ETV Bharat / sitara

Bigg Boss Season 8: ಆಟ ಮರೆತ ಪ್ರಿಯಾಂಕಾ, ದಿವ್ಯಾ ಸುರೇಶ್​ಗೆ ಏಟು! - ಬಿಗ್​ಬಾಸ್ ಸೀಸನ್ 8ರ ಸೆಕೆಂಡ್ ಇನ್ನಿಂಗ್ಸ್

ಬಿಗ್​ಬಾಸ್ ಮನೆಯ ಕ್ಯಾಪ್ಟನ್ಸಿಗಾಗಿ ನೀಡಿದ್ದ ಟಾಸ್ಕ್​ ವೇಳೆ ಪ್ರಿಯಾಂಕಾ ಆಟ ಮರೆತು ಸಿಟ್ಟಿನಿಂದ ದಿವ್ಯಾ ಸುರೇಶ್ ಅವರ ಮೇಲೆ ಕೈ ಮಾಡಿದ್ದಾರೆ.

Bigg Boss Season 8
ಆಟ ಮರೆತ ಪ್ರಿಯಾಂಕಾ, ದಿವ್ಯಾ ಸುರೇಶ್​ಗೆ ಏಟು
author img

By

Published : Jul 8, 2021, 9:23 AM IST

ಬಿಗ್​​​​​ಬಾಸ್ ಮನೆಯಲ್ಲಿ ಕ್ಯಾಪ್ಟನ್ ಶಿಪ್​ಗಾಗಿ ನಡೆಯುತ್ತಿರುವ ಟಾಸ್ಕ್​ಗಳು ದಿನೇದಿನೇ ಹೊಸ ರೂಪ ಪಡೆಯುತ್ತಿವೆ. ನಿನ್ನೆ ನಡೆದ ಮೊಟ್ಟೆ ಒಡೆಯುವ ಟಾಸ್ಕ್​ನಲ್ಲಿ ಪ್ರಿಯಾಂಕಾ ತಿಮ್ಮೇಶ್ ಆಟ ಮರೆತು, ದಿವ್ಯಾ ಸುರೇಶ್ ಅವರಿಗೆ ಹೊಡೆದಿದ್ದಾರೆ. ಸ್ಪರ್ಧಿಗಳು ಹಣ ಸಂಪಾದಿಸಲು 'ಬಿಗ್​​​​​ಬಾಸ್' ನೀಡಿದ ಮೊದಲ ಟಾಸ್ಕ್ ತಮ್ಮ ತಮ್ಮ ತಲೆಗೆ ತಾವೇ ಮೊಟ್ಟೆಗಳನ್ನು ಒಡೆದುಕೊಳ್ಳಬೇಕು. ಅನಂತರ ಅತಿ ಹೆಚ್ಚು ಮೊಟ್ಟೆಗಳನ್ನು ಒಡೆದುಕೊಳ್ಳುವ ಸ್ಪರ್ಧಿಗಳು ಚಿನ್ನದ ಮೊಟ್ಟೆ ಹೊಡೆಯುವ ಟಾಸ್ಕ್​ನಲ್ಲಿ ಭಾಗವಹಿಸಬಹುದಾಗಿತ್ತು. ದಿವ್ಯಾ ಸುರೇಶ್, ಅರವಿಂದ್, ಮಂಜು, ಚಂದ್ರಚೂಡ್ ಹಾಗೂ ಶಮಂತ್ ಚಿನ್ನದ ಮೊಟ್ಟೆ ಒಡೆಯುವ ಸ್ಪರ್ಧೆಗೆ ಆಯ್ಕೆಯಾದರು.

Bigg Boss Season 8
ಪ್ರಿಯಾಂಕಾ, ದಿವ್ಯಾ ಸುರೇಶ್​ ಮತ್ತು ಶಮಂತ್

ಈ ಸ್ಪರ್ಧಿಗಳು ಬೇರೆಯವರ ತಲೆಗೆ ಮೊಟ್ಟೆ ಒಡೆದು ಅವರ ಬಳಿ ಇರುವ ಹಣವನ್ನೆಲ್ಲ ಪಡೆಯಬಹುದಾಗಿತ್ತು. ಈ ಚಿನ್ನದ ಮೊಟ್ಟೆಯ ಸುತ್ತಿನಲ್ಲಿ ಶಮಂತ್, ಪ್ರಿಯಾಂಕಾ ತಿಮ್ಮೇಶ್​ ಅವರ ತಲೆಗೆ ಮೊಟ್ಟೆ ಒಡೆಯಲು ಪ್ರಯತ್ನಿಸುತ್ತಾರೆ. ಆಗ ಪ್ರಿಯಾಂಕಾ ತಿಮ್ಮೇಶ್ ಬಾತ್ ರೂಂನಲ್ಲಿ‌ ಇರುತ್ತಾರೆ. ತಪ್ಪಿಸಿಕೊಳ್ಳಲು ಸ್ವಿಮ್ಮಿಂಗ್​ ಪೂಲ್​ಗೆ ಇಳಿಯುತ್ತಾರೆ. ಆಗ ದಿವ್ಯಾ ಸುರೇಶ್​ ಪೂಲ್​ನಲ್ಲಿ ಇಳಿದು ಪ್ರಿಯಾಂಕಾ ತಲೆಗೆ ಮೊಟ್ಟೆ ಒಡೆಯುತ್ತಾರೆ. ಈ ವೇಳೆ ಪ್ರಿಯಾಂಕಾ ಸಿಟ್ಟಿನಿಂದ ದಿವ್ಯಾ ಸುರೇಶ್ ಮೇಲೆ ಕೈ ಮಾಡುತ್ತಾರೆ.

ಹೀಗಾಗಿ, ಪ್ರಿಯಾಂಕಾ ಮೇಲೆ ದಿವ್ಯಾ ಸುರೇಶ್ ಸಿಟ್ಟಾಗುತ್ತಾರೆ. ನಂತರ ಪ್ರಿಯಾಂಕಾ, ದಿವ್ಯಾ ಸುರೇಶ್ ಅವರ ಲಾಕರ್​ನಲ್ಲಿದ್ದ ಹಣದಲ್ಲಿ ಸ್ವಲ್ಪ ತೆಗೆದು ಹರಿದು ಹಾಕುತ್ತಾರೆ. ಬಳಿಕ ಇದಕ್ಕೆಲ್ಲಾ ಶಮಂತ್​ ಕಾರಣ. ಹೀಗಾಗಿ, ಶಮಂತ್ ಹಣವನ್ನು ಕದಿಯುವುದಾಗಿ ಎಚ್ಚರಿಸಿದ್ದಾರೆ.

ಇದನ್ನೂ ಓದಿ: ಡಾಲಿ ಧನಂಜಯ್​ಗೆ ಕರೆ ಮಾಡಿದ ‘ಪುಷ್ಪಾ’.. ಮುತ್ತಿನನಗರಿಗೆ ಹಾರಲಿರುವ ಭೈರವ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.