ETV Bharat / sitara

ಲವ್ಲಿ ಸ್ಟಾರ್ 'ಪ್ರೇಮಂ ಪೂಜ್ಯಂ' ಬಿಡುಗಡೆ ಮುಂದೂಡಿಕೆ: ಕಾರಣ ಏನು ಗೊತ್ತಾ? - sandalwood news

ಲವ್ಲಿ ಸ್ಟಾರ್​​ ಪ್ರೇಮ್ ಅಭಿನಯದ 25ನೇ ಚಿತ್ರವಾದ 'ಪ್ರೇಮಂ ಪೂಜ್ಯಂ' ಅ.29ರಂದು ರಾಜ್ಯಾದ್ಯಂತ ಬಿಡುಗಡೆಯಾಗಬೇಕಿತ್ತು. ಆದರೆ, ಪ್ರೇಕ್ಷಕರು ಮತ್ತು ಚಿತ್ರರಂಗದವರ ಅಭಿಪ್ರಾಯವನ್ನು ಆಧರಿಸಿ ಚಿತ್ರ ತಂಡದವರು ಎರಡು ವಾರಗಳ ಕಾಲ ಬಿಡುಗಡೆಯನ್ನು ಮುಂದೂಡಿದ್ದಾರೆ.

premam-poojyam-movie-release-postponed
ಪ್ರೇಕ್ಷಕರ ಒತ್ತಾಯದ ಮೇರೆಗೆ ಮುಂದೆ ಹೋಯ್ತು 'ಪ್ರೇಮಂ ಪೂಜ್ಯಂ' ಬಿಡುಗಡೆ
author img

By

Published : Oct 27, 2021, 12:23 PM IST

ಒಂದು ಸಿನಿಮಾವನ್ನು ಆದಷ್ಟು ಬೇಗ ಬಿಡುಗಡೆ ಮಾಡಿ, ಇದೇ ದಿನ ಬಿಡುಗಡೆ ಮಾಡಿ ಎಂದು ಪ್ರೇಕ್ಷಕರು, ಅಭಿಮಾನಿಗಳು ಹೇಳುವುದು ಸಹಜ. ಆದರೆ, ಇದೇ ದಿನ ಬಿಡುಗಡೆ ಮಾಡಬೇಡಿ ಎಂದು ಹೇಳುವುದು ಅಪರೂಪ. ಹೀಗೆ ಪ್ರೇಕ್ಷಕರ ಅಭಿಪ್ರಾಯ ಸಂಗ್ರಹಿಸಿದ ಚಿತ್ರತಂಡವು 'ಪ್ರೇಮಂ ಪೂಜ್ಯಂ' ಬಿಡುಗಡೆಯನ್ನು ಮುಂದೂಡಿದೆ.

ಲವ್ಲಿ ಸ್ಟಾರ್​​ ಪ್ರೇಮ್ ಅಭಿನಯದ 25ನೇ ಚಿತ್ರವಾದ 'ಪ್ರೇಮಂ ಪೂಜ್ಯಂ' ಅ.29ರಂದು ರಾಜ್ಯಾದ್ಯಂತ ಬಿಡುಗಡೆಯಾಗಬೇಕಿತ್ತು. ಆದರೆ, ಪ್ರೇಕ್ಷಕರು ಮತ್ತು ಚಿತ್ರರಂಗದವರ ಅಭಿಪ್ರಾಯವನ್ನು ಆಧರಿಸಿ ಚಿತ್ರ ತಂಡದವರು ಎರಡು ವಾರಗಳ ಕಾಲ ಬಿಡುಗಡೆಯನ್ನು ಮುಂದೂಡಿದ್ದಾರೆ. ಚಿತ್ರವು ಇದೀಗ ನ.12ರಂದು ಬಿಡುಗಡೆಯಾಗಲಿದೆ.

ಈ ವಿಚಾರವನ್ನು ಸ್ವತಃ ಪ್ರೇಮ್ ಹೇಳಿಕೊಂಡಿದ್ದಾರೆ. 'ನಾವು ಮುಂಚೆ ಅ.29ಕ್ಕೆ ಚಿತ್ರ ಬಿಡುಗಡೆ ಮಾಡಬೇಕು ಎಂದುಕೊಂಡಿದ್ದೆವು. ಆದರೆ, ಇದನ್ನು ಕೇಳಿದವರೆಲ್ಲ ಬೇಡ ಎಂದರು. ಏಕೆಂದರೆ, ಅದೇ ದಿನ 'ಭಜರಂಗಿ 2' ಸಹ ಬಿಡುಗಡೆಯಾಗುತ್ತಿದೆ. ಇದರಿಂದ ಕ್ಲಾಶ್ ಆಗುವುದು ಸಹಜ. ಹಾಗಾಗಿ, ಚಿತ್ರವನ್ನು ಮುಂದೂಡಿ ಎನ್ನುತ್ತಿದ್ದಾರೆ. ನಮಗೂ ಇದು ಸರಿ ಎನಿಸಿದ್ದರಿಂದ ನ.12ರಂದು ಚಿತ್ರ ಬಿಡುಗಡೆ ಮಾಡುತ್ತಿದ್ದೇವೆ'ಎನ್ನುತ್ತಾರೆ ಪ್ರೇಮ್​.

ಜೊತೆಗೆ ಇನ್ನೂ ಒಂದು ಕಾರಣವಿದೆಯಂತೆ. ಅದೇನೆಂದರೆ, ಚಿತ್ರವನ್ನು ಬಹಳ ಗ್ರಾಂಡ್ ಆಗಿ ಬಿಡುಗಡೆ ಮಾಡುವುದು ಚಿತ್ರತಂಡದ ಯೋಚನೆ. ರಾಜ್ಯಾದ್ಯಂತ 350ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆ ಮಾಡಬೇಕು ಅಂದುಕೊಂಡಿದ್ದೇವೆ. ಆದರೆ, ಈ ವಾರ ಬಿಡುಗಡೆ ಮಾಡಿದರೆ ಅದು ಕಷ್ಟವಾಗುತ್ತದೆ. ಈಗಾಗಲೇ 'ಕೋಟಿಗೊಬ್ಬ 3' ಮತ್ತು 'ಸಲಗ' ಚಿತ್ರಗಳು ಕೆಲವು ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿವೆ. ಈ ವಾರ 'ಭಜರಂಗಿ 2' ಚಿತ್ರ ಬಂದರೆ, ನಾವು ಅಂದುಕೊಂಡಷ್ಟು ಅದ್ಧೂರಿಯಾಗಿ ಚಿತ್ರ ಬಿಡುಗಡೆ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ. ಹಾಗಾಗಿ, ಚಿತ್ರವನ್ನು ಮುಂದೂಡಲಾಗಿದೆ ಎಂದು ಪ್ರೇಮ್ ಹೇಳಿದ್ದಾರೆ.

ಇದನ್ನೂ ಓದಿ: 'ಸಲಗ ಸಂಭ್ರಮ': ಊರೂರು ಸುತ್ತಿ ಅಭಿಮಾನಿಗಳಿಗೆ ಚಿತ್ರತಂಡದಿಂದ ಧನ್ಯವಾದ ಸಮರ್ಪಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.