ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಹೊಸ ನಿರ್ದೇಶಕರು, ಯುವ ನಟ- ನಟಿಯರಿಗಾಗಿ ಹುಟ್ಟು ಹಾಕಿರುವ ನಿರ್ಮಾಣ ಸಂಸ್ಥೆ ಅಂದ್ರೆ ಪಿ.ಆರ್.ಕೆ ಪ್ರೊಡಕ್ಷನ್ಸ್. ಸಂಸ್ಥೆಯಲ್ಲಿ ಈಗಾಗ್ಲೇ ಸಾಕಷ್ಟು ಸಿನಿಮಾಗಳು ಬಂದಿವೆ.
ಅಪ್ಪು ಬದುಕಿದಾಗ ಅಮೆಜಾನ್ ಪ್ರೈಮ್ ಸಂಸ್ಥೆ ಜೊತೆ, ತಮ್ಮ ಪಿಆರ್ಕೆ ಬ್ಯಾನರ್ನಿಂದ ನಿರ್ಮಾಣವಾದ ಒನ್ ಕಟ್ ಟು ಕಟ್, ಫ್ಯಾಮಿಲಿ ಪ್ಯಾಕ್ ಹಾಗು ಮ್ಯಾನ್ ಆಫ್ ದಿ ಮ್ಯಾಚ್ ಸಿನಿಮಾಗಳನ್ನ, ಬಿಡುಗಡೆ ಮಾಡುವುದಾಗಿ ಒಪ್ಪಂದ ಮಾಡಿಕೊಳ್ಳಲಾಗಿತ್ತು.
ಅದರಂತೆ ಈಗಾಗಲೇ ಒನ್ ಕಟ್ ಟು ಕಟ್ ಸಿನಿಮಾ ಬಿಡುಗಡೆ ಮಾಡಲಾಗಿದೆ. ಇದೀಗ ಫ್ಯಾಮಿಲಿ ಪ್ಯಾಕ್ ಸಿನಿಮಾ ಬಿಡುಗಡೆ ದಿನಾಂಕದ ಜೊತೆಗೆ ಟ್ರೈಲರ್ ಕೂಡ ಅನಾವರಣ ಮಾಡಲಾಗಿದೆ. ಸಂಕಷ್ಟಕರ ಗಣಪತಿ ಸಿನಿಮಾದ ಬಳಿಕ ಲಿಖಿತ್ ಶೆಟ್ಟಿ ಫ್ಯಾಮಿಲಿ ಪ್ಯಾಕ್ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಲವ್ ಸ್ಟೋರಿ ಜೊತೆಗೆ ಫ್ಯಾಮಿಲಿ ಮೌಲ್ಯಗಳು ಟ್ರೈಲರ್ನಲ್ಲಿದೆ.
ಲಿಖಿತ್ ಶೆಟ್ಟಿ ಲವರ್ ಬಾಯ್ ಆಗಿ ಮಿಂಚಿದ್ದು, ಅಮೃತ ಅಯ್ಯಂಗಾರ್ ಬಬ್ಲಿಯಾಗಿ ಕಾಣಿಸಿಕೊಂಡಿದ್ದಾರೆ. ಇದರ ಜೊತೆಗೆ ಅಚ್ಯುತ್ ಕುಮಾರ್, ರಂಗಾಯಣ ರಘು, ಪದ್ಮಜಾ ರಾವ್, ಸಿಹಿಕಹಿ ಚಂದ್ರು, ಪದ್ಮಜಾರಾವ್, ಶರ್ಮಿತಾಗೌಡ, ನಾಗಭೂಷಣ್ ಮುಂತಾದವರು ಅಭಿನಯಿಸಿದ್ದಾರೆ. ಸಂಕಷ್ಟಕರ ಗಣಪತಿ ಸಿನಿಮಾಗೆ ನಿರ್ದೇಶನ ಮಾಡಿದ್ದ ಅರ್ಜುನ್ ಕುಮಾರ್ ಎಸ್ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ.
ಗುರುಕಿರಣ್ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಉದಯಲೀಲಾ ಹಾಗೂ ಶ್ರೀಶ ಕುದುವಳ್ಳಿ ಛಾಯಾಗ್ರಹಣ ಹಾಗೂ ದೀಪು ಎಸ್. ಕುಮಾರ್ ಅವರ ಸಂಕಲನವಿದೆ. ಮಾಸ್ತಿ ಫ್ಯಾಮಿಲಿ ಪ್ಯಾಕ್ಗೆ ಸಂಭಾಷಣೆ ಬರೆದಿದ್ದಾರೆ.
ಪಿಆರ್ಕೆ ಬ್ಯಾನರ್ ಅಡಿ, ಅಶ್ವಿನಿ ಪುನೀತ್ ರಾಜ್ ಕುಮಾರ್, ಲಿಖಿತ್ ಶೆಟ್ಟಿ ಈ ಸಿನಿಮಾವನ್ನ ನಿರ್ಮಾಣ ಮಾಡಿದ್ದಾರೆ. ಔಟ್ ಅಂಡ್ ಔಟ್ ಕಾಮಿಡಿ ಕಥೆ ಹೊಂದಿರುವ ಫ್ಯಾಮಿಲಿ ಪ್ಯಾಕ್ ಸಿನಿಮಾ ಭಾರತ ಸೇರಿದಂತೆ 240 ದೇಶಗಳಲ್ಲಿ ಈ ಸಿನಿಮಾ ಇದೇ 17ರಂದು ಬಿಡುಗಡೆ ಆಗಲಿದೆ.
https://www.youtube.com/watch?v=rMAF62cHJAg
ಓದಿ: ಪ್ರಕರಣ ಇತ್ಯರ್ಥವಾಗುವವರೆಗೆ ಧಾರ್ಮಿಕ ಸಂಕೇತದ ಉಡುಪು ಧರಿಸುವಂತಿಲ್ಲ.. ವಿಸ್ತೃತ ಪೀಠದಲ್ಲಿ ಹೀಗಿತ್ತು ವಾದ ಸರಣಿ!