ETV Bharat / sitara

ಕನ್ನಡದ ಕೆಜಿಎಫ್​​-2ನಲ್ಲಿ ಟಾಲಿವುಡ್​ ನಟ - ರಾವ್​ ರಮೇಶ್

ಕೆಜಿಎಫ್​ 2 ನಲ್ಲಿ ​ಬಾಲಿವುಡ್​ ನಟ ಸಂಜಯ್ ದತ್​ ನಟಿಸಲಿದ್ದಾರೆ ಅನ್ನೋ ಸುದ್ದಿ ಮೊದಲಿನಿಂದಲೂ ಕೇಳಿ ಬರುತ್ತಿದೆ. ಈಗ ಟಾಲಿವುಡ್​ನ ಫೇಮಸ್​ ನಟ ಕೂಡ ಈ ಚಿತ್ರದಲ್ಲಿ ಅಭಿನಯಿಸಲಿದ್ದಾರೆ ಎನ್ನಲಾಗುತ್ತಿದೆ.

ಕೆಜಿಎಫ್
author img

By

Published : May 16, 2019, 7:43 PM IST

ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ ಕನ್ನಡದ ಕೆಜಿಎಫ್ ಸಿನಿಮಾದ ಸೀಕ್ವೆಲ್ ಸಿದ್ಧವಾಗುತ್ತಿದೆ. ಸ್ಟಾರ್​ ಡೈರೆಕ್ಟರ್​​ ಪ್ರಶಾಂತ್​ ನೀಲ್ ತಂಡಕಟ್ಟಿಕೊಂಡು ಮತ್ತೆ ಅಖಾಡಕ್ಕಿಳಿದು ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ.

Rao Ramesh
ಡೈರೆಕ್ಟರ್​​ ಪ್ರಶಾಂತ್​ ನೀಲ್ (ಚಿತ್ರಕೃಪೆ : ಟ್ವಿಟ್ಟರ್​​ )

ಕೆಜಿಎಫ್​​ನ ಪ್ರಿಕ್ವೆಲ್​ ಚಿತ್ರಕ್ಕೆ ಸಿಕ್ಕ ಜಯ, ಸೀಕ್ವೆಲ್ ಚಿತ್ರದ ಮೇಲಿನ ನಿರೀಕ್ಷೆ ದುಪ್ಪಟ್ಟು ಮಾಡಿದೆ. ಇಡೀ ದೇಶದ ಜನ ಕೆಜಿಎಫ್ ಪಾರ್ಟ್​​-2 ಮೇಲೆ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡು ಕಾಯುತ್ತಿದ್ದಾರೆ. ಅದರಂತೆ ಈ ಚಿತ್ರದ ಸ್ಟಾರ್​ಕಾಸ್ಟ್​ ಬಗ್ಗೆಯೂ ಪ್ರೇಕ್ಷಕರಲ್ಲಿ ಕುತೂಹಲ ಮನೆ ಮಾಡಿದೆ. ಈಗಾಗಲೇ ಬಾಲಿವುಡ್​ನ ದಿಗ್ಗಜ ನಟರು ಈ ಚಿತ್ರದಲ್ಲಿ ನಟಿಸಲಿದ್ದಾರೆ ಎನ್ನುವ ಸುದ್ದಿ ಮೊದಲಿನಿಂದಲೂ ಕೇಳಿ ಬರುತ್ತಿದೆ. ಆದರೆ, ಈ ಬಗ್ಗೆ ಇದುವರೆಗೂ ಯಾವುದೇ ಅಧಿಕೃತ ಮಾಹಿತಿ ಚಿತ್ರತಂಡ ಹೊರಬಿದ್ದಿಲ್ಲ. ಸದ್ಯ ಮತ್ತೊಂದು ಹೆಸರು ಕೆಜಿಎಫ್​ ತಂಡ ಸೇರಿಕೊಂಡಿದೆ.

ಹೌದು, ಟಾಲಿವುಡ್​ನ ಖ್ಯಾತ ಪೋಷಕ ನಟ ರಾವ್​ ರಮೇಶ್ ಕೆಜಿಎಫ್​​-2 ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯಿಸಲಿದ್ದಾರಂತೆ. ಅವರು ಮುಂದಿನ ಆಗಸ್ಟ್​ ತಿಂಗಳಿನಲ್ಲಿ ಚಿತ್ರತಂಡ ಸೇರಿಕೊಳ್ಳಲಿದ್ದಾರೆ ಅನ್ನೋ ಸುದ್ದಿ ಕೇಳಿ ಬರುತ್ತಿದೆ. ಆದರೆ, ಈ ಬಗ್ಗೆ ಚಿತ್ರತಂಡದಿಂದ ಅಧಿಕೃತ ಘೋಷಣೆಯಾಗಿಲ್ಲ.

Rao Ramesh
ನಟ ರಾವ್​ ರಮೇಶ್​ ( ಚಿತ್ರಕೃಪೆ : ಸೋಷಿಯಲ್ ಮೀಡಿಯಾ )

ಇನ್ನು ಕೆಜಿಎಫ್​ ಪ್ರಿಕ್ವೆಲ್​​ನಲ್ಲಿ ರಾಕಿಭಾಯ್​ ಪಾತ್ರದದಲ್ಲಿ ಅಬ್ಬರಿಸಿದ್ದ ರಾಕಿಂಗ್​ ಸ್ಟಾರ್​ ಯಶ್​, ಚಾಪ್ಟರ್​​ 2ನಲ್ಲೂ ಲೀಡ್​ ರೋಲ್​ ಪ್ಲೇ ಮಾಡ್ತಿದ್ದಾರೆ. ಈಗಾಗಲೇ ಶೂಟಿಂಗ್​ ಶುರುವಾಗಿದ್ದು, ಮೊದಲಿನಂತೆ ಗಡ್ಡಬಿಟ್ಟುಕೊಂಡು ಕ್ಯಾಮರಾ ಮುಂದೆ ಹಾಜರಾಗಿದ್ದಾರೆ ಯಶ್​. ​

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.