ETV Bharat / sitara

'ಏನ್ ಚಂದನೋ ತಕ್ಕೋ..' ನವೀನ್​ ಸಜ್ಜು ವಿರುದ್ಧ ವಾಣಿಜ್ಯ ಮಂಡಳಿಗೆ ದೂರು - ಬಾಮಾ ಹರೀಶ್

ರಾಜ್ಯ ಪ್ರಶಸ್ತಿ ವಿಜೇತ ಹಾಡುಗಾರ, ಸಂಗೀತ ನಿರ್ದೇಶಕ ನವಿನ್ ಸಜ್ಜು ಹಾಡಿರುವ 'ಏನ್​ ಚಂದನೋ ತಕ್ಕೋ' ಹಾಡು ರಿಲೀಸ್​ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಸಖತ್​ ಸದ್ದು ಮಾಡುತ್ತಿದೆ. ಆದರೆ ಇದು ಒಕ್ಕಲಿಗ ಸಮುದಾಯಕ್ಕೆ ನೋವುಂಟು ಮಾಡಿದೆ ಎಂದು ನಿರ್ಮಾಪಕ ಬಾಮಾ ಹರೀಶ್​ ದೂರಿದ್ದು, ಇಂದು ವಾಣಿಜ್ಯ ಮಂಡಳಿಗೆ ದೂರು ದಾಖಲಿಸುತ್ತಿದ್ದಾರೆ.

ನವೀನ್​ ಸಜ್ಜು,naveen sajju
author img

By

Published : Sep 7, 2019, 10:10 AM IST

ರಾಜ್ಯ ಪ್ರಶಸ್ತಿ ವಿಜೇತ ಹಾಡುಗಾರ, ಸಂಗೀತ ನಿರ್ದೇಶಕ ನವಿನ್ ಸಜ್ಜು ಹಾಡಿರುವ 'ಏನ್​ ಚಂದನೋ ತಕ್ಕೋ' ಹಾಡು ರಿಲೀಸ್​ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಸಖತ್​ ಸದ್ದು ಮಾಡುತ್ತಿದೆ. ಆದರೆ ಈ ಪದ್ಯ ಒಕ್ಕಲಿಗ ಸಮುದಾಯದ ಭಾವನೆಗಳಿಗೆ ನೋವುಂಟು ಮಾಡಿದೆ ಎಂದು ನಿರ್ಮಾಪಕ ಬಾಮಾ ಹರೀಶ್​ ದೂರಿದ್ದು, ಇಂದು ವಾಣಿಜ್ಯ ಮಂಡಳಿಗೆ ದೂರು ನೀಡಲಿದ್ದಾರೆ.

ಈ ಹಾಡಿನಲ್ಲಿ ಒಕ್ಕಲಿಗರ ಸಮುದಾಯದ ಹೆಣ್ಣು ಮಕ್ಕಳ ಮನಸಿಗೆ ನೋವು ಉಂಟು ಮಾಡಿದೆ ಎಂದು ಆರೋಪಿಸಿ ವಾಣಿಜ್ಯ ಮಂಡಳಿಯ ಹಿರಿಯ ವ್ಯಕ್ತಿ ಹಾಗೂ ನಿರ್ಮಾಪಕ ಬಾಮಾ ಹರೀಶ್ ಅವರು ಮುಂದಾಳತ್ವದಲ್ಲಿ ನವೀನ್ ಸಜ್ಜು ವಿರುದ್ಧ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್ ಅವರಿಗೆ ಇಂದು ದೂರು ನೀಡಲಿದ್ದಾರೆ. ಒಕ್ಕಲಿಗರ ಸಂಘದ ಮಹಿಳಾ ರಾಜ್ಯಾಧ್ಯಕ್ಷೆ ಸಹ ವಾಣಿಜ್ಯ ಮಂಡಳಿಗೆ ಆಗಮಿಸಲಿದ್ದಾರೆ.

  • " class="align-text-top noRightClick twitterSection" data="">

ಹಾಡಿನ ವಿರುದ್ಧ ನಿರ್ಮಾಪಕ ಬಾಮಾ ಹರೀಶ್ ಸಾಮಾಜಿಕ ಜಾಲತಾಣದಲ್ಲಿ ಆರೋಪ ಮಾಡಿದ್ದು, ನವೀನ್ ಸಜ್ಜು ಹಾಡಿರುವ ‘ಏನ್​ ಚಂದನೋ ತಕ್ಕೋ’ ಹಾಡಿನಲ್ಲಿ ಒಕ್ಕಲಿಗ ಸಮುದಾಯದ ಹೆಣ್ಣು ಮಕ್ಕಳ ತೇಜೋವಧೆಯಾಗಿದ್ದು, ಹಾಡಿನಿಂದ ಸಮುದಾಯಕ್ಕೆ ಅಪಮಾನವಾಗಿದೆ. ಈ ಕೂಡಲೇ ಹಾಡನ್ನು ಸ್ಥಗಿತಗೊಳಿಸಿ ಅವರು ಕ್ಷಮೆ ಕೋರಬೇಕು. ಕಲಾ ಜಗತ್ತಿನಲ್ಲಿ ಯಾವುದೇ, ಧರ್ಮ ಜಾತಿಗಳ ತೇಜೋವಧೆ ಆಗಬಾರದು. ಇಲ್ಲಿ ಕಲೆಯೊಂದೇ ಮುಖ್ಯ ಎಂದವರು ಬರೆದುಕೊಂಡಿದ್ದಾರೆ.

ನವೀನ್ ಸಜ್ಜು ತಮ್ಮ ವಾಟ್ಸಪ್​ ಗ್ರೂಪ್​ನಲ್ಲಿ 'ಏನ್​ ಚಂದನೋ ತಕ್ಕೋ' ಹಾಡು 5 ಲಕ್ಷ ವೀಕ್ಷಕರಿಗೆ ಹಿಡಿಸಿ ಬಿಟ್ಟಿದೆ. ನಮ್ಮ ನಿರೀಕ್ಷೆಗೂ ಮಿಗಿಲಾಗಿ‌ ಪ್ರತಿಕ್ರಿಯೆ ಬರುತ್ತಿದೆ. ನಮ್ಮ ಕೆಲಸಕ್ಕೆ‌ ನೀವು ತೋರಿದ ಪ್ರೀತಿಗೆ ನಾವು ಆಬಾರಿ. ಹಾಡು ಇನ್ನೂ ಯಾರು ಕೇಳಿಲ್ಲ ಅವರೆಲ್ಲಾ ಕೇಳ್ಬಿಡ್ರಪ್ಪೋ...ಇಂಗೇನೊ ಮಾಡಿದ್ದೀವಿ... ನೋಡೇಳ್ರಪ್ಪ ಎಂಗದೆ? ಎಂದು ಹೇಳಿಕೊಳ್ಳುತ್ತಿದ್ದಾರೆ.

ನವಿನ್ ಸಜ್ಜು ವಿರುದ್ದ ದೂರು

ರಾಜ್ಯ ಪ್ರಶಸ್ತಿ ವಿಜೇತ ಹಾಡುಗಾರ, ಸಂಗೀತ ನಿರ್ದೇಶಕ ನವಿನ್ ಸಜ್ಜು ವಿರುದ್ದ ಈಗ ವಿವಾದ ಎದ್ದಿದೆ. ಅವರ ಒಂದು ಹಾಡು ಎನ್ ಚಂದನೋ ತಕಾ....ಒಕ್ಕಲಿಗರ ಸಮುದಾಯದ ಮನಸಿಗೆ ನೋವು ಉಂಟು ಮಾಡಿದೆ. ಇದರಿಂದ ಬೇಜಾರು ಮಾಡಿಕೊಂಡಿರುವವರು ಇಂದು ವಾಣಿಜ್ಯ ಮಂಡಳಿಗೆ ನವಿನ್ ಸಜ್ಜು ವಿರುದ್ದ ದೂರು ದಾಖಲಿಸುತ್ತಿದ್ದಾರೆ.

ವಾಣಿಜ್ಯ ಮಂಡಳಿಯ ಹಿರಿಯ ವ್ಯಕ್ತಿ ಹಾಗೂ ನಿರ್ಮಾಪಕ ಬಾ ಮ ಹರೀಶ್ ಅವರು ಮುಂದಾಳತ್ವದಲ್ಲಿ ನವಿನ್ ಸಜ್ಜು ವಿರುದ್ದ ದೂರು ವಾಣಿಜ್ಯ ಮಂಡಳಿ ಅಧ್ಯಕ್ಷ ಜೈ ರಾಜ್ ಅವರಿಗೆ ಇಂದು ಬೆಳಗ್ಗೆ 11.30 ಕ್ಕೆ ನೀಡಲಿದ್ದಾರೆ. ಬಾ ಮ ಹರೀಶ್ ಅವರ ಜೊತೆ ವೊಕ್ಕಲಿಗರ ಸಂಘ ಮಹಿಳಾ ರಾಜ್ಯಧಾಕ್ಷೆ ಸಹ ವಾಣಿಜ್ಯ ಮಂಡಳಿಗೆ ಆಗಮಿಸುವರು.

ನವೀನ್ ಸಜ್ಜು ಹಾಡಿರುವಏನ್ ಚಂದನ ತಕಾಹಾಡಿನಲ್ಲಿ  ಒಕ್ಕಲಿಗರ ಮನೆಯ ಹೆಣ್ಣುಮಕ್ಕಳ ತೇಜೋವಧೆಯಾಗಿದ್ದು, ಹಾಡಿನಿಂದ ಇಡೀ ಒಕ್ಕಲಿಗ ಸಮುದಾಯಕ್ಕೆ ಅಪಮಾನವಾಗಿದೆ.ಈ ಕೂಡಲೇ,ಹಾಡನ್ನು ಸ್ಥಗಿತಗೊಳಿಸಿ,ಒಕ್ಕಲಿಗ ಸಮುದಾಯಕ್ಕೆ  ಕ್ಷಮೆಯನ್ನು ಕೋರಬೇಕು.

ಕಲಾಜಗತ್ತಿನಲ್ಲಿ ಯಾವುದೇ ಧರ್ಮ ಜಾತಿಗಳ ತೇಜೋವಧೆ ಆಗಬಾರದು. ಇಲ್ಲಿ ಕಲೆ ಮುಖ್ಯ ಎಂದು ಹೇಳಲಾಗುತ್ತಿದೆ.

ಅತ್ತ ಕಡೆ ನವಿನ್ ಸಜ್ಜು ತಮ್ಮ ವ್ಹಾಟ್ಸ್ ಅಪ್ ಗ್ರೂಪ್ ಅಲ್ಲಿ ಎನ್ ಚಂದನೋ ತಕಾ...ಹಾಡು ಐದು ಲಕ್ಷ ವೀಕ್ಷಕರಿಗೆ ಹಿಡಿಸಿಬಿಟ್ಟಿದೆ. ನಮ್ಮ ನಿರೀಕ್ಷೆಗೂ ಮಿಗಿಲಾಗಿ‌ ಪ್ರತಿಕ್ರಿಯೆ ಬರುತ್ತಿದೆ. ನಮ್ಮ ಕೆಲಸಕ್ಕೆ‌ ನೀವು ತೋರಿದ ಪ್ರೀತಿಗೆ ನಾವು ಅಭಾರಿ.   ಹಾಡು ಇನ್ನೂ ಯಾರು ಕೇಳಿಲ್ಲ ಅವರೆಲ್ಲಾ ಕೇಳ್ಬಿಡ್ರಪ್ಪೋ.. ಇಂಗೇನೊ ಮಾಡಿದಿವಿ  ನೋಡೇಳ್ರಪ್ಪ ಎಂಗದೆ ಎಂದು ಹೇಳಿಕೊಳ್ಳುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.