ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಒಡೆತನದ ಪಿಆರ್ಕೆ ಪ್ರೊಡಕ್ಷನ್ ಅಡಿ ತಯಾರಾಗಿದ್ದ ಮೊದಲ ಸಿನಿಮಾ 'ಕವಲುದಾರಿ' ಯಶಸ್ವಿ 50 ದಿನಗಳನ್ನು ಪೂರೈಸಿದೆ. ಅಷ್ಟೇ ಅಲ್ಲದೆ ಸಿನಿಮಾ ಗಲ್ಲಾ ಪೆಟ್ಟಿಗೆಯಲ್ಲಿ ಸದ್ದು ಮಾಡಿದ್ದು ಪಿಆರ್ಕೆ ಸಂಸ್ಥೆ ಮೊದಲ ಚಿತ್ರದಲ್ಲೇ ಸಕ್ಸಸ್ ಕಂಡಿದೆ.

ಪಿಆರ್ಕೆ ಸಂಸ್ಥೆಯ ಎರಡನೇ ಸಿನಿಮಾ 'ಮಾಯಾಬಜಾರ್' ಶೂಟಿಂಗ್ ಹಂತದಲ್ಲಿದೆ. ಈ ಗ್ಯಾಪ್ನಲ್ಲಿ ಪುನೀತ್ ರಾಜ್ಕುಮಾರ್ ತಮ್ಮ ಸಂಸ್ಥೆಯಿಂದ ಮೂರನೇ ಸಿನಿಮಾವನ್ನು ತಯಾರಿಸಲು ರೆಡಿಯಾಗಿದ್ದಾರೆ. ಈ ಸಿನಿಮಾವನ್ನು ಪನ್ನಗಾಭರಣ ನಿರ್ದೇಶಿಸಲಿದ್ದಾರೆ. ಇನ್ನು 'ಹಂಬಲ್ ಪೊಲಿಟಿಷಿಯನ್ ನೋಗ್ರಾಜ್' ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ದಾನಿಶ್ ಸೇಠ್ ಈ ಸಿನಿಮಾದಲ್ಲಿ ನಟಿಸಲಿದ್ದಾರೆ. ಚಿತ್ರಕ್ಕೆ 'ಅಸ್ಗರ್' ಎಂಬ ಹೆಸರನ್ನೂ ಇಡಲಾಗಿದೆ.
ನಿನ್ನೆ ದಾನಿಶ್ ಸೇಠ್ ಹುಟ್ಟುಹಬ್ಬವಾಗಿದ್ದು ಬರ್ತಡೇ ಗಿಫ್ಟ್ ಆಗಿ ಪುನೀತ್ ರಾಜ್ಕುಮಾರ್ ಈ ಚಿತ್ರವನ್ನು ಅನೌನ್ಸ್ ಮಾಡಿ ಫಸ್ಟ್ಲುಕ್ ಬಿಡುಗಡೆ ಮಾಡಿದ್ದಾರೆ. ಶೀಘ್ರದಲ್ಲೇ ಸಿನಿಮಾ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ಚಿತ್ರತಂಡ ರಿವೀಲ್ ಮಾಡಲಿದೆ.