ನಟ ಅಜಯ್ ರಾವ್ ಮತ್ತು ರಚಿತಾ ರಾಮ್ ನಟನೆಯ 'ಲವ್ ಯೂ ರಚ್ಚು' ಸಿನಿಮಾ ಶೂಟಿಂಗ್ ವೇಳೆ ನಡೆದ ವಿದ್ಯುತ್ ಅವಘಡದಲ್ಲಿ ಫೈಟರ್ ವಿವೇಕ್ ಮತಪಟ್ಟಿದ್ದರು. ನಂತರ ಈ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿತ್ತು.
ಇದೀಗ ಮಾಧ್ಯಮಗಳ ಎದುರು ಕಾಣಿಸಿಕೊಂಡಿರುವ ಚಿತ್ರದ ನಿರ್ಮಾಪಕ ಮೃತ ವಿವೇಕ್ ಮನೆಗೆ ಭೇಟಿ ನೀಡಿ, ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಜೊತೆಗೆ 5 ಲಕ್ಷ ರೂ.ಗಳ ಪರಿಹಾರದ ಚೆಕ್ ಅನ್ನು ಅವರ ಕುಟುಂಬಕ್ಕೆ ನೀಡಿದ್ದಾರೆ.
ಸಿನೆಮಾದ ಶೂಟಿಂಗ್ ವೇಳೆ ಅವಘಡ ನಡೆದ ನಾಲ್ಕನೇ ದಿನಕ್ಕೆ ನಿರ್ಮಾಪಕ ಗುರುದೇಶಪಾಂಡೆ ಪತ್ನಿ ಪ್ರತಿಕಾ ದೇಶಪಾಂಡೆ ಪ್ರೆಸ್ ಮೀಟ್ ಕರೆದಿದ್ದರು. ಆಗ ಮೃತನ ಕುಟುಂಬಕ್ಕೆ 5 ಲಕ್ಷದ ಚೆಕ್ ಅನ್ನು ಕೊಡುವುದಾಗಿ ಹೇಳಿದ್ರು. ಆದ್ರೆ, ಇದುವರೆಗೂ ಚಿತ್ರತಂಡದವರು ಮೃತರ ಕುಟುಂಬಕ್ಕೆ ನೆರವು ನೀಡಿಲ್ಲವೆಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ವಿವೇಕ್ ತಾಯಿ ಉಮಾ ಕಣ್ಣೀರಿಟ್ಟಿದ್ದರು.
ಈ ಪ್ರಕರಣ ಸಂಬಂಧ ನಿರ್ಮಾಪಕ ಗುರುದೇಶಪಾಂಡೆ ನಾಪತ್ತೆಯಾಗಿದ್ದರು ಎಂಬ ಆರೋಪ ಕೇಳಿಬಂದಿತ್ತು. ಇದೀಗ ಜಾಮೀನು ಪಡೆದಿರುವ ಅವರು, ಮಾಗಡಿ ರಸ್ತೆಯಲ್ಲಿರೋ ವಿವೇಕ್ ಮನೆಗೆ ತೆರಳಿ ಸಾಂತ್ವನ ಹೇಳಿದ್ದಾರೆ.
ಇನ್ನೂ ಓದಿ: ಸ್ಯಾಂಡಲ್ವುಡ್ ಡ್ರಗ್ ಕೇಸ್: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ಡ್ರಗ್ ಪೆಡ್ಲರ್ ಅರೆಸ್ಟ್