ಟೋಕಿಯೋ ಪ್ಯಾರಾಲಿಂಪಿಕ್‌ನಲ್ಲಿ ಭಾರತೀಯ ಕ್ರೀಡಾಪಟುಗಳು ಈ ವರ್ಷ ಇತಿಹಾಸ ಸೃಷ್ಟಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿಭಾವಂತ ಕ್ರೀಡಾಪಟುಗಳಿಗೆ ರಾಜ್ ಕುಮಾರ್ ಕುಟುಂಬ ವಿಶೇಷ ಔತಣಕೂಟ ಏರ್ಪಡಿಸಿ ಸನ್ಮಾನಿಸಿದ್ದಾರೆ.
ಪ್ಯಾರಾಲಿಂಪಿಕ್ ಈಜುಪಟುಗಳಾದ ನಿರಂಜನ್ ಮುಕುಂದನ್ ಹಾಗೂ ಬ್ಯಾಡ್ಮಿಂಟನ್ ಆಟಗಾರ ಬೆಳ್ಳಿ ಪದಕವಿಜೇತ ಸುಹಾಸ್ ಯತಿರಾಜ್ ಅವರನ್ನು ಪುನೀತ್ ರಾಜ್‍ಕುಮಾರ್ ತಮ್ಮ ಮನೆಗೆ ಕರೆಯಿಸಿಕೊಂಡು ಸನ್ಮಾನ ಮಾಡಿದರು. ನಿರಂಜನ್ ಮುಕುಂದನ್ ಕುಟುಂಬಸಮೇತರಾಗಿ ಆಗಮಿಸಿ ಪುನೀತ್ ರಾಜ್‍ಕುಮಾರ್, ರಾಘವೇಂದ್ರ ರಾಜ್‍ಕುಮಾರ್ ಅವರನ್ನು ಭೇಟಿ ಮಾಡಿದರು.
ಪುನೀತ್ ರಾಜ್‍ಕುಮಾರ್ ಅವರ ಪತ್ನಿ ಅಶ್ವಿನಿ, ರಾಘವೇಂದ್ರ ರಾಜ್‍ಕುಮಾರ್ ಸೇರಿದಂತೆ ಇಡೀ ಅಣ್ಣಾವ್ರ ಕುಟುಂಬ ದೇಶದ ಕೀರ್ತಿ ಹೆಚ್ಚಿಸಿದ ಕ್ರೀಡಾಪಟುಗಳನ್ನು ಗೌರವಿಸಿದರು.
ಈ ಸುಂದರ ಕ್ಷಣಗಳನ್ನು ಸ್ವಿಮ್ಮರ್ ನಿರಂಜನ್ ಮುಕುಂದನ್ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ಪುನೀತ್ ರಾಜ್‍ಕುಮಾರ್ ನೀಡಿರುವ ಗೌರವಕ್ಕೆ ಸದಾ ಆಭಾರಿ ಎಂದು ಬರೆದುಕೊಂಡಿದ್ದಾರೆ.