ನಟ ಪ್ರಜ್ವಲ್ ಮೆರವಣಿಗೆ, ಸಿಕ್ಸರ್, ಸಾಗರ್, ಸೂಪರ್ ಶಾಸ್ತ್ರಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡವರು. ಇನ್ನು ಪ್ರಜ್ವಲ್ ದೇವರಾಜ್ ಅವರ ಫಿಟ್ನೆಸ್ಗೆ ಸ್ಪೂರ್ತಿಯಾದವರು ಯಾರೆಂಬ ಗುಟ್ಟು ನಿಮಗೆ ಗೊತ್ತಿಲ್ಲದಿದ್ದರೆ, ಇದೀಗ ಪ್ರಜ್ವಲ್ ಅವರೇ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಹೌದು ಸಿನಿಮಾದಲ್ಲಿ ಫಿಟ್ ಆಗಿ ಕಾಣಲು ನನ್ನ ಫಿಟ್ನೆಸ್ಗೆ ಸ್ಪೂರ್ತಿಯಾದವರು ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅಂತಾರೆ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್. ಹೌದು ಸದ್ಯ ಪ್ರಜ್ವಲ್ ಜಿಮ್ ವರ್ಕ್ ಔಟ್ ಜೊತೆಗೆ ಜಿಮ್ನಾಸ್ಟಿಕ್ಸ್ ಮಾಡಲು ಶುರುಮಾಡಿದ್ದಾರೆ.
ಇನ್ನು ಪ್ರಜ್ಜು ಜಿಮ್ನಾಸ್ಟಿಕ್ಸ್ ಮಾಡಲು ಅಪ್ಪು ಸ್ಪೂರ್ತಿಯಂತೆ. ಈ ವಿಷಯವನ್ನು ಪ್ರಜ್ವಲ್ 'ಜಂಟಲ್ ಮ್ಯಾನ್' ಚಿತ್ರದ ಆಡಿಯೋ ಬಿಡುಗಡೆ ವೇದಿಕೆಯಲ್ಲಿ ಅಪ್ಪು ಮುಂದೆನೇ ರೀವಿಲ್ ಮಾಡಿ, ನಾನು ಅಪ್ಪು ಇಂದನೇ ಜಿಮ್ನಾಸ್ಟಿಕ್ಸ್ ಹಾಗೂ ಆಕ್ಷನ್ ಸೀಸ್ಗಳನ್ನು ಮಾಡಲು ಶುರು ಮಾಡಿದ್ದು. ಅಪ್ಪು ಯಾರ ಬಳಿ ಜಿಮ್ನಾಸ್ಟಿಕ್ ಪ್ರಾಕ್ಟಿಸ್ ಮಾಡ್ತಾರೋ ಅವರನ್ನೇ ಮನೆಗೆ ಕರೆಸಿಕೊಂಡು ಪ್ರಾಕ್ಟಿಸ್ ಮಾಡ್ತೀದ್ದೀನಿ ಅಂತ ಪ್ರಜ್ವಲ್ ದೇವರಾಜ್ ಪುನೀತ್ ರಾಜ್ ಕುಮಾರ್ ನನ್ನ ಫಿಟ್ನೆಸ್ನ ಗುರು ಎಂದರು.