ETV Bharat / sitara

ಪವರ್ ಸ್ಟಾರ್ ಜೇಮ್ಸ್ ಹಬ್ಬಕ್ಕೆ ಮೆಗಾಸ್ಟಾರ್-ಜೂನಿಯರ್ ಯಂಗ್ ಟೈಗರ್‌ ಸಾಕ್ಷಿ!? - ಪುನೀತ್ ರಾಜ್ ಕುಮಾರ್ ಸಿನೆಮಾ ಜೇಮ್ಸ್ ರಿಲೀಸ್

ಮಾರ್ಚ್ ಒಂದಕ್ಕೆ ಜೇಮ್ಸ್ ಚಿತ್ರದ ಅಪ್ಪು ಇಂಟ್ರಡಕ್ಷನ್ ಸಾಂಗ್ ರಿಲೀಸ್ ಮಾಡಲಿರುವ ಚಿತ್ರತಂಡ, ಮಾರ್ಚ್ 6ಕ್ಕೆ ವಿಜಯನಗರದ ಹೊಸಪೇಟೆ ಯಲ್ಲಿ ಜೇಮ್ಸ್ ಚಿತ್ರದ ಪ್ರೀ ರಿಲೀಸ್ ಇವೆಂಟ್ ಮಾಡಲು ಸಿದ್ದತೆ ನಡೆಸುತ್ತಿದೆ. ಹೊಸಪೇಟೆಯ ಪುನೀತ್ ರಾಜ್ ಕುಮಾರ್ ಜಿಲ್ಲಾ ಕ್ರೀಡಾಂಗಣದಲ್ಲಿ ಈ ಇವೆಂಟ್ ನಡೆಯಲಿದೆ..

powerstar-punith-rajkumar-movie-james-release
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್
author img

By

Published : Feb 26, 2022, 12:54 PM IST

ಕನ್ನಡ ಚಿತ್ರರಂಗ ಅಲ್ಲದೆ ದಕ್ಷಿಣ ಭಾರತದಲ್ಲೇ ಟೈಟಲ್‌ನಿಂದಲೇ ಸಖತ್ ಹವಾ ಕ್ರಿಯೇಟ್ ಮಾಡಿರೋ ಸಿನಿಮಾ ಜೇಮ್ಸ್. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೊನೆಯ ಬಾರಿಗೆ ಬೆಳ್ಳಿತೆರೆ ಮೇಲೆ ಅಭಿಮಾನಿಗಳನ್ನು ರಂಜಿಸಲಿರುವ ಪವರ್ ಫುಲ್ ಸಿನಿಮಾ.

ಜೇಮ್ಸ್ ರಿಲೀಸ್‌ಗೆ ಕೇವಲ 20 ದಿನಗಳು ಬಾಕಿ ಇವೆ. ಈ ಸಿನಿಮಾದ ಭರ್ಜರಿ ಪ್ರಚಾರಕ್ಕೆ ಚಿತ್ರತಂಡದ ಜೊತೆಗೆ ಅಭಿಮಾನಿಗಳು ಅದ್ದೂರಿ ವೇದಿಕೆಯನ್ನು ರೆಡಿ ಮಾಡುತ್ತಿದ್ದಾರೆ. ಜೇಮ್ಸ್ ಚಿತ್ರದ ರಿಲೀಸ್ ದಿನವನ್ನ ಹಬ್ಬದಂತೆ ಆಚರಿಸಲು ಅಪ್ಪು ಅಭಿಮಾನಿಗಳು ಡಿಸೈಡ್ ಮಾಡಿದ್ದಾರೆ.

ಮಾರ್ಚ್ 17ರಿಂದ ಮಾರ್ಚ್ 20ರವರೆಗೆ ನಾಲ್ಕು ದಿನಗಳ ಅಪ್ಪು ದಾಸೋಹ ಮಾಡಲು ಸಜ್ಜಾಗಿದ್ದಾರೆ. ಇದು ಅಭಿಮಾನಿಗಳ ಅಭಿಮಾನದ ಆರಾಧನೆಯಾದರೆ, ಇನ್ನೊಂದೆಡೆ ಪುನೀತ್ ರಾಜ್ ಕುಮಾರ್ ಇಲ್ಲ ಅನ್ನೋ ನೋವು ಅವರ ಅಭಿಮಾನಿಗಳಿಗೆ ಕಾಡದಿರಲಿ ಅಂತಾ ಅದ್ದೂರಿ ಪ್ರಚಾರದ ಮೂಲಕ ಜೇಮ್ಸ್ ಚಿತ್ರವನ್ನು ರಿಲೀಸ್ ಮಾಡಲು ಚಿತ್ರದ ನಿರ್ದೇಶಕ ಚೇತನ್ ಹಾಗೂ ನಿರ್ಮಾಪಕ ಕಿಶೋರ್ ಪ್ಲಾನ್ ಮಾಡಿದ್ದಾರೆ.

powerstar punith rajkumar movie james
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್

ಈಗಾಗಲೇ ಅಪ್ಪುಅಭಿಮಾನಿಗಳಲ್ಲಿ ಜೇಮ್ಸ್ ಫೀವರ್ ಶುರುವಾಗಿದೆ. ಜೊತೆಗೆ ಈಗ ಈ ಫೀವರ್ ಮತ್ತಷ್ಟು ಜಾಸ್ತಿ ಮಾಡಲು ಜೇಮ್ಸ್ ಚಿತ್ರತಂಡದಿಂದ ಒಂದು ಗುಡ್ ನ್ಯೂಸ್ ಹೊರ ಬಿದ್ದಿದೆ. ಜೇಮ್ಸ್ ಚಿತ್ರವನ್ನು ಗ್ರಾಂಡ್ ಆಗಿ ರಿಲೀಸ್ ಮಾಡಲು ಪ್ಲಾನ್ ಮಾಡಿರುವ ನಿರ್ಮಾಪಕ ಕಿಶೋರ್, ದೊಡ್ಮನೆ ರಾಜಕುಮಾರನನ್ನು ದೇವರಂತೆ ಆರಾಧಿಸುವ ಅಭಿಮಾನಿಗಳ ಸಾಗರವೇ ಇರುವ ವಿಜಯನಗರ ಜಿಲ್ಲೆಯ ಹೊಸಪೇಟೆಯಿಂದ ಜೇಮ್ಸ್ ಪ್ರಚಾರದ ತೇರನ್ನು ಎಳೆಯೋಕೆ ಪ್ಲಾನ್ ಮಾಡಿದ್ದಾರೆ.

ಮಾರ್ಚ್ ಒಂದಕ್ಕೆ ಜೇಮ್ಸ್ ಚಿತ್ರದ ಅಪ್ಪು ಇಂಟ್ರಡಕ್ಷನ್ ಸಾಂಗ್ ರಿಲೀಸ್ ಮಾಡಲಿರುವ ಚಿತ್ರತಂಡ, ಮಾರ್ಚ್ 6ಕ್ಕೆ ವಿಜಯನಗರದ ಹೊಸಪೇಟೆ ಯಲ್ಲಿ ಜೇಮ್ಸ್ ಚಿತ್ರದ ಪ್ರೀ ರಿಲೀಸ್ ಇವೆಂಟ್ ಮಾಡಲು ಸಿದ್ದತೆ ನಡೆಸುತ್ತಿದೆ. ಹೊಸಪೇಟೆಯ ಪುನೀತ್ ರಾಜ್ ಕುಮಾರ್ ಜಿಲ್ಲಾ ಕ್ರೀಡಾಂಗಣದಲ್ಲಿ ಈ ಇವೆಂಟ್ ನಡೆಯಲಿದೆ.

ಅಲ್ಲದೆ ಈ ಅದ್ದೂರಿ ಕಾರ್ಯಕ್ರಮಕ್ಕೆ ಮೆಗಾಸ್ಟಾರ್ ಚಿರಂಜೀವಿ ಹಾಗೂ ಪವರ್ ಸ್ಟಾರ್ ಗೆಳೆಯ ಟಾಲಿವುಡ್ ಸ್ಟಾರ್ ಜೂ. ಎನ್‌ಟಿಆರ್ ಅತಿಥಿಯಾಗಿ ಬರ್ತಾರೆ ಅನ್ನೋ ಸುದ್ದಿ ಈಗ ಪವರ್ ಸ್ಟಾರ್ ಅಭಿಮಾನಿಗಳ ಅಂಗಳದಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಒಂದು ಕಡೆ ಚಿತ್ರತಂಡ ಜೇಮ್ಸ್ ತೇರನ್ನು ದಸರಾ ಅಂಬಾರಿಯಂತೆ ಮೆರವಣಿಗೆ ಮಾಡಲು ಪ್ಲಾನ್ ಮಾಡ್ತಿದ್ರೆ, ಮತ್ತೊಂದು ಕಡೆ ದೊಡ್ಮನೆ ಅಭಿಮಾನಿಗಳು ಈ ಉತ್ಸವಕ್ಕೆ ಮತ್ತಷ್ಟು ಮೆರಗು ನೀಡಲು ಹಗಲು-ರಾತ್ರಿ ಎನ್ನದೇ ಶ್ರಮಿಸುತ್ತಿದ್ದಾರೆ.

ರಿಲೀಸ್ ದಿನ ದಾಖಲೆ ಬರೆಯಲು ಸಿದ್ದವಾಗಿರುವ ಅಪ್ಪು ಅಭಿಮಾನಿಗಳು,ಈಗ ಕಟೌಟ್ ವಿಚಾರದಲ್ಲೂ ಸೌಂಡ್ ಮಾಡುತ್ತಿದ್ದಾರೆ. ರಾಜ್ಯಾದ್ಯಂತ ಬರೋಬರಿ 130 ಜೇಮ್ಸ್ ಕಟೌಟ್ ನಿಲ್ಲಿಸಲು ಪವರ್ ಫ್ಯಾನ್ಸ್ ಪ್ರಿಪೇರ್ ಮಾಡ್ಕೊಂಡಿದ್ದಾರೆ. ಅಲ್ಲದೆ ಈಗಾಗಲೇ ಜೇಮ್ಸ್ ಕಟೌಟ್ ಕೆಲಸ ಶುರುವಾಗಿದ್ದು, ಕಳೆದ ಎರಡು ದಿನಗಳಿಂದ 10 ಜನ ಹಗಲು-ರಾತ್ರಿ ಕೆಲಸ ಮಾಡಿ ಜೇಮ್ಸ್ ಕಟೌಟ್ ರೆಡಿ ಮಾಡ್ತಿದ್ಧಾರೆ.

ಸೋಲ್ಜರ್ ಅವತಾರದಲ್ಲಿ ಹಾಗೂ ಸೂಟ್‌ನಲ್ಲಿ ಮಿಂಚಿರುವ ಪವರ್ ಸ್ಟಾರ್ ಕಟೌಟ್‌ಗಳು ರೆಡಿಯಾಗುತ್ತಿದ್ದು, ಇನ್ನೊಂದು ವಾರದಲ್ಲಿ ಎಲ್ಲಾ ಕಟೌಟ್‌ಗಳು ಸಿದ್ಧವಾಗಿ ಜೇಮ್ಸ್ ರಿಲೀಸ್ ಆಗುವ ಎಲ್ಲಾ ಚಿತ್ರಮಂದಿರಗಳಲ್ಲಿ ಪವರ್ ಸ್ಟಾರ್ ಕಟೌಟ್‌ಗಳು ರಾರಾಜಿಸಲಿವೆ. ಇನ್ನು ಮಾರ್ಚ್ 17ಕ್ಕೆ ಎಂದು ಕಂಡು ಕೇಳರಿಯದ ರೀತಿಯಲ್ಲಿ ಜೇಮ್ಸ್ ಚಿತ್ರದ ಬಿಡುಗಡೆಯನ್ನ ಆಚರಿಸಲು ಅಭಿಮಾನಿಗಳು ಸಜ್ಜಾಗಿದ್ದಾರೆ. ಬಹುಶಃ ಭಾರತೀಯ ಚಿತ್ರರಂಗದಲ್ಲಿ ಇದೇ ಮೊದಲು ಅಂದ್ರೆ ತಪ್ಪಿಲ್ಲ.

ಓದಿ : 'ಜೇಮ್ಸ್'​ ಸಿನಿಮಾದಲ್ಲಿ ಸ್ಟೈಲಿಶ್ ಆಗಿ ಕಾಣಿಸಿಕೊಂಡ​​ ಪುನೀತ್: ಅಪ್ಪು ಮಾಸ್​​ ಲುಕ್​ಗೆ ಅಭಿಮಾನಿಗಳು ಫಿದಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.