ETV Bharat / sitara

Good News​​: 'ರಾಧೆ ಶ್ಯಾಮ್'​​ ಚಿತ್ರೀಕರಣ ಪುನಾರಂಭ ಮಾಡಿದ ಚಿತ್ರತಂಡ - film Radhe Shyam

ಯೂರೋಪ್​​ನಲ್ಲಿ 1970ರಲ್ಲಿ ನಡೆದ ಪ್ರೇಮ ಕಥೆಯೊಂದನ್ನು ಆಧರಿಸಿ ರಾಧೆ ಶ್ಯಾಮ್ ಚಿತ್ರ ಮೂಡಿಬರಲಿದ್ದು, ಪ್ರಭಾಸ್​ ಜೊತೆ ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸಿದ್ದಾರೆ.

Radhe Shyam Movie
Radhe Shyam Movie
author img

By

Published : Jun 26, 2021, 4:52 PM IST

ಹೈದರಾಬಾದ್​: ದೇಶಾದ್ಯಂತ ಕೋವಿಡ್​ ಸೋಂಕಿನ ಎರಡನೇ ಅಲೆ ಕಡಿಮೆಯಾಗಿದ್ದು, ಎಲ್ಲವೂ ಈ ಹಿಂದಿನ ರೀತಿ ಸಹಜ ಸ್ಥಿತಿಗೆ ಮರಳುತ್ತಿದೆ. ಹೀಗಾಗಿ ಸ್ಥಗಿತಗೊಂಡಿದ್ದ ಸಿನಿಮಾ ಶೂಟಿಂಗ್​ಗಳು ಇದೀಗ ಪುನಾರಂಭಗೊಳ್ಳುತ್ತಿವೆ.

ತೆಲಂಗಾಣದಲ್ಲೂ ಲಾಕ್​ಡೌನ್​ 2.0 ಸಂಪೂರ್ಣವಾಗಿ ಓಪನ್ ಆಗಿದ್ದು, ಪ್ರಭಾಸ್​ ಅಭಿನಯದ ರಾಧೆ ಶ್ಯಾಮ್​ ಚಿತ್ರತಂಡ ಚಿತ್ರೀಕರಣದಲ್ಲಿ ಬ್ಯುಸಿ ಆಗಿದೆ. ನಿನ್ನೆಯಿಂದಲೇ ಚಿತ್ರೀಕರಣ ಆರಂಭಗೊಂಡಿದ್ದಾಗಿ ತಿಳಿದು ಬಂದಿದೆ. ಕಳೆದ ನಾಲ್ಕು ವರ್ಷಗಳಿಂದ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಲಾಕ್​ಡೌನ್​ ಕಾರಣ ಮೇಲಿಂದ ಮೇಲೆ ಚಿತ್ರೀಕರಣ ಸ್ಥಗಿತಗೊಳಿಸಲಾಗಿತ್ತು.

ಇದನ್ನೂ ಓದಿರಿ: ಪ್ರೇಮಿಗಳ ದಿನಕ್ಕೆ​ ಪ್ರಭಾಸ್ ಗಿಫ್ಟ್ - 'ರಾಧೆಶ್ಯಾಮ್' ಟೀಸರ್​ ಔಟ್​.. ಬಿಡುಗಡೆ ದಿನಾಂಕವೂ ಪ್ರಕಟ

ಚಿತ್ರಕ್ಕೆ ರಾಧ ಕೃಷ್ಣ ಕುಮಾರ್​​ ನಿರ್ದೇಶನ ಇದ್ದು, ಚಿತ್ರದಲ್ಲಿ ನಾಯಕ ನಾಯಕಿಯಾಗಿ ಪ್ರಭಾಸ್​ ಮತ್ತು ಪೂಜಾ ಹೆಗಡೆ ಕಾಣಿಸಿಕೊಂಡಿದ್ದಾರೆ. ಉವಿ ಕ್ರಿಯೇಷನ್​​ ಅಡಿ ವಂಶಿ ಮತ್ತು ಪ್ರಮೋದ್​​ ನಿರ್ಮಾಣ ಮಾಡುತ್ತಿದ್ದಾರೆ. ಬಾಹುಬಲಿ ಖ್ಯಾತಿಯ ಡಾರ್ಲಿಂಗ್​ ಪ್ರಭಾಸ್​ ಅವರ 20ನೇ ಸಿನಿಮಾ ಇದಾಗಿದ್ದು, ಪ್ರೇಮಿಗಳ ದಿನವೇ ಚಿತ್ರದ ಟೀಸರ್​ ರಿಲೀಸ್​ ಆಗಿದೆ. 1970ರಲ್ಲಿ ಯೂರೋಪ್​ನಲ್ಲಿ ನಡೆದ ಪ್ರೇಮಕಥೆ ಆಧರಿಸಿ ಈ ಚಿತ್ರ ತಯಾರಾಗುತ್ತಿದೆ.

ಈ ಚಿತ್ರ ಜುಲೈ 30ಕ್ಕೆ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣಲಿದೆ ಎಂದು ಈ ಹಿಂದೆ ಪ್ರಭಾಸ್​ ಹೇಳಿಕೊಂಡಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.