'ಗುಳ್ಟು' ಸಿನಿಮಾ ಖ್ಯಾತಿಯ ನವೀನ್ ಶಂಕರ್ ಅಭಿನಯದ ಹೊಸ ಚಿತ್ರ 'ಧರಣಿ ಮಂಡಲ ಮಧ್ಯದೊಳಗೆ' ಟೈಟಲ್ ಪೋಸ್ಟರನ್ನು ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.
- " class="align-text-top noRightClick twitterSection" data="">
'ಗುಳ್ಟು' ಚಿತ್ರದ ನಂತರ ನವೀನ್ ಶಂಕರ್, ಈ ಸಿನಿಮಾದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ನವೀನ್ ಜೊತೆ ಸ್ಯಾಂಡಲ್ವುಡ್ ಶಾಕುಂತಲೆ ಐಶಾನಿ ಶೆಟ್ಟಿ ನಾಯಕಿಯಾಗಿ ನಟಿಸಿದ್ದಾರೆ. ಚಿತ್ರವನ್ನು ಟಾಲಿವುಡ್ ಸ್ಟಾರ್ ನಿರ್ದೇಶಕ ಪೂರಿ ಜಗನ್ನಾಥ್ ಗರಡಿಯಲ್ಲಿ ಪಳಗಿರುವ ಶ್ರೀಧರ್ ಷಣ್ಮುಖ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದ ಟೈಟಲ್ನಷ್ಟೇ ಪೋಸ್ಟರ್ ಕೂಡಾ ವಿಭಿನ್ನವಾಗಿದ್ದು, ಚಿತ್ರದ ಮೇಲೆ ಕ್ಯೂರಿಯಾಸಿಟಿ ಹುಟ್ಟುಹಾಕಿದೆ. ಓಂಕಾರ್ ಹಾಗೂ ಪ್ರಶಾಂತ್ ಅಂಚನ್ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ಚಿತ್ರಕ್ಕೆ ಕೀರ್ತನ್ ಪೂಜಾರಿ ಛಾಯಾಗ್ರಹಣ, ರೋಣದ ಬಕ್ಕೇಶ್ ಮತ್ತು ಕಾರ್ತಿಕ್ ಚೆನ್ನೋಜಿರಾವ್ ಸಂಗೀತ ಇದೆ. ಗೌಸ್ ಪೀರ್ ,ಶಿವಕುಮಾರ್ ಶೆಟ್ಟಿ ಮತ್ತು ಅಭಿನಂದನ್ ದೇಶ್ ಪ್ರಿಯಾ ಚಿತ್ರದ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ.
![Dharani Mandala Madhyadolage](https://etvbharatimages.akamaized.net/etvbharat/prod-images/4892337_dharani.jpg)