗಿ ಕಾಣ್ತಾರೆ‌. ರಾಜರತ್ನ ಸೈನಿಕನ ಅವತಾರದಲ್ಲಿ ನೋಡಿದ ಅಭಿಮಾನಿಗಳು ಉಘೇ ಉಘೇ ಅಂದಿದ್ದಾರೆ.

  • " class="align-text-top noRightClick twitterSection" data="">

ಚರಣ್​​​​​ ರಾಜ್​ ಸಂಗೀತ: ಈ ಚಿತ್ರದ ಹಾಡುಗಳಿಗೆ ಯುವ ಸಂಗೀತ ನಿರ್ದೇಶಕ ಚರಣ್​ ರಾಜ್​ ಸಂಗೀತ ನೀಡಿದ್ದಾರೆ. ಕಿಶೋರ್​ ಪತ್ತಿಕೊಂಡ ಅವರ ನಿರ್ಮಾಣದಲ್ಲಿ ಸಿನಿಮಾ ಮೂಡಿಬಂದಿದ್ದು, ಚೇತನ್​ ಕುಮಾರ್​ ಆ್ಯಕ್ಷನ್​ ಕಟ್​ ಹೇಳಿದ್ದಾರೆ. ಜೇಮ್ಸ್​ ಸಿನಿಮಾದ ಬಗ್ಗೆ ಅಭಿಮಾನಿಗಳ ವಲಯದಲ್ಲಿ ಎಲ್ಲಿಲ್ಲದ ನಿರೀಕ್ಷೆ ಸೃಷ್ಟಿ ಆಗಿದೆ.

ಆ ನಿರೀಕ್ಷೆಯನ್ನು ಡಬಲ್​ ಮಾಡುವ ರೀತಿಯಲ್ಲಿ ಈ ಹಾಡು ಮೂಡಿ ಬಂದಿದೆ. ನಿರ್ದೇಶಕ ಚೇತನ್ ಕುಮಾರ್ ನಿರ್ದೇಶನದ ಜೊತೆಗೆ ಹಾಡುಗಳಿಗೆ ಅದ್ಭುತವಾದ ಸಾಹಿತ್ಯ ಬರೆದಿದ್ದಾರೆ. ಗಾಯಕ ಸಂಜಿತ್ ಹೆಗ್ಡೆ ಹಾಗೂ ಚರಣ್ ರಾಜ್ ಕಂಠಸಿರಿಯಲ್ಲಿ ಹಾಡುಗಳು ಮೂಡಿ ಬಂದಿವೆ.

ಪುನೀತ್​ ರಾಜ್​ಕುಮಾರ್​ ಅವರು ಹೀರೋ ಆಗಿ ನಟಿಸಿದ ಕೊನೆ ಸಿನಿಮಾ ಇದು. ಇದರ ಜೊತೆಗೆ ಶಿವರಾಜ್​ಕುಮಾರ್​, ರಾಘವೇಂದ್ರ ರಾಜ್​ಕುಮಾರ್​ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ. ಪುನೀತ್​ ರಾಜ್​ಕುಮಾರ್​ ಪಾತ್ರಕ್ಕೆ ಶಿವಣ್ಣ ಧ್ವನಿ ನೀಡಿದ್ದು, ರಾಜಕುಮಾರ ಬಳಿಕ ನಟಿ ಪ್ರಿಯಾ ಆನಂದ್​ ಅವರು ಈ ಚಿತ್ರದಲ್ಲಿ ಎರಡನೇ ಬಾರಿಗೆ ಪುನೀತ್​ಗೆ ಜೋಡಿ ಆಗಿದ್ದಾರೆ.

ಶರತ್ ಕುಮಾರ್, ತೆಲುಗು ಶ್ರೀಕಾಂತ್,ರಂಗಾಯಣ ರಘು, ಸಾಧು ಕೋಕಿಲ, ಚಿಕ್ಕಣ್ಣ, ಸುಚೇಂದ್ರ ಪ್ರಸಾದ್ ಸೇರಿದಂತೆ ದೊಡ್ಡ ತಾರಬಳಗ ಚಿತ್ರದಲ್ಲಿದೆ. ಸದ್ಯ ಜೇಮ್ಸ್ ಸಿನಿಮಾದ ಟಿಕೆಟ್​ ಬುಕಿಂಗ್​ ಓಪನ್​ ಆಗಿದ್ದು, ಟಿಕೆಟ್​ ಖರೀದಿಸಲು ಪುನೀತ್​ ರಾಜ್​ಕುಮಾರ್​ ಫ್ಯಾನ್ಸ್​ ಮುಗಿ ಬಿದ್ದಿದ್ದಾರೆ. ಮಾರ್ಚ್ 17ಕ್ಕೆ ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ಜೇಮ್ಸ್ ರಿಲೀಸ್ ಆಗಲಿದೆ.

ಇದನ್ನೂ ಓದಿ: ಗಾಜನೂರಲ್ಲಿ ಅಣ್ಣಾವ್ರ ತಂಗಿಯಿಂದ ಪೂಜೆ: ಸೆಟ್ಟೇರಿದ ರಾಘಣ್ಣ ಅಭಿನಯದ ಹೊಸ ಚಿತ್ರ

Last Updated : Mar 11, 2022, 12:40 PM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.