ETV Bharat / sitara

'ಕಾಮ್ರೇಡ್​'ಗೆ ಕಂಟಕ ತಂದ ರಶ್ಮಿಕಾ... ಬೆಂಗಳೂರಲ್ಲಿ ಚಿತ್ರಮಂದಿರಕ್ಕೆ ಕನ್ನಡ ಸಂಘಟನೆಗಳ ಮುತ್ತಿಗೆ

ವಿರೋಧದ ನಡುವೆಯೂ ಬಿಡುಗಡೆಯಾಗಿರುವ ಡಿಯರ್ ಕಾಮ್ರೇಡ್ ಚಿತ್ರಕ್ಕೆ ಬೆಂಗಳೂರಿನಲ್ಲಿ ಭಾರಿ ವಿರೋಧ ವ್ಯಕ್ತವಾಗಿದೆ. ಈ ಸಿನಿಮಾ ನಿಷೇಧಿಸಿ ಎಂದು ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಬೀದಿಗಿಳಿದಿದ್ದಾರೆ.

author img

By

Published : Jul 26, 2019, 12:56 PM IST

ಕಾಮ್ರೇಡ್​

ಬೆಂಗಳೂರು: ರಶ್ಮಿಕಾ ಮಂದಣ್ಣ ನಟಿಸಿರುವ ತೆಲುಗು 'ಡಿಯರ್ ಕಾಮ್ರೇಡ್' ಸಿನಿಮಾ ನಿಷೇಧಕ್ಕೆ ಒತ್ತಾಯಿಸಿ ಕನ್ನಡ ಪರ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಕನ್ನಡದವರಾದ ರಶ್ಮಿಕಾ ಮಂದಣ್ಣ 'ಕನ್ನಡ ಮಾತನಾಡೋದು ಕಷ್ಟ' ಎಂದು ಇತ್ತೀಚಿಗೆ ಸಂದರ್ಶನವೊಂದರಲ್ಲಿ ಹೇಳಿದ್ದರು. ಅವರ ಹೇಳಿಕೆಯೇ ವಿವಾದದ ಕಿಡಿ ಹೊತ್ತಿಸಿತ್ತು. ಕರ್ನಾಟಕದಲ್ಲಿ ಈ ನಟಿಯ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ರಶ್ಮಿಕಾ ನಟಿಸಿರುವ ಡಿಯರ್ ಕಾಮ್ರೇಡ್​ ಸಿನಿಮಾ ಕರ್ನಾಟಕದಲ್ಲಿ ರಿಲೀಸ್ ಆಗಬಾರದೆಂದು ಕನ್ನಡಪರ ಸಂಘಟನೆಗಳು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದವು. ಅದಾಗ್ಯೂ ಕೂಡ ಇಂದು ಡಿಯರ್ ಕಾಮ್ರೇಡ್ ಥಿಯೇಟರ್​​ಗೆ ಬಂದಿದೆ. ಇದರಿಂದ ಕೆರಳಿರುವ ಕನ್ನಡಿಗರು ಚಿತ್ರಮಂದಿರಗಳಿಗೆ ಮುತ್ತಿಗೆ ಹಾಕಿದ್ದಾರೆ .

ನಟಿ ರಶ್ಮಿಕಾ ಮಂದಣ್ಣ ವಿರುದ್ಧ ಪ್ರತಿಭಟನೆ

ನಗರದ ಮೇನಕಿ ಚಿತ್ರಮಂದಿರದ ಎದುರು ರಶ್ಮಿಕಾ ಮಂದಣ್ಣ ಭಾವಚಿತ್ರದ ಪೋಸ್ಟರ್​​ಗಳನ್ನು ಹಿಡಿದ ಪ್ರತಿಭಟನಾಕಾರರು, ಸಿನಿಮಾ ಬ್ಯಾನ್ ಮಾಡಬೇಕೆಂದು ಒತ್ತಾಯಿಸಿದರು. ರಶ್ಮಿಕಾ ವಿರುದ್ಧ ಘೋಷಣೆ ಕೂಗಿ ಥಿಯೇಟರ್​​ಗೆ ಮುತ್ತಿಗೆ ಹಾಕಲು ಯತ್ನಿಸಿದರು.

ಬಳಿಕ ಮಾಧ್ಯಮಗಳ ಎದುರು ರಶ್ಮಿಕಾ ವಿರುದ್ಧ ಆಕ್ರೋಶ ಹೊರಹಾಕಿದ ಪ್ರತಿಭಟನಾಕಾರರು, ಚಿತ್ರರಂಗದಲ್ಲಿ ಬೆಳೆಯುವಾಗ ಅವರಿಗೆ ಕನ್ನಡ ಬೇಕಾಗಿತ್ತು. ಆದರೆ, ಈಗ ಬೇಡವಾಗಿದೆ. ಅದಕ್ಕಾಗಿ ಅವರು ನಟಿಸಿರುವ ಚಿತ್ರಗಳನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಬಾರದೆಂದು ವಾಣಿಜ್ಯ ಮಂಡಳಿಗೆ ಮನವಿ ಮಾಡಿದ್ದೆವು. ಆದರೆ, ಅವರು ಕೈಕಟ್ಟಿ ಕುಳಿತಿದ್ದಾರೆ. ಕರ್ನಾಟಕದಿಂದ ರಶ್ಮಿಕಾ ಮಂದಣ್ಣ ಅವರನ್ನು ಓಡಿಸಬೇಕು ಎಂದು ಆಗ್ರಹಿಸಿದರು.

Intro:ರಶ್ಮಿಕಾ ಮಂದಣ್ಣ ವಿರುದ್ಧ ಪ್ರತಿಭಟನೆBody:ಡಿಯರ್ ಕಾಮ್ರೆಡ್ ಸಿನಿಮಾ ಇಂದು ರಿಲೀಸ್ ಆಗಿದೆ,ರಶ್ಮಿಕಾ ಮಂದಣ್ಣ 'ಕನ್ನಡ ಮಾತನಾಡೋದು ಕಷ್ಟ ಎಂದು ತಮಿಳು ಯುಟ್ಯೂಬ್ ಚಾನೆಲ್ ನಲ್ಲಿ ನೀಡಿದ ಹೇಳಿಕೆಗೆ ಕನ್ನಡಿಗರನ್ನು ಕೆರಳಿಸಿದೆ ‌

ಸಿನಿಮಾ ರಿಲೀಸ್ಗೆ ಕನ್ನಡ ಹೋರಾಟಗಾರರು ವಿರೋಧ ವ್ಯಕ್ತಪಡಿಸಿದ್ದು,ನಾಗೇಶ್ ಕುಮಾರ್ ನೇತ್ರುತ್ವದಲ್ಲಿ ಮೇನಕಾ ಥಿಯೇಟರ್ ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು,ಸಿನಿಮಾ ಪ್ರದರ್ಶನ ಕಾಣಬಾರದು ಎಂದು ಪ್ರತಿಭಟನೆ.

ಸಿನಿಮಾ ಪ್ರದರ್ಶನ ಕಾಣಬಾರದು ಎಂದು ಘೋಷನೆ ಕೂಗಿ,420 ರಶ್ಮಿಕಾ ಎಂದು ಕನ್ನಡ ಪರ ಹೋರಟಗಾರರು ಪ್ರತಿಭಟನೆ ನಡೆಸಿದರು. ಇನ್ನೂ ಕೆವಲ ಬೆರಳೆಣಿಕೆಯ ಸಂಖ್ಯೆಗಳಲ್ಲಿ ಕನ್ನಡ ಭಾಷೆಯಲ್ಲಿ ಚಿತ್ರ ಬಿಡುಗಡೆಯಾಗಿದ್ದು, ಸದ್ಯ ಕೆಜಿ ರಸ್ತೆಯ ಮೇನಕ ಚಿತ್ರಮಂದಿರದಲ್ಲಿ ಚಿತ್ರಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ, ದಿನದ ಮೊದಲನೆ ಶೋ ಖಾಲಿ ಹೊಡೆಯುತ್ತಿರುವುದು ಇದಕ್ಕೆ ಸಾಕ್ಷಿConclusion:Video attached

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.