ETV Bharat / sitara

ರಾಘಣ್ಣ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಂತರ ಕಾಶ್ಮೀರಕ್ಕೆ ತೆರಳಲಿರುವ ಪುನೀತ್​​​​​​​​​​​ - James Kannada movie

'ಜೇಮ್ಸ್​' ಚಿತ್ರತಂಡ ಕಾಶ್ಮೀರದ ಸುಂದರ ತಾಣಗಳಲ್ಲಿ ಚಿತ್ರೀಕರಣ ಮಾಡಲು ನಿರ್ಧರಿಸಿದೆ. ರಾಘವೇಂದ್ರ ರಾಜ್​ಕುಮಾರ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಂತರ ಅವರ ಆರೋಗ್ಯ ವಿಚಾರಿಸಿ ನಂತರ ಪುನೀತ್ ಕಾಶ್ಮೀರಕ್ಕೆ ಪ್ರಯಾಣಿಸಲಿದ್ದಾರೆ ಎನ್ನಲಾಗುತ್ತಿದೆ.

Puneet
ಪುನೀತ್​​​​​​​​​​​
author img

By

Published : Feb 18, 2021, 12:03 PM IST

ಪುನೀತ್ ರಾಜ್​ಕುಮಾರ್ ಅಭಿನಯದ 'ಜೇಮ್ಸ್' ಸಿನಿಮಾ ಚಿತ್ರೀಕರಣ ಭರದಿಂದ ಸಾಗಿದೆ. ಈ ಸಿನಿಮಾ ಚಿತ್ರೀಕರಣಕ್ಕಾಗಿ ಚಿತ್ರತಂಡ ಕಾಶ್ಮೀರಕ್ಕೆ ಹೊರಟುನಿಂತಿತ್ತು. ಆದರೆ ರಾಘವೇಂದ್ರ ರಾಜ್​ಕುಮಾರ್, ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ ಕಾರಣ ಪುನೀತ್ ತಮ್ಮ ಕಾಶ್ಮೀರ ಪ್ರಯಾಣವನ್ನು ಮುಂದೂಡಿದ್ದಾರೆ.

James
'ಜೇಮ್ಸ್​'

ಇದನ್ನೂ ಓದಿ: ದಿಯಾ ಮಿರ್ಜಾ ಮದುವೆಯಲ್ಲಿ ಮಹಿಳಾ ಪೌರೋಹಿತ್ಯ...ಫೋಟೋ ನೋಡಿ ಆಶ್ಚರ್ಯ ವ್ಯಕ್ತಪಡಿಸಿದ ನೆಟಿಜನ್ಸ್​​​​​​​​​​​​​​​​​​​​​​​​​​​

ರಾಘವೇಂದ್ರ ರಾಜ್​ಕುಮಾರ್ ಇಂದು ಆಸ್ಪತ್ರೆಯಿಂದ ಡಿಸ್ಜಾರ್ಜ್ ಆಗುವ ಸಾಧ್ಯತೆ ಇದ್ದು, ಬಹುಶ: ಇನ್ನೆರಡು ದಿನಗಳಲ್ಲಿ ಪುನೀತ್​​​​​​ ಕಾಶ್ಮೀರಕ್ಕೆ ಪ್ರಯಾಣಿಸುವ ಸಾಧ್ಯತೆ ಇದೆ. ಈಗಾಗಲೇ ಬೆಂಗಳೂರು ಮತ್ತು ಉತ್ತರ ಕರ್ನಾಟಕದ ಹಲವು ಪ್ರದೇಶಗಳಲ್ಲಿ 'ಜೇಮ್ಸ್'​ ಚಿತ್ರೀಕರಣ ಮಾಡಲಾಗಿದೆ. ಇದೀಗ, ಒಂದು ಹಾಡು ಮತ್ತು ಮಹತ್ವದ ದೃಶ್ಯಗಳನ್ನು ಚಿತ್ರೀಕರಣ ಮಾಡಲು ಕಾಶ್ಮೀರಕ್ಕೆ ಪ್ರಯಾಣ ಬೆಳೆಸಿದೆ. ಪುನೀತ್ ಕೂಡಾ ಸದ್ಯದಲ್ಲೇ ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ.ಈ ಕುರಿತು ಮಾತನಾಡಿರುವ ನಿರ್ದೇಶಕ 'ಬಹದ್ದೂರ್' ಚೇತನ್, `"ಸಿನಿಮಾದ ಕೆಲವು ಪ್ರಮುಖ ದೃಶ್ಯಗಳನ್ನು ಮತ್ತು ಒಂದು ಹಾಡನ್ನು ಕಾಶ್ಮೀರದ ಸುಂದರ ಲೊಕೇಶನ್‍ಗಳಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ. 10 ದಿನಗಳ ಶೆಡ್ಯೂಲ್ ಹಾಕಿಕೊಂಡಿದ್ದೇವೆ. ಈ ತಿಂಗಳ ಕೊನೆಗೆ ಈ ಹಂತದ ಚಿತ್ರೀಕರಣ ಮುಗಿಸಿ, ಬೆಂಗಳೂರಿಗೆ ವಾಪಸ್ಸಾಗಲಿದ್ದೇವೆ. ಆ ನಂತರ ಬೆಂಗಳೂರಿನಲ್ಲೇ ಚಿತ್ರೀಕರಣ ಮುಂದುವರೆಯಲಿದೆ" ಎನ್ನುತ್ತಾರೆ.'ಜೇಮ್ಸ್' ಚಿತ್ರದಲ್ಲಿ ಪುನೀತ್‍ಗೆ ನಾಯಕಿಯಾಗಿ ಪ್ರಿಯಾ ಆನಂದ್ ಅಭಿನಯಿಸುತ್ತಿದ್ದು, ಮುಖೇಶ್ ರಿಷಿ, ಶ್ರೀಕಾಂತ್ ಮುಂತಾದವರು ಅಭಿನಯಿಸುತ್ತಿದ್ದಾರೆ. ಚರಣ್‍ರಾಜ್ ಈ ಚಿತ್ರದ ಹಾಡುಗಳಿಗೆ ಸಂಗೀತ ಸಂಯೋಜಿಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.