ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಚಂದ್ರಿಕಾ ಆಗಿ ನಟಿಸಿ ಸೀರಿಯಲ್ ಪ್ರಿಯರ ಗಮನ ಸೆಳೆದಿರುವ ಪ್ರಿಯಾಂಕಾ ಶಿವಣ್ಣ ತುಂಬಾ ಫೇಮಸ್ ಆಗಿದ್ದು ದೊಡ್ಮನೆಯೊಳಗೆ ಕಾಲಿಟ್ಟ ಬಳಿಕ. ಬಿಗ್ ಬಾಸ್ ಸೀಸನ್ 7ರ ಸ್ಪರ್ಧಿಯಾಗಿ ಕಾಣಿಸಿಕೊಂಡಿರುವ ಪ್ರಿಯಾಂಕಾ ಫೈನಲ್ಗೆ ಒಂದು ವಾರ ಬಾಕಿ ಇದ್ದಾಗಲೇ ಮನೆಯಿಂದ ಹೊರಬಂದಿದ್ದರು. ಅಂದಹಾಗೆ ಪ್ರಿಯಾಂಕಾ ಶಿವಣ್ಣ ಬಿಗ್ ಬಾಸ್ ಮನೆಯಿಂದ ಹೊರಬಂದು ವರ್ಷ ಕಳೆದಿದೆ.
![priyanka recall big boss throwback](https://etvbharatimages.akamaized.net/etvbharat/prod-images/kn-bng-03-priyanka-bbthrowback-photo-ka10018_28012021212515_2801f_1611849315_970.jpg)
ಹಳೆಯ ಸುಮಧುರ ಕ್ಷಣಗಳನ್ನು ನೆನಪಿಸಿಕೊಂಡಿರುವ ಪ್ರಿಯಾಂಕಾ, ತಮ್ಮ ಎಲಿಮಿನೇಷನ್ ವಿಡಿಯೋ ತುಣುಕನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಕಿಚ್ಚ ಸುದೀಪ್ ಜೊತೆ ಸಂಭಾಷಣೆಯಲ್ಲಿ ತೊಡಗಿಸಿಕೊಂಡಿರುವ ಸುಂದರ ನೆನಪುಗಳನ್ನು ಹಂಚಿಕೊಂಡಿರುವ ಪ್ರಿಯಾಂಕಾ, "ಕಳೆದ ವರ್ಷ ಈ ದಿನ, ಮರೆಯಲಾರದ ಬಿಬಿ ನೆನಪುಗಳು" ಎಂದು ಬರೆದುಕೊಂಡಿದ್ದಾರೆ
![priyanka recall big boss throwback](https://etvbharatimages.akamaized.net/etvbharat/prod-images/kn-bng-03-priyanka-bbthrowback-photo-ka10018_28012021212515_2801f_1611849315_986.jpg)
ಬಿಗ್ ಬಾಸ್ ಸೀಸನ್ 7ರಲ್ಲಿ ಮನೆಗೆ ಎರಡನೇ ಸ್ಪರ್ಧಿಯಾಗಿ ಪ್ರವೇಶ ಪಡೆದ ಪ್ರಿಯಾಂಕಾ ಸದಾ ಸಹಸ್ಪರ್ಧಿಗಳಿಗೆ ಸ್ಪರ್ಧೆ ನೀಡುತ್ತಿದ್ದರು. ವಿವಾದಕ್ಕೆ ಒಳಗಾಗದೇ ಇದ್ದ ಪ್ರಿಯಾಂಕಾ, 106 ದಿನಗಳಲ್ಲಿ ಉತ್ತಮ ಪೈಪೋಟಿ ನೀಡಿದ್ದು ನಂತರ ದೊಡ್ಮನೆಯಿಂದ ಹೊರಬಂದರು.
![priyanka recall big boss throwback](https://etvbharatimages.akamaized.net/etvbharat/prod-images/kn-bng-03-priyanka-bbthrowback-photo-ka10018_28012021212515_2801f_1611849315_251.jpg)
ಸದ್ಯ ಸತ್ಯ ಧಾರಾವಾಹಿಯಲ್ಲಿ ನಾಯಕಿ ಸತ್ಯಳ ಅಕ್ಕ ದಿವ್ಯಳಾಗಿ ನಟಿಸುತ್ತಿರುವ ಪ್ರಿಯಾಂಕಾ, ಫ್ಯಾಂಟಸಿ ಸಿನಿಮಾದ ಮೂಲಕ ಬೆಳ್ಳಿತೆರೆಗೂ ಕಾಲಿಟ್ಟಾಗಿದೆ. ಫ್ಯಾಂಟಸಿ ಸಿನಿಮಾದಲ್ಲಿ ವಿಲನ್ ಆಗಿ ನಟಿಸಿದ್ದಾರೆ.
- " class="align-text-top noRightClick twitterSection" data="
">