ಕೊರೊನಾ ಭೀತಿ ದಿನೇ ದಿನೆ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿ ಮಾಡುತ್ತಿದೆ. ಇದರ ಎಫೆಕ್ಟ್ ಸೌತ್ ಚಿತ್ರರಂಗಕ್ಕೂ ತಟ್ಟಿದೆ. ಸ್ಯಾಂಡಲ್ವುಡ್ನಲ್ಲಿ ಕೆಲ ಸ್ಟಾರ್ ನಟರು ತಮ್ಮ ಮನೆ ಹಾಗೂ ಫಾರ್ಮ್ ಹೌಸ್ಗಳಲ್ಲಿ ಕುಟುಂಬ ಸದಸ್ಯರ ಜೊತೆ ಕಾಲ ಕಳೆಯುತ್ತಿದ್ದಾರೆ.
ಈಗ ಬಹುಭಾಷಾ ನಟ ಪ್ರಕಾಶ್ ರೈಗೂ ಈ ಕೊರೊನಾ ಭೀತಿ ಎದುರಾಗಿದೆ. ಹೀಗಾಗಿ ಪ್ರಕಾಶ್ ರೈ ಫ್ಯಾಮಿಲಿ ಸಮೇತ ಚೆನ್ನೈನಲ್ಲಿರೋ ಫಾರ್ಮ್ ಹೌಸ್ನಲ್ಲಿ ಕಾಲ ಕಳೆಯುತ್ತಿದ್ದಾರೆ. ತಮ್ಮ ಎರಡನೇ ಪತ್ನಿ ಮಗ ವೇದಾಂತ್ ಜೊತೆ ಫಾರ್ಮ್ ಹೌಸ್ನಲ್ಲಿ ಪ್ರಕಾಶ್ ರೈ ಎಂಜಾಯ್ ಮಾಡುತ್ತಿದ್ದಾರೆ.
ಬೆಳಗಿನ ಜಾವದ ಪರಿಸರದಲ್ಲಿ ಪ್ರಕಾಶ್ ರೈ, ಮಗ ವೇದಾಂತ್ ಆಟವಾಡುತ್ತಿದ್ದುದ್ದನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.