ಇತ್ತೀಚೆಗೆ ವರ್ಚುವಲ್ ಸಂದರ್ಶನವೊಂದರಲ್ಲಿ ಜ್ಯೂನಿಯರ್ ಎನ್ಟಿಆರ್ ತಾವು ಪ್ರಶಾಂತ್ ನೀಲ್ ನಿರ್ದೇಶನದ ಒಂದು ಚಿತ್ರದಲ್ಲಿ ನಟಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಈ ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆಯು ನಿರ್ಮಿಸುತ್ತಿದೆ.
ಈ ಹಿಂದೆ ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ಜ್ಯೂನಿಯರ್ ಎನ್ಟಿಆರ್ ಅಭಿನಯದ ಜನತಾ ಗ್ಯಾರೇಜ್ ಎಂಬ ಚಿತ್ರವನ್ನು ನಿರ್ಮಿಸಿತ್ತು. ಕೊರಟಾಲ ಶಿವ ನಿರ್ದೇಶನದ ಈ ಚಿತ್ರದಲ್ಲಿ ಮೋಹನ್ ಲಾಲ್ ಸಹ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆ ನಂತರ ಬೇರೆ ಹೀರೋಗಳ ಚಿತ್ರಗಳ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದ ಮೈತ್ರಿ ಮೂವಿ ಮೇಕರ್ಸ್ ಇದೀಗ ಜ್ಯೂನಿಯರ್ ಎನ್ಟಿಆರ್ ಅಭಿನಯದಲ್ಲಿ ಮತ್ತೊಂದು ಸಿನಿಮಾ ನಿರ್ಮಿಸುವುದಕ್ಕೆ ಮುಂದಾಗಿದೆ.
ಓದಿ: ಕಣ್ಣೀರು, ನಗು, ತರ್ಲೆ, ಹಾಸ್ಯದ ಮೂಲಕ ಅಂತ್ಯವಾದ ಬಿಗ್ ಬಾಸ್ ಸೀಸನ್ 8
ಪ್ರಶಾಂತ್ ನಿರ್ದೇಶನದ ಚಿತ್ರದಲ್ಲಿ ನಟಿಸುತ್ತಿರುವುದಾಗಿ ಜ್ಯೂನಿಯರ್ ಎನ್.ಟಿ.ಆರ್ ಒಪ್ಪಿಕೊಂಡಿದ್ರೂ ಅದಕ್ಕೆ ಇನ್ನೊಂದಿಷ್ಟು ಸಮಯವಿದೆ. ಪ್ರಮುಖವಾಗಿ, ಅವರು ಮೊದಲಿಗೆ ರಾಜಮೌಳಿ ನಿರ್ದೇಶನದ `ಆರ್‌ಆರ್‌ಆರ್' ಚಿತ್ರವನ್ನು ಮುಗಿಸಬೇಕು. ಆ ನಂತರ ಕೊರಟಾಲ ಶಿವ ಅಭಿನಯದ ಹೊಸ ಚಿತ್ರದಲ್ಲಿ ನಟಿಸಿ, ಪ್ರಶಾಂತ್ ಜೊತೆಗೆ ಸೇರಿಕೊಳ್ಳಲಿದ್ದಾರೆ.
ಪ್ರಶಾಂತ್ ಸಹ ಅಷ್ಟೇ. ಮೊದಲಿಗೆ `ಕೆಜಿಎಫ್ 2' ಚಿತ್ರದ ಬಿಡುಗಡೆಯಾಗಿ ಪ್ರಭಾಸ್ ಅಭಿನಯದ `ಸಲಾರ್' ಚಿತ್ರವನ್ನು ಮುಗಿಸಿ, ಆ ನಂತರ ಜ್ಯೂನಿಯರ್ ಎನ್ಟಿಆರ್ ಚಿತ್ರದ ನಿರ್ದೇಶನಕ್ಕೆ ಅವರು ಕೈ ಹಾಕಲಿದ್ದಾರೆ. ಬಹುಶಃ ಮುಂದಿನ ವರ್ಷದ ಕೊನೆಗೆ ಜ್ಯೂನಿಯರ್ ಎನ್ಟಿಆರ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್‌ನ ಈ ಸಿನಿಮಾ ಶುರುವಾಗಬಹುದು.
ಓದಿ : ಆದಿಚುಂಚನಗಿರಿ ಸಂಸ್ಥಾನದ ಕೆ.ಆರ್.ನಗರ ಶಾಖಾ ಮಠದ ಸ್ವಾಮೀಜಿ ಕೋವಿಡ್ನಿಂದ ನಿಧನ