ETV Bharat / sitara

ಸ್ಪೇನ್​​ನಲ್ಲಿ ಪ್ರಭಾಸ್‌ಗೆ ಶಸ್ತ್ರಚಿಕಿತ್ಸೆ: ಶೀಘ್ರ ಗುಣಮುಖರಾಗಲು ಅಭಿಮಾನಿಗಳ ಹಾರೈಕೆ - ಸ್ಪೇನ್​​ನಲ್ಲಿ ಶಸ್ತ್ರಚಿಕಿತ್ಸೆಗೊಳಗಾದ ಪ್ರಭಾಸ್​​

'ಸಲಾರ್'​ ಸಿನಿಮಾ ಚಿತ್ರೀಕರಣದ ವೇಳೆ ಗಾಯಗೊಂಡಿದ್ದ ನಟ ಪ್ರಭಾಸ್ ಇದೀಗ ಸ್ಪೇನ್​​ನಲ್ಲಿ ಶಸ್ತ್ರಚಿಕಿತ್ಸೆಗೊಳಗಾಗಿದ್ದು, ಮುಂದಿನ ಕೆಲವು ದಿನಗಳ ಕಾಲ ವಿಶ್ರಾಂತಿ ಪಡೆದುಕೊಳ್ಳಲಿದ್ದಾರೆ.

Prabhas undergoes surgery in Spain
Prabhas undergoes surgery in Spain
author img

By

Published : Mar 18, 2022, 3:36 PM IST

ಹೈದರಾಬಾದ್​​(ತೆಲಂಗಾಣ): 'ಬಾಹುಬಲಿ' ಸಿನಿಮಾ ಖ್ಯಾತಿಯ ನಟ ಪ್ರಭಾಸ್​​ ಅವರು ಸ್ಪೇನ್​ನಲ್ಲಿ ಶಸ್ತ್ರಚಿಕಿತ್ಸೆಗೊಳಗಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆಂಬ ಮಾಹಿತಿ ಲಭ್ಯವಾಗಿದೆ. ಇದರ ಬೆನ್ನಲ್ಲೇ ಶೀಘ್ರ ಗುಣಮುಖರಾಗುವಂತೆ ಅವರ ಅಭಿಮಾನಿಗಳು ಹಾರೈಸಿದ್ದಾರೆ.

ಇತ್ತೀಚೆಗೆ ರಿಲೀಸ್​ ಆಗಿರುವ 'ರಾಧೆ ಶ್ಯಾಮ್'​ ಚಿತ್ರಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿರುವ ಬೆನ್ನಲ್ಲೇ ಪ್ರಭಾಸ್​​ ಸ್ಪೇನ್​ಗೆ ಪಯಣ ಬೆಳೆಸಿದ್ದು, ಶಸ್ತ್ರಚಿಕಿತ್ಸೆಗೊಳಗಾಗಿದ್ದಾರೆ.

ಇದನ್ನೂ ಓದಿ: ದಂಪತಿಯಾಗಿ ಮೊದಲ ಹೋಳಿ ಆಚರಿಸಿಕೊಂಡ ಕತ್ರಿನಾ-ವಿಕ್ಕಿ

ಕಳೆದ ಎರಡು ತಿಂಗಳ ಹಿಂದೆ ಬಹುನಿರೀಕ್ಷಿತ ಸಲಾರ್​ ಚಿತ್ರದಲ್ಲಿ ಪ್ರಭಾಸ್ ಭಾಗಿಯಾಗಿದ್ದ ವೇಳೆ ಗಾಯಗೊಂಡಿದ್ದರು. ಹೀಗಾಗಿ ಕಾಲಿನ ಸರ್ಜರಿ ಮಾಡಿಸಿಕೊಳ್ಳಲು ಬಾರ್ಸಿಲೋನಾದ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಚಿಕಿತ್ಸೆ ಪಡೆದುಕೊಂಡಿದ್ದಾರೆ. ಹೀಗಾಗಿ, ಕೆಲ ದಿನಗಳ ಕಾಲ ವಿಶ್ರಾಂತಿ ಪಡೆದುಕೊಳ್ಳುವಂತೆ ವೈದ್ಯರು ಅವರಿಗೆ ಸೂಚನೆ ನೀಡಿರುವ ಕಾರಣ ಸ್ಪೇನ್​​ನಲ್ಲೇ ಉಳಿದುಕೊಳ್ಳಲಿದ್ದಾರೆ. ಮಾರ್ಚ್​ 1ರಂದು ರಿಲೀಸ್​​ ಆಗಿರುವ ರಾಧೆ ಶ್ಯಾಮ್​ ಸಿನಿಮಾದಲ್ಲಿ ಪೂಜಾ ಹೆಗ್ಡೆ ನಟಿಸಿದ್ದರು.

ಇನ್ನು, ಕನ್ನಡದ ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್​ ಅವರ ನಿರ್ದೇಶನದ ಸಲಾರ್​ ಚಿತ್ರದಲ್ಲಿ ಪ್ರಭಾಸ್​​ ನಟಿಸಿದ್ದು, ಚಿತ್ರೀಕರಣ ಸಂಪೂರ್ಣವಾಗಿ ಮುಕ್ತಾಯವಾಗಿಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.