ETV Bharat / sitara

'ಬೊಂಬೆ ಹೇಳುತೈತೆ...' ಈ ಹಾಡು ಹಾಡಲು 15 ರಿಂದ 20 ದಿನ ತೆಗೆದುಕೊಂಡೆ: ವಿಜಯ ಪ್ರಕಾಶ್‌ - tribute to puneet rajkumar

ಸೆಲೆಬ್ರೇಷನ್ಸ್ ಟೀ ಕಂಪನಿಯ ರಾಯಭಾರಿಯಾಗಿ ವಿಜಯ್ ಪ್ರಕಾಶ್ ಕಾಣಿಸಿಕೊಂಡಿದ್ದಾರೆ. ಸಂಸ್ಥೆಯ ವತಿಯಿಂದ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ 'ಬೊಂಬೆ ಹೇಳುತೈತೆ ನೀನೇ ರಾಜಕುಮಾರ' ಹಾಡು ಹಾಡಿ ದಿ.ಪುನೀತ್​ ರಾಜ್​ಕುಮಾರ್​ ಅವರನ್ನು ಸ್ಮರಿಸಲಾಯಿತು.

Singer Vijay Prakash Ambassador of Celebrations Tea
ಸೆಲೆಬ್ರೇಷನ್ಸ್​ ಟೀ ರಾಯಭಾರಿಯಾಗಿ ಗಾಯಕ ವಿಜಯ್ ಪ್ರಕಾಶ್
author img

By

Published : Feb 22, 2022, 7:36 AM IST

Updated : Feb 22, 2022, 4:24 PM IST

ಕನ್ನಡ ಚಿತ್ರರಂಗ ಅಲ್ಲದೇ ಭಾರತೀಯ ಸಿನಿಮಾ ರಂಗದಲ್ಲಿ ತನ್ನ ಸುಮಧುರ ಕಂಠದಿಂದ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ಗಾಯಕ ವಿಜಯ್ ಪ್ರಕಾಶ್. ಜೈಹೋ ಖ್ಯಾತಿಯ ವಿಜಯ್ ಪ್ರಕಾಶ್ ಇದೇ ಮೊಟ್ಟ ಮೊದಲ ಬಾರಿಗೆ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ.

ಕನ್ನಡ ಪ್ರತಿಭೆಗಳಾದ ಚಂದನ್ ಪ್ರಕಾಶ್ ಹಾಗು ಪವನ್ ಪ್ರಕಾಶ್ ಸಹೋದರರು ಹುಟ್ಟು ಹಾಕಿರುವ ಸೆಲೆಬ್ರೇಷನ್ಸ್ ಟೀ ಕಂಪನಿಯ ರಾಯಭಾರಿಯಾಗಿ ಇವರು ಕಾಣಿಸಿಕೊಂಡಿದ್ದಾರೆ. ಗಾಯಕನ ಹುಟ್ಟುಹಬ್ಬದ ಪ್ರಯುಕ್ತ ಸಂಸ್ಥೆ ಜಾಹೀರಾತು ಅನಾವರಣಗೊಳಿಸಿದೆ.

ಬೊಂಬೆ ಹೇಳುತೈತೆ ನೀನೇ ರಾಜಕುಮಾರ ಹಾಡನ್ನು ಹಾಡಿದ ವಿಜಯ್​ ಪ್ರಕಾಶ್

ಸೆಲೆಬ್ರೇಷನ್ಸ್ ಟೀಯ ಸಂಸ್ಥಾಪಕರಾದ ಚಂದನ್ ಪ್ರಕಾಶ್ ಹಾಗು ಪವನ್ ಪ್ರಕಾಶ್ ಮಾತನಾಡಿ, ಸೆಲೆಬ್ರೇಷನ್ಸ್​ ಟೀ ವಿಶಿಷ್ಟ ರುಚಿ ಉತ್ತಮ ಸುಹಾಸನೆಯೊಂದಿಗೆ ಕೂಡಿದೆ. ಶೇಕಡಾ ನೂರರಷ್ಟು ನೈಸರ್ಗಿಕ ಅಂಶಗಳಿಂದ ಕೂಡಿದ ಚಹಾ ಪುಡಿಯಾಗಿದೆ. ಅಸ್ಸಾಂ ಮತ್ತು ನೀಲಗಿರಿಯಲ್ಲಿ ಉನ್ನತವಾಗಿ ಬೆಳೆದ ಚಹಾದ ಎಲೆಗಳನ್ನು ಕೈಯಲ್ಲೇ ಕಿತ್ತು ಸಂಸ್ಕರಿಸಲಾಗಿದೆ. ಜೊತೆಗೆ ಉದ್ಯಮದ ಅತ್ಯುನ್ನತ ಮಾನದಂಡಗಳೊಂದಿಗೆ ಪರಿಪೂರ್ಣವಾಗಿದೆ‌. ಯಾವುದೇ ರಾಸಾಯನಿಕ ಅಂಶ ಇಲ್ಲದೇ ಸಿದ್ಧಪಡಿಸಲಾಗಿದೆ ಎಂದರು.

ಅಪ್ಪುವಿಗೆ ನಮನ: ಸೆಲೆಬ್ರೇಷನ್ಸ್​ ಟೀ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದೊಡ್ಮನೆ ರಾಜಕುಮಾರನನ್ನು ಸ್ಮರಿಸಿ ಗೌರವಿಸಲಾಯಿತು. ಇದೇ ವೇಳೆ ವಿಜಯ್‌ ಪ್ರಕಾಶ್, ಬೊಂಬೆ ಹೇಳುತೈತೆ ಹಾಡು ಹಾಡಿದರು.

ಇದನ್ನೂ ಓದಿ: ನಿಜ ಜೀವನದಲ್ಲೂ ಜೋಡಿಯಾಗಲಿದ್ದಾರಾ ಗೀತ-ಗೋವಿಂದಂ..?
ಅಂದ ಹಾಗೆ, 15ರಿಂದ 20 ದಿನಗಳ ಸಮಯ ತೆಗೆದುಕೊಂಡು ಈ ಹಾಡು ಹಾಡಿದ್ದಾಗಿ ವಿಜಯ ಪ್ರಕಾಶ್ ತಿಳಿಸಿದರು.

ಸೆಲೆಬ್ರೇಷನ್ಸ್​ ಟೀ ಕಂಪನಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಜಯ್​ ಪ್ರಕಾಶ್​

Last Updated : Feb 22, 2022, 4:24 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.