ಪಣಜಿ(ಗೋವಾ): ಬಹುಕಾಲದ ಗೆಳೆಯನೊಂದಿಗೆ ಕಳೆದ 10 ದಿನಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ನಟಿ ಪೂನಂ ಪಾಂಡೆ ಗಂಡನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ಇದೀಗ ಅವರಿಗೆ ಷರತ್ತುಬದ್ಧ ಜಾಮೀನು ಸಿಕ್ಕಿದೆ.
- " class="align-text-top noRightClick twitterSection" data="
">
ಪತಿಯ ವಿರುದ್ಧ ಕಿರುಕುಳ ಹಾಗೂ ಜೀವ ಬೆದರಿಕೆ ಆರೋಪದ ಮೇಲೆ ಪತಿ ಸ್ಯಾಮ್ ಬಾಂಬೆ ವಿರುದ್ಧ ಗೋವಾದಲ್ಲಿ ದೂರು ದಾಖಲು ಮಾಡಿದ್ದಳು. ಇದಾದ ನಂತರ ಪೊಲೀಸರು ಆತನನ್ನು ಬಂಧಿಸಿದ್ದರು.
- " class="align-text-top noRightClick twitterSection" data="
">
ಸದ್ಯ ಗೋವಾದ ಪ್ರಥಮ ದರ್ಜೆ ನ್ಯಾಯಾಲಯ ಅವರಿಗೆ ಷರತ್ತುಬದ್ದ ಜಾಮೀನು ನೀಡಿದೆ. ಜತೆಗೆ 20 ಸಾವಿರ ರೂ ಶ್ಯೂರಿಟಿ ಇಟ್ಟುಕೊಂಡಿದೆ. ಈ ವೇಳೆ, ಯಾವುದೇ ಸಾಕ್ಷಿ ನಾಶ ಮಾಡವಂತೆ ವಾರ್ನ್ ಮಾಡಿದ್ದಾಗಿ ತಿಳಿದು ಬಂದಿದೆ. ಪೂನಂ ಪಾಂಡೆ ದೂರಿನ ಆಧಾರದ ಮೇಲೆ ಸ್ಯಾಮ್ ಬಾಂಬೆ ವಿರುದ್ಧ ಸೆಕ್ಷನ್ 323, 504,354 ಹಾಗೂ 506ರ ಅಡಿ ದೂರು ದಾಖಲು ಮಾಡಿಕೊಳ್ಳಲಾಗಿದೆ.