ಬೆಂಗಳೂರು: ಲೈಫ್ ಈಸ್ ಬ್ಯೂಟಿಫುಲ್ ಸ್ಯಾಂಡಲ್ ವುಡ್ ನಲ್ಲಿ ಶೀರ್ಷಿಕೆಯಿಂದಲೇ ಸದ್ದು ಮಾಡುತ್ತಿರೋ ಚಿತ್ರ. ದಿಯಾ ಖ್ಯಾತಿಯ ಪೃಥ್ವಿ ಅಂಬರ್ ನಾಯಕರಾಗಿ ನಟಿಸಿರುವ, ಪ್ರಿಯಾಂಕ ಉಪೇಂದ್ರ ಮುಖ್ಯ ಭೂಮಿಕೆಯಲ್ಲಿರೋ ಲೈಫ್ ಈಸ್ ಬ್ಯೂಟಿಫುಲ್ ಚಿತ್ರ ಶೂಟಿಂಗ್ ಕಂಪ್ಲೀಟ್ ಮಾಡಿದೆ.
ಓದಿ: ಬದಲಾದ ಸಮಯದ ನೈಟ್ ಕರ್ಫ್ಯೂ ರಾತ್ರಿ 9ಕ್ಕೆ ಜಾರಿ
ಚಿತ್ರದಲ್ಲಿ ಪೃಥ್ವಿ ಅಂಬರ್ ಅಭಿನಯದ ಜೊತೆಗೆ, ಮೊದಲ ಬಾರಿಗೆ ಈ ಚಿತ್ರದಲ್ಲಿ ಹಾಡಿಗೂ ಧ್ವನಿಯಾಗಿದ್ದು, ಲಾಸ್ಯ ನಾಗರಾಜ್ ಚಿತ್ರದ ನಾಯಕಿಯಾಗಿದ್ದಾರೆ. ಉಳಿದಂತೆ ಸಿದ್ಲಿಂಗು ಶ್ರೀಧರ್, ಪದ್ಮ ಶಿವಮೊಗ್ಗ, ಮಾಂತೇಶ್ ಸೇರಿದಂತೆ ಸಾಕಷ್ಟು ಕಲಾವಿದರು ಈ ಚಿತ್ರದಲ್ಲಿದ್ದಾರೆ.
ಯುವ ನಿರ್ದೇಶಕರಾದ ಅರುಣ್‌ಕುಮಾರ್ ಹಾಗೂ ಸಾಬು ಅಲೋಶಿಯಸ್ ಸೇರಿ ಈ ಸಿನಿಮಾವನ್ನ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದ ಪೋಸ್ಟರ್ ನೋಡ್ತಾ ಇದ್ದರೆ, ಲವ್ ಸ್ಟೋರಿ ಜೊತೆಗೆ ಸೆಂಟಿಮೆಂಟ್ ಸಿನಿಮಾ ಅನಿಸುತ್ತೆ. ಮದನ್ ಬೆಳ್ಳಿಸಾಲು, ಧನಂಜಯ್ ರಂಜನ್ ಸಾಹಿತ್ಯದ ಗೀತೆಗಳಿಗೆ ನೋಬಿನ್ ಪೌಲ್ ಸಂಗೀತ ಸಂಯೋಜಿಸಿದ್ದಾರೆ. ಚಿತ್ರಕ್ಕೆ ಗೌತಮ್ ಛಾಯಾಗ್ರಹಣ, ಸಂದೀಪ್ ಸಂಕಲನವಿದೆ.
ಸದ್ಯ ಲೈಫ್ ಈಸ್ ಬ್ಯೂಟಿಫುಲ್ ಚಿತ್ರಕ್ಕೆ, ಚಿತ್ರತಂಡ ಕುಂಬಳಕಾಯಿ ಒಡೆದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನ ಚಿತ್ರತಂಡ ಬ್ಯುಸಿಯಾಗಲಿದೆ. ಮಮ್ಮಿ ಸಿನಿಮಾ ಖ್ಯಾತಿಯ ಲೋಹಿತ್ ಈ ಸಿನಿಮಾದ ನಿರ್ಮಾಣ ಮಾಡುತ್ತಿದ್ದಾರೆ. ಈ ಕೊರೊನಾ ಎಲ್ಲ ಮುಗಿದ ಮೇಲೆ ಪ್ರಿಯಾಂಕಾ ಉಪೇಂದ್ರ ಹಾಗೂ ಪೃಥ್ವಿ ಅಂಬರ್ ಅಭಿನಯದ ಲೈಫ್ ಈಸ್ ಬ್ಯೂಟಿಫುಲ್ ಸಿನಿಮಾ ತೆರೆಗೆ ಬರಲಿದೆ.