ETV Bharat / sitara

ಪ್ರಭಾಸ್​ ವರಿಸಲಿರುವ ಲಕ್ಕಿ ಗರ್ಲ್​​ ಈಕೆ! - ಸಾಹೋ ಸಿನಿಮಾ ಬಿಡುಗಡೆ

ಪ್ರಭಾಸ್ ನಟನೆಯ ಬಹುನಿರೀಕ್ಷಿತ ಸಾಹೋ ಸಿನಿಮಾ ಬಿಡುಗಡೆಗೆ ಸಿದ್ಧವಿರುವಾಗಲೇ ಪ್ರಭಾಸ್ ಮದುವೆಯ ಬಗ್ಗೆ ಸುದ್ದಿಯೊಂದು ಹೊರಬಿದ್ದಿದೆ.

ಪ್ರಭಾಸ್
author img

By

Published : Aug 4, 2019, 12:46 PM IST

ಬಾಹುಬಲಿ ಸಿನಿಮಾದ ಮೂಲಕ ವಿಶ್ವಾದ್ಯಂತ ಸುದ್ದಿ ಮಾಡಿದ್ದ ನಟ ಪ್ರಭಾಸ್​ ಸಾಕಷ್ಟು ಯುವತಿಯರ ಹೃದಯ ಕದ್ದಿದ್ದರು. ಪ್ರಭಾಸ್ ಆ್ಯಕ್ಟಿಂಗ್, ಮ್ಯಾನರಿಸಂಗೆ ಮಹಿಳಾ ಫ್ಯಾನ್ಸ್​ ಸಂಖ್ಯೆ ಏರಿಕೆಯಾಗಿತ್ತು.

ಇದೀಗ ಪ್ರಭಾಸ್ ನಟನೆಯ ಬಹುನಿರೀಕ್ಷಿತ ಸಾಹೋ ಸಿನಿಮಾ ಬಿಡುಗಡೆಗೆ ಸಿದ್ಧವಿರುವಾಗಲೇ ಪ್ರಭಾಸ್ ಮದುವೆಯ ಬಗ್ಗೆ ಸುದ್ದಿಯೊಂದು ಹೊರಬಿದ್ದಿದೆ. ಬಾಹುಬಲಿ ಮುಕ್ತಾಯದ ವೇಳೆಗೆ ಕನ್ನಡತಿ ಅನುಷ್ಕಾ ಶೆಟ್ಟಿಯನ್ನು ವಿವಾಹವಾಗಲಿದ್ದಾರೆ ಎನ್ನುವ ದೊಡ್ಡ ಗುಲ್ಲೆದ್ದಿತ್ತು. ಆದರೆ ಅದು ಬಂದಷ್ಟೇ ವೇಗದಲ್ಲಿ ಮೂಲೆ ಸೇರಿತ್ತು.

ಹೈ ಬಜೆಟ್ ಸಾಹೋ ಚಿತ್ರ ತೆರೆಕಂಡ ಬಳಿಕ ಪ್ರಭಾಸ್ ಮದುವೆಯಾಗಲಿದ್ದಾರೆ ಎನ್ನುವ ವಿಚಾರವನ್ನು ಸ್ವತಃ ರೆಬೆಲ್ ​ಸ್ಟಾರ್ ಪ್ರಭಾಸ್ ಸಹೋದರಿ ಹೇಳಿದ್ದಾರೆ. ಸಂದರ್ಶನವೊಂದರಲ್ಲಿ ಪ್ರಭಾಸ್ ಮದುವೆ ಬಗ್ಗೆ ಮಾತನಾಡಿರುವ ಸಹೋದರಿ, ಅಣ್ಣನ ಮದುವೆ ಬಗ್ಗೆ ಮನೆಯಲ್ಲಿ ಮಾತುಕತೆಗಳು ನಡೆಯುತ್ತಿವೆ. ಅಮೆರಿಕಾ ಮೂಲದ ಉದ್ಯಮಿಯೊಬ್ಬರ ಮಗಳನ್ನು ಪ್ರಭಾಸ್ ವರಿಸುವುದು ಬಹುತೇಕ ಖಚಿತ ಎಂದಿದ್ದಾರೆ.

Saaho
ಸಾಹೋ ಪೋಸ್ಟರ್

ಅಮೆರಿಕಾ ಮೂಲದ ಉದ್ಯಮಿಯ ಮಗಳು ನಮ್ಮ ಮನೆಯಲ್ಲಿ ಎಲ್ಲರಿಗೂ ಪರಿಚಿತ. ಆಕೆ ಪ್ರಭಾಸ್​ಗೂ ಇಷ್ಟವಾಗಿದ್ದಾಳೆ. ಪ್ರಭಾಸ್ ಶೂಟಿಂಗ್​​ನಲ್ಲಿ ಬ್ಯುಸಿ ಇರುವುದರಿಂದ ಮದುವೆಯ ದಿನಾಂಕ ಹಾಗೂ ಇನ್ನಿತರ ವಿಚಾರಗಳನ್ನು ಅಂತಿಮಗೊಳಿಸಲು ಸಾಧ್ಯವಾಗಿಲ್ಲ. ಸಾಹೋ ರಿಲೀಸ್ ಬಳಿಕ ಎಲ್ಲರೂ ಕುಳಿತು ಅಂತಿಮ ಮಾಡಲಿದ್ದೇವೆ ಎಂದು ಪ್ರಭಾಸ್ ಸಹೋದರಿ ಸಂದರ್ಶನದಲ್ಲಿ ಹೇಳಿದ್ದಾರೆ. ಆದರೆ ಹುಡುಗಿ ಹೆಸರು ಮತ್ತು ಆಕೆಯ ಫ್ಯಾಮಿಲಿ ಬಗ್ಗೆ ಪ್ರಭಾಸ್ ಸಹೋದರಿ ಯಾವುದೇ ಮಾಹಿತಿ ನೀಡಿಲ್ಲ.

ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಸಾಹೋ ಸಿನಿಮಾ ಇದೇ ತಿಂಗಳ 30ರಂದು ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಪ್ರಭಾಸ್​ಗೆ ಜೊತೆಯಾಗಿ ಶ್ರದ್ಧಾ ಕಪೂರ್​ ನಟಿಸಿದ್ದರೆ, ಇನ್ನುಳಿದ ಪಾತ್ರದಲ್ಲಿ ಜಾಕಿ ಶ್ರಾಫ್​​, ನೀಲ್ ನಿತಿನ್ ಮುಖೇಶ್​, ಮಂದೀರಾ ಬೇಡಿ, ಮಹೇಶ್ ಮಂಜ್ರೇಕರ್​, ಅರುಣ್ ವಿಜಯ್ ಕಾಣಿಸಿಕೊಂಡಿದ್ದಾರೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.