ಟೈಟಲ್ನಿಂದಲೇ ಸ್ಯಾಂಡಲ್ವುಡ್ನಲ್ಲಿ ಕುತೂಹಲ ಹುಟ್ಟುಹಾಕಿರುವ ಸಿನಿಮಾ 'ಪಾಪ್ಕಾರ್ನ್ ಮಂಕಿ ಟೈಗರ್'. ದುನಿಯಾ ಸೂರಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾದಲ್ಲಿ ಡಾಲಿ ಧನಂಜಯ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಡಾಲಿ ಅಭಿಮಾನಿಗಳಿಗೆ ಈಗ ಗುಡ್ ನ್ಯೂಸ್. ಈ ಚಿತ್ರದ ಮೊದಲ ಟೀಸರ್, ನಾಳೆ ಅಂದರೆ 7ನೇ ತಾರೀಖು ಬಿಡುಗಡೆಯಾಗುತ್ತಿದೆ. ಭಾರೀ ನಿರೀಕ್ಷೆ ಮತ್ತು ಕುತೂಹಲ ಹುಟ್ಟಿಸಿರುವ 'ಪಾಪ್ಕಾರ್ನ್ ಮಂಕಿ ಟೈಗರ್' ಚಿತ್ರದ ಈ ಟೀಸರ್‌ನ ಪಿಆರ್ಕೆ ಯೂಟ್ಯೂಬ್ ಚಾನೆಲ್ನಲ್ಲೂ ಲಾಂಚ್ ಮಾಡಲಾಗುತ್ತಿದೆ. ಹೆಚ್ಚು ಅಬ್ಬರವಿಲ್ಲದೆ ಸೈಲೆಂಟಾಗಿ ಸಿನಿಮಾ ಶೂಟಿಂಗ್ ಮಾಡುತ್ತಿರುವ ಸೂರಿ, ಇದೀಗ ಸೈಲೆಂಟಾಗಿ ಚಿತ್ರದ ಟೀಸರ್‌ನ ಲಾಂಚ್ ಮಾಡಲು ಸಜ್ಜಾಗಿದ್ದಾರೆ.
ಸುರೇಂದ್ರ ನಾಥ್ ಮತ್ತು ಸೂರಿ ಈ ಸಿನಿಮಾಗೆ ಕಥೆ ಬರೆದಿದ್ದಾರೆ. ಸೂರಿ ಮತ್ತು ಅಮೃತ ಭಾರ್ಗವ್ ಸಂಭಾಷಣೆ ಬರೆದಿದ್ದಾರೆ. ಸೂರಿ ನಿರ್ದೇಶನ ಎಂಬ ಕಾರಣಕ್ಕೆ ಈ ಸಿನಿಮಾ ಗಾಂಧಿನಗರದಲ್ಲಿ ಬಹಳ ಕುತೂಹಲ ಹುಟ್ಟಿಸಿದೆ. ಡಾಲಿ ಧನಂಜಯ್ ನಾಯಕನಾಗಿ ವಿಶಿಷ್ಟ ಪಾತ್ರದಲ್ಲಿ ಮಿಂಚಿದ್ದಾರೆ. ಚಿತ್ರದಲ್ಲಿ ಔಟ್ ಅಂಡ್ ಔಟ್ ಮಾಸ್ ಸಿನಿಮಾ ಜೊತೆಗೆ ಫ್ಯಾಮಿಲಿ ಎಮೋಷನ್ಸ್ ಇದೆಯಂತೆ.
ಚಿತ್ರಕ್ಕೆ ಚರಣ್ ರಾಜ್ ಸಂಗೀತ, ಶೇಖರ್ ಛಾಯಾಗ್ರಹಣ, ಸುಧೀರ್ ಕೆ ಎಂ ಬಂಡವಾಳ ಹೂಡಿದ್ದಾರೆ. ಈಗಾಗಲೇ ಸಾಕಷ್ಟು ವಿಚಾರಗಳಿಂದ ಸದ್ದು ಮಾಡಿರುವ 'ಪಾಪ್ಕಾರ್ನ್ ಮಂಕಿ ಟೈಗರ್' ಟೀಸರ್ ನಾಳೆ ಬಿಡುಗಡೆ ಆಗುತ್ತಿದೆ.