ETV Bharat / sitara

'ನಿನ್ನೊಳಗಿನ ಕಿಚ್ಚು ನಿನ್ನನ್ನು ಸುಡದಿರಲಿ'.. ಫ್ಯಾನ್ಸ್​​ಗೆ​​ ಹೊಂಬಾಳೆ ಫಿಲ್ಮ್ಸ್ ಸರ್​ಪ್ರೈಸ್! - ಹೊಂಬಾಳೆ ಫಿಲ್ಸ್ಮ್ ಸಂಸ್ಥೆ ಹೊಸ ಸಿನಿಮಾ

ಕೆಜಿಎಫ್1​​​​ ಯಶಸ್ವಿ ಬೆನ್ನಲ್ಲೇ ಅದ್ಧೂರಿ ಚಿತ್ರಗಳ ನಿರ್ಮಾಣಕ್ಕೆ ಮುಂದಾಗಿರುವ ಹೊಂಬಾಳೆ ಫಿಲ್ಮ್ಸ್​​ ಸಂಸ್ಥೆ ಸದ್ಯ ಮತ್ತೊಂದು ಚಿತ್ರಕ್ಕೆ ಕೈ ಹಾಕಿದೆ. 'ನಿನ್ನೊಳಗಿನ ಕಿಚ್ಚು ನಿನ್ನನ್ನು ಸುಡದಿರಲಿ' ಎಂಬ ಒಂದು ಸಾಲು ಹೊಂದಿರುವ ಫೋಸ್ಟರ್​ನ್ನ ಬಿಡುಗಡೆ ಮಾಡಿರುವ ನಿರ್ಮಾಪಕ ವಿಜಯ್​ ಕಿರಗಂದೂರು ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದ್ದಾರೆ.

producer-vijay-kiragandur-announced-new-film
ಹೊಂಬಾಳೆ ಫಿಲ್ಮ್ಸ್
author img

By

Published : Aug 5, 2021, 5:07 PM IST

ಕೆಜಿಎಫ್​​​ ನಿರ್ಮಾಣದ ಮೂಲಕ ಸೌತ್ ಸಿನಿಮಾ ಇಂಡ್ರಸ್ಟಿ ಅಲ್ಲದೇ ರಾಷ್ಟ್ರ ಮಟ್ಟದಲ್ಲಿ ಕನ್ನಡ ಚಿತ್ರರಂಗದ ಕೀರ್ತಿ ಹಬ್ಬಿಸಿರುವ ಹೊಂಬಾಳೆ ಫಿಲ್ಮ್ಸ್​ ಸಂಸ್ಥೆ ಬ್ಯಾಕ್ ಟು ಬ್ಯಾಕ್ ಅದ್ಧೂರಿ ಸಿನಿಮಾಗಳನ್ನ ನಿರ್ಮಾಣ ಮಾಡುತ್ತಿದೆ. ಕೆಜಿಎಫ್ ಚಾಪ್ಟರ್​ 2​ ಮತ್ತು ಪ್ರಭಾಸ್ ನಟನೆಯ 'ಸಲಾರ್'​ ಅಂತಹ ಬಹುಕೋಟಿ ವೆಚ್ಚದ ಸಿನಿಮಾಗಳನ್ನ ನಿರ್ಮಿಸುತ್ತಿರುವ ನಿರ್ಮಾಪಕ ವಿಜಯ್​ ಕಿರಗಂದೂರು, ಈಗ 11ನೇ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ.

producer-vijay-kiragandur-announced-new-film
ನಿರ್ಮಾಪಕ ವಿಜಯ್​ ಕಿರಗಂದೂರು

ಈ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ನಿರ್ಮಾಪಕ ವಿಜಯ್ ಕಿರಗಂದೂರ್ ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದಾರೆ. 'ನಿನ್ನೊಳಗಿನ ಕಿಚ್ಚು ನಿನ್ನನ್ನು ಸುಡದಿರಲಿ' ಎಂಬ ಒಂದು ಸಾಲುಗಳನ್ನ ಹೊಂದಿರುವ ಫೋಸ್ಟರ್​ನ್ನ ಬಿಡುಗಡೆ ಮಾಡುವ ಮೂಲಕ, 11ನೇ ಸಿನಿಮಾದ ಟೈಟಲ್ ಹಾಗು ಪೋಸ್ಟರನ್ನ ನಾಳೆ ಬೆಳಗ್ಗೆ 11.45ಕ್ಕೆ ಬಿಡುಗಡೆ ಆಗಲಿದೆ ಅಂತಾ ವಿಜಯ್ ಕಿಚ್ಚು ಹಚ್ಚಿದ್ದಾರೆ.

ಫಾನ್ಸ್​​ ಹೊಂಬಾಳೆ ಫಿಲ್ಮ್ಸ್ ಸರ್​ಪ್ರೈಸ್​​​..!

ಸದ್ಯಕ್ಕೆ 'ಕೆಜಿಎಫ್​ ಚಾಪ್ಟರ್​ 2' ಮತ್ತು 'ಸಲಾರ್​' ಸಿನಿಮಾ ಚಿತ್ರೀಕರಣ ಕೆಲಸಗಳು ಭರದಿಂದ ಸಾಗಿವೆ. ಈ ಎರಡೂ ಚಿತ್ರವನ್ನ ನಿರ್ದೇಶಕ ಪ್ರಶಾಂತ್​ ನೀಲ್​ ನಿರ್ದೇಶನ ಮಾಡುತ್ತಿದ್ದಾರೆ. ಇದರ ಜೊತೆಗೆ ಶ್ರೀಮುರಳಿ ನಟನೆಯ 'ಭಗೀರ' ಸೆಟ್ಟೇರಬೇಕಿದೆ. ಇನ್ನು ಕೆಲ ದಿನಗಳ ಹಿಂದೆ ಪುನೀತ್ ರಾಜ್​ಕುಮಾರ್​ ಮತ್ತು ಪವನ್​ ಕುಮಾರ್​ ಕಾಂಬಿನೇಷನ್​ನ 'ದ್ವಿತ್ವ' ಚಿತ್ರದ ಶೀರ್ಷಿಕೆ ಮತ್ತು ಫಸ್ಟ್​ಲುಕ್​ ಲಾಂಚ್​ ಮಾಡಲಾಗಿತ್ತು.

ಈ ನಿರ್ಮಾಣ ಸಂಸ್ಥೆಯ 10ನೇ ಚಿತ್ರವಾಗಿ ರಕ್ಷಿತ್​ ಶೆಟ್ಟಿ ಅಭಿನಯದ 'ರಿಚರ್ಡ್​ ಆ್ಯಂಟೊನಿ' ಚಿತ್ರವನ್ನ ಅನೌನ್ಸ್​ ಮಾಡಲಾಗಿತ್ತು. ಈಗ ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯಿಂದ 11ನೇ ಸಿನಿಮಾಕ್ಕೆ ಕೈ ಹಾಕಿದೆ. ಆದರೆ ಯಾವ ಸ್ಟಾರ್ ಹೀರೋ ಜೊತೆ ಹೊಂಬಾಳೆ ಫಿಲ್ಸ್ಮ್ ಸಂಸ್ಥೆ ಸಿನಿಮಾ ನಿರ್ಮಾಣ ಮಾಡಲು ಮುಂದಾಗಿದೆ ಎನ್ನುವುದು ಸರ್​ ಪ್ರೈಸ್​ ​ ಆಗಿದೆ.

ಪೋಸ್ಟರ್​​ ಮೇಲಿರುವ ಟೈಟಲ್ಸ್​ ನೋಡಿದ್ರೆ ಕಿಚ್ಚು ಅಂದಾಕ್ಷಣ ಸುದೀಪ್ ಜೊತೆ ನಿರ್ಮಾಪಕ ವಿಜಯ ಕಿರಗಂದೂರ್ ಸಿನಿಮಾ ಮಾಡೋದಿಕ್ಕೆ ಕೈ ಜೋಡಿಸಿದ್ದಾರಾ ಎನ್ನುವ ಅನುಮಾನ ಕೂಡ ಶುರುವಾಗಿದೆ. ಸದ್ಯ ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿರುವ ನಿರ್ಮಾಪಕ ವಿಜಯ್​ ಇವೆಲ್ಲಕ್ಕೂ ನಾಳೆ ಉತ್ತರ ಕೊಡಲಿದ್ದಾರೆ. ಅಲ್ಲಿಯವರೆಗೂ ಫ್ಯಾನ್ಸ್​ ತಲೆ ಕೆರೆದುಕೊಂಡು ಯೋಚನೆ ಮಾಡ್ಲೇಬೇಕು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.