ಪ್ರಿಯಾಂಕ ಉಪೇಂದ್ರ ತಮ್ಮ ಅಮೋಘ ಅಭಿನಯದ ಮೂಲಕ ಕನ್ನಡಿಗರ ಪ್ರೀತಿಗಳಿಸಿದ್ದಾರೆ. 'ಲೈಫ್ ಈಸ್ ಬ್ಯೂಟಿಫುಲ್' ಸಿನಿಮಾ ಬಳಿಕ ಪ್ರಿಯಾಂಕ ಉಪೇಂದ್ರ ಕ್ಯಾಚಿ ಟೈಟಲ್ ಹೊಂದಿರುವ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. '1980' ಎಂಬ ಶೀರ್ಷಿಕೆ ಹೊಂದಿರುವ ಈ ಸಿನಿಮಾದಲ್ಲಿ ಪ್ರಿಯಾಂಕ ಉಪೇಂದ್ರ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಅಕ್ಟೋಬರ್ 28ರಿಂದ, '1980' ಹೆಸರಿನ ಸಿನಿಮಾದ ಚಿತ್ರೀಕರಣವನ್ನು ಕೊಡಗಿನ ಸುಂದರ ತಾಣಗಳಲ್ಲಿ ಸ್ಟಾರ್ಟ್ ಮಾಡಲಾಗುತ್ತಿದೆ. ಪ್ರಿಯಾಂಕ ಉಪೇಂದ್ರ ಪ್ರಧಾನ ಪಾತ್ರದಲ್ಲಿ ನಟಿಸುತ್ತಿರುವ ಈ ಚಿತ್ರದಲ್ಲಿ ಅರವಿಂದ ರಾವ್, ಶ್ರೀಧರ್, ಮುರಳಿ ಶರ್ಮ ಹೀಗೆ ಸಾಕಷ್ಟು ಜನ ಕಲಾವಿದರು ಅಭಿನಯಿಸುತ್ತಿದ್ದಾರೆ.
ಸವಾರಿ 2, ವಸಂತಕಾಲ, ಮಿಸ್ ಕಾಲ್ಡ್ ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ರಾಜಕಿರಣ್, ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ರಾಜ್‌ಕಿರಣ್ ಅವರೇ ಕಥೆ, ಚಿತ್ರಕಥೆಯನ್ನೂ ಬರೆದಿದ್ದಾರೆ.
ಆರ್.ಕೆ.ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಚಿತ್ರಕ್ಕೆ, ಚಿಂತನ್ ವಿಕಾಸ್ ಸಂಗೀತ ನಿರ್ದೇಶನವಿದೆ. ಜೀವನ್ ಅಂತೋನಿ ಛಾಯಾಗ್ರಹಣ, ಶ್ರೀಕಾಂತ್ ಸಂಕಲನವಿದೆ.