ETV Bharat / sitara

ಸದ್ದಿಲ್ಲದೆ ಸಾವಯವ ಕ್ರಾಂತಿ ಮಾಡ್ತಿದ್ದಾರೆ ಪೈಲ್ವಾನ್​ ನಿರ್ದೇಶಕ ಕೃಷ್ಣಾ ಪತ್ನಿ - ನಿರ್ಮಾಪಕಿ ಸ್ವಪ್ನಾ

ಹೆಬ್ಬುಲಿ, ಗಜಕೇಸರಿ ಸೇರಿದಂತೆ ಸೂಪರ್ ಹಿಟ್ ಚಿತ್ರಗಳ ನಿರ್ದೇಶಕ ಕೃಷ್ಣ ಅವರ ಮಡದಿ, ಕಿರುತೆರೆ ನಟಿ ಹಾಗೂ ನಿರ್ಮಾಪಕಿ ಸ್ವಪ್ನ ಕೃಷ್ಣ ರೈತ ಆಗಿದ್ದಾರೆ.

ಸ್ವಪ್ನಾ
author img

By

Published : Aug 3, 2019, 3:02 PM IST

ಸಿಲಿಕಾನ್ ಸಿಟಿ ಬೆಂಗಳೂರು ಈಗ ಕಾಂಕ್ರೀಟ್ ಕಾಡಾಗಿ ಪರಿಣಮಿಸುತ್ತಿದೆ. ಗಿಡ-ಮರಗಳು, ತೋಟಗಳು ಮಾಯವಾಗುತ್ತಿರುವ ಪ್ರಸ್ತುತ ಸನ್ನಿವೇಶದಲ್ಲಿ ಕನ್ನಡ ಚಿತ್ರರಂಗದ ಸಿನಿಮಾ ನಿರ್ಮಾಪಕಿ ಸ್ವಪ್ನಾ ಕೃಷ್ಣ ಚಿಕ್ಕದಾಗಿ ಚೊಕ್ಕದಾದ ಗಾರ್ಡ್​​ನಲ್ಲಿ ತರಕಾರಿ ಬೆಳೆಯುತ್ತಿದ್ದಾರೆ.

ನಾಗರಭಾವಿಯಲ್ಲಿ ತಮ್ಮ ಮನೆಯ ಕಾಂಪೌಂಡ್ ಒಳಗೆ ಹಾಗೂ ಟೆರೆಸ್​ ಮೇಲೆ ಕೃಷ್ಣ ದಂಪತಿ ಸಣ್ಣ ಪ್ರಮಾಣದಲ್ಲಿ ಸಾವಯವ ಕೃಷಿ ಮಾಡುತ್ತಿದ್ದಾರೆ. ವಿವಿಧ ಬಗೆಯ ತರಕಾರಿಗಳನ್ನು ಬೆಳೆಯುತ್ತಿದ್ದಾರೆ. ತರಕಾರಿ, ಸೊಪ್ಪು, ಹಣ್ಣು ಹಾಗೂ ಹೂ ಗಿಡಗಳನ್ನು ನೆಟ್ಟು, ಪ್ರೀತಿಯಿಂದ ಜೋಪಾನ ಮಾಡುತ್ತಿದ್ದಾರೆ. ಈ ಗಿಡಗಳಿಗೆ ಸಾವಯವ ಗೊಬ್ಬರವನ್ನು ಬಳಸುತ್ತಿದ್ದಾರೆ. ನಿತ್ಯ ಬಳಕೆಯ ನೀರನ್ನೇ ರಿಸೈಕಲ್ ಮಾಡಿ ತಮ್ಮ ಗಾರ್ಡ್​​ನಲ್ಲಿರುವ ಕೈತೋಟಕ್ಕೆ ಬಳಸುತ್ತಾರೆ. ಮಳೆ ನೀರು ಕೋಯ್ಲು ಪದ್ದತಿ ಅಳವಡಿಸಿ ಅಂತರ್​ಜಲ ವೃದ್ಧಿಗೆ ಪ್ರಾಶಸ್ತ್ಯ ನೀಡಿದ್ದಾರೆ.

ಸಾವಯವ ಕೃಷಿಯತ್ತ ನಿರ್ಮಾಪಕಿ ಸ್ವಪ್ನಾ

ನಿತ್ಯದ ಊಟಕ್ಕೆ ತಾವೇ ಬೆಳೆದ ಮೂಲಂಗಿ,ಹಾಗಲಕಾಯಿ, ಅವರೆಕಾಯಿ ಮೆಣಸಿನಕಾಯಿ ಸೇರಿದಂತೆ ಹಲವು ಬಗೆಯ ತರಕಾರಿ ಬಳಸುತ್ತಾರೆ. ಮಾರುಕಟ್ಟೆಯಲ್ಲಿ ಒಳ್ಳೆಯ ತರಕಾರಿ ಸಿಗುವುದಿಲ್ಲ, ಮಕ್ಕಳ ಆರೋಗ್ಯದ ದೃಷ್ಟಿಯಿಂದ ನಾವೇ ಬೆಳೆಯುತ್ತೇವೆ. ಮುಂದಿನ ದಿನಗಳಲ್ಲಿ ಹಸುಗಳನ್ನು ಸಾಕುವ ಯೋಚನೆ ಇದೇ ಎನ್ನುತ್ತಾರೆ ಸ್ವಪ್ನಾ ಕೃಷ್ಣ.

ಸಿನಿಮಾ ನಿರ್ಮಾಣ, ಧಾರವಾಹಿಗಳಲ್ಲಿ ನಟನೆಯಲ್ಲಿ ಬ್ಯುಸಿಯಿದ್ರೂ ಕೂಡ ಸ್ವಲ್ಪ ಟೈಮ್ ಮಾಡ್ಕೊಂಡು ಅಂದದ ಗಾರ್ಡ್​​ನಲ್ಲಿ ಸಮೃದ್ಧವಾದ ಬೆಳೆ ಬೆಳೆಯುತ್ತಿದ್ದಾರೆ ಈ ಸೆಲೆಬ್ರಿಟಿ ಜೋಡಿ.

Intro:ಪೈಲ್ವಾನ್ ನಿರ್ಮಾಪಕಿ ಸ್ವಪ್ನ ಕೃಷ್ಣ ಅವರ ಟೆರೆಸ್ ಗಾರ್ಡನ್ ನಲ್ಲಿ ನಳನಳಿಸುತ್ತಿವೆ ಹಣ್ಣು ತರಕಾರಿ ಗಿಡಗಳು..ಸ್ಪೆಷಲ್ ಸ್ಟೋರಿ

ಉದ್ಯಾನಗಳ ನಗರ ಎಂದೇ ಖ್ಯಾತಿಯಾಗಿದ್ಧ ಸಿಲಿಕಾನ್ ಸಿಟಿ ಬೆಂಗಳೂರು,ಇತ್ತೀಚಿನ ದಿನಗಳಲ್ಲಿ ಕಾಂಕ್ರೀಟ್ ಕಾಡು ಎಂಬ ಅಪಖ್ಯಾತಿಗೆ ತುತ್ತಾಗಿದೆ.
ಎಲ್ಲಿ ನೋಡಿದ್ರು ಅಕಾಶದ ಎತ್ತರದ ಬಿಲ್ಡಿಂಗ್ ಗಳೇ ಕಣ್ಣಿಗೆ ರಾಚುತ್ತವೆ‌. ಇನ್ನೂ ಬೆಂಗಳೂರಲ್ಲಿ ಉತ್ತಮ‌ಗಾಳಿ ಸಿಗೋದು ಕಷ್ಟವಾಗಿದೆ.ಇನ್ನೂ ಕೆಲವರು.ತಮ್ಮ ಮನೆಯ ಸುತ್ತ ಮುತ್ತ ಸ್ವಲ್ಪ ಜಾಗ ಸಿಕ್ಕರು ಅಲ್ಲಿ ಗಿಡಗಳ ಬೆಳಸಿ ಪೋಷಿಸುವ ಕೆಲಸ ಮಾಡ್ತಾರೆ.ಅದ್ರೆ ಬೆಂಗಳೂರಲ್ಲಿ ಇಂಚಿಚಿಂಗೂ ಚಿನ್ನದ ಬೆಲೆ ಇರುವ ಕಾರಣ ಮನೆಯ ಮುಂದಿನ ಗಾರ್ಡನ್ ಗಳು ಸಹ ಮಾಯವಾಗ್ತಿವೆ .ಅದ್ರೆ ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ವಾಸ ಮಾಡುವ ಜನರು ತಮ್ಮ ಮನೆಯಲ್ಲಿ ಜಾಗವಿಲ್ಲದ ಕಾರಣ ಟೆರೆಸ್‌ ಗಾರ್ಡನ್‌ ಬೆಳೆಯಲು ಒಲವು ತೋರುತ್ತಿದ್ದಾರೆ. ಇದೀಗ ಹೊಸ ಗಾರ್ಡನ್‌ ಟ್ರೆಂಡ್‌ ಕೂಡಾ ಹೌದು. ಎಸ್ ಈ ಟೆರೆಸ್ ಗಾರ್ಡನ್ ಟ್ರೆಂಡ್ ಗೆ ಹೆಬ್ಬುಲಿ ,ಗಜಕೇಸರಿ ಗಳಂತ ಸೂಪರ್ ಹಿಟ್ ಚಿತ್ರಗಳ ನಿರ್ದೇಶನ ಮಾಡಿ ಈಗ ಪೈಲ್ವಾನ್ ಚಿತ್ರವನ್ನು ನಿರ್ದೇಶನ ಮಾಡಿ ನಿರ್ಮಾಣ ಮಾಡಿರುವ ಕೃಷ್ಣ ಅವರ ಮಡದಿ ಕಿರುತೆರೆ ನಟಿ ನಿರ್ಮಾಪಕಿ ಸ್ವಪ್ನ ಕೃಷ್ಣ ಮಾರುಹೋಗಿದ್ದಾರೆ.ಎಸ್ ನಾಗರಭಾವಿಯಲ್ಲಿ ವಾಸವಿರುವ ಕೃಷ್ಣ ದಂಪತಿಗಳು ಅವರ ಮನೆಯ ಮೇಲೆ ಹಾಗು ಮನೆ ಮುಂದೆ ಇರುವ ಸ್ವಲ್ಪ ಜಾಗದಲ್ಕೇ ವಿವಿಧ ಜಾತಿಯ ಶೋ ಗಿಡಗಳು.
,ತರಕಾರಿ ,ಸೊಪ್ಪು, ಹಣ್ಣು,ಹಾಗೂ ಹೂಗಿಡಗಳ ನೆಟ್ಟು ಪೊಷಿಸಿ ಸುಂದರವಾದ ಪುಟ್ಟ ಗಾರ್ಡನ್ ಅನ್ನು ಮಾಡಿದ್ದಾರೆ. ವಿಶೇಷ ಅಂದ್ರೆ ‌ನಿರ್ದೇಶಕ ಕೃಷ್ಣ ಅವರು ಈಗಲೂ ಅವಿಭಕ್ತ ಕುಟುಂಬದಲ್ಲೇ ವಾಸ ಮಾಡುತ್ತಿದ್ದಾರೆ.ಅಲ್ಲದೆ ಬೆಂಗಳೂರಲ್ಲಿ ಕೆಮಿಕಲ್ ಬಳಸದೆ ಯಾವುದೆ ಸೊಪ್ಪು,ತರಕಾರಿ,ಹಣ್ಣು ಸಿಗುವುದಿಲ್ಲ ಎಂಬುದನ್ನರಿತರಿವ ಸ್ವಪ್ನ ಕೃಷ್ಣ ಅವರ ಮಕ್ಕಳ ಅರೋಗ್ಯದ ದೃಷ್ಟಿಯಿಂದ,ಅವರ ಮನೆಯ ಟೇರೆಸ್ ಮೇಲೆ ಸೊಪ್ಪು, ತರಕಾರಿ,ಹಣ್ಣುಗಳನ್ನು ಹಾಗು ಅವರ ಮನೆಯ ಮುಂದೆ ಇರುವ ಖಾಲಿ ಸೈಟ್ ನಲ್ಲೂ ಸಹ ವಿವಿಧ ಜಾತಿಯ ಹಣ್ಣು ಸೊಪ್ಪುತರಕಾರಿಗಳನ್ನು ಯಾವುದೇ ರಾಸಾಯನಿಕ ಗೊಬ್ಬರಗಳನ್ನುಬಳಸದೆ.
ಸಾವಯವ ಗೊಬ್ಬರದಿಂದಲೇ ಪರಿಸರ ಸ್ನೇಹಿಯಾದ ಗಾರ್ಡನ್ ಅನ್ನು ಪೋಷಿಸುತ್ತ ಬಂದಿದ್ದಾರೆ.ಅಲ್ಲದೆ ಸ್ವಪ್ನ ಕೃಷ್ಣ ಅವರು ಈ ಎಲ್ಲಾ ಗಿಡಗಳಿಗೆ ‌ಅಡುಗೆ ಮನೆ ಹಾಗೂ ಸ್ನಾನದ ಮನೆಯ ನೀರನ್ನು ರಿಸೈಕಲ್ ಮಾಡಿ ಬಳಸುತ್ತಾರೆ.ಜೊತೆಗೆ ಗಿಡಗಳಿಗೆ ಹಸುವಿನ ಗೊಬ್ಬರ ಹಾಗೂ ಅವರು ಪ್ರತಿನಿತ್ಯ ದೇವರ ಪೂಜೆಗೆ ಬಳಸುವ ಹೂವನ್ನು ಗಿಡಗಳಿಗೆ ಗೊಬ್ಬರವಾಗಿ ಬಳಸುತ್ತಾರೆ.
ಜೊತೆಗೆ ಮನೆಯಲ್ಲಿ ಬೋರ್ವೆಲ್ ಕೊಳವೆ ಬಾವಿ ಇದ್ದು ಮಳೆ ನೀರು ಕೋಯ್ಲು ಪದ್ದತಿ ಅಳವಡಿಸಿ ಕೋಂಡು ಟೇರೆಸ್ ಮೇಲೆ ಬಿದ್ಧ ಮಳೆ ನೀರು ಬೋರ್ ವೆಲ್ ರೀಚಾರ್ಜ್ ಆಗುವ ಹಾಗೆ ವ್ಯವಸ್ಥೆ ಮಾಡಿದ್ದು .ಮಳೆ ನೀರು ಮತೆ ಭೂಮಿ ಸೇರುವ ವ್ಯವಸ್ಥೆ ಮಾಡಿ ಗಮನ ಸೆಳೆದಿದ್ದಾರೆ.Body:ಅಲ್ಲದೆ ಸ್ವಪ್ನ ಅವರು ಅವರ ಮನೆಯ ಮೇಲಿನ ಪುಟ್ಟ ಗಾರ್ಡನ್ ನಲ್ಲೇ ಮನೆಗೆ ಬೇಕಾದ ,
ಮೂಲಂಗಿ,ಹಾಗಲಕಾಯಿ,ಚಪರದ ಅವರೆಕಾಯಿ,
ಮೆಣಸಿನಕಾಯಿ,ಟೋಮೋಟೊ, ಕ್ಯಾರೆಟ್ ,ಪುದೀನಾ , ಕರಿಬೇವು, ಪಾಲಕ್ ಸೊಪ್ಪು ಸೇರಿದಂತೆ ಸಪೋಟ,
ಪನ್ನೀರ್ಹಣ್ಣು,.ದಾಳಿಂಬೆ,ಕಿತ್ತಳೆ,ಸಿಬೇಹಣ್ಣು ,ಜೊತೆಗೆ ವಿವಿಧ ಬಗೆಯ ಹೂವಿನ ಗಿಡಗಳನ್ನು‌ ಬೆಳೆಸಿದ್ದಾರೆ.
ಅಲ್ಲದೆ ಈಗಿಡಗಳನ್ನು ಸ್ವಪ್ನ‌ ಅವರೆ ಅವರ ಅತ್ತೆ ಜೊತೆ ಸೇರಿ ಮಕ್ಕಳ ರೀತಿ ಸಾಕಿ ಬೆಳಸಿದ್ದಾರೆ. ಅಲ್ಲದೆ ಈ ಗಾರ್ಡನ್ ನಲ್ಲಿ ಬೆಳೆದ ಹಣ್ಣು ತರಕಾರಿ ಸೊಪ್ಪು ಗಳನ್ನು ಇವರು ಪ್ರತಿನಿತ್ಯ ಬಳಸುತ್ತಾರೆ.ಅಲ್ಲದೆ ಸ್ವಪ್ನಾ ಕೃಷ್ಣ ಅವರನ್ನು ಮುಂದಿನ ದಿನಗಳಲ್ಲಿ ಪಶು ಸಂಗೋಪನೆ ಮಾಡುವ ಪ್ಲಾನ್ ನಲ್ಲಿದ್ದಾರೆ.ಅದೇನೆ ಇರಲಿ ಸಿನಿಮಾ ನಿರ್ಮಾಣ,ಸಿರಿಯಲ್ ನಟನೆಯಲ್ಲಿ ಬ್ಯುಸಿಯಾಗಿದ್ರು.ಒತ್ತಡದ ಬ್ಯುಸಿ ಟೈಮ್ ನಲ್ಲೂ ಹಸಿರಿನಿಂದ ನಳನಳಿಸುವ ಪುಟ್ಟ ಗಾರ್ಡನ್ ಬೆಳಸಿ ಆ ಗಾರ್ಡನ್ ನಲ್ಲಿ ಕೊಂಚ ಸಮಯ ಕಳೆದು ಕೆಲಸದ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಸ್ವಪ್ನ ಕೃಷ್ಣ ಸುಂದರ ಸರಳ ಮಾರ್ಗ ಕಂಡು ಕೊಂಡಿದ್ದಾರೆ ಎಂದರೆ ತಪ್ಪಾಗಲಾರದು..

ಸತೀಶ ಎಂಬಿ

ಈ ಸ್ಲಗ್ ನೇಮ್ ನಲ್ಲಿ ಮೊಜೊದಲ್ಲಿ ವಿಡಿಯೋ ಕಳಿಸಿದೆ
KA_ BNG_ 5_ Driector krishna _ House _terrace garden_KA10012

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.