ಮುಂಬೈ: ನಟಿ-ನಿರೂಪಕಿ ಪೂಜಾ ಬೇಡಿ ಅವರಿಗೆ ಕೋವಿಡ್-19 ಸೋಂಕು ತಗುಲಿದೆ. ಭಾನುವಾರ ಸಂಜೆ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಬಗ್ಗೆ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ.
"ಕೊರೊನಾ ಲಸಿಕೆ ಪಡೆದುಕೊಳ್ಳದಿರುವ ಬಗ್ಗೆ ನಾನು ಮೊದಲಿನಿಂದಲೂ ಮಾತನಾಡುತ್ತಾ ಬಂದಿದ್ದೇನೆ. ಲಸಿಕೆ ಪಡೆಯಬಾರದು ಎಂಬುದು ನನ್ನ ನಿರ್ಧಾರವಾಗಿತ್ತು. ಸ್ವಂತ ರೋಗ ನಿರೋಧಕ ಶಕ್ತಿಯೇ ನಿಧಾನವಾಗಿ ಹೆಚ್ಚಲಿದೆ. ನಿಮ್ಮ ಆಯ್ಕೆ ಏನು ಎಂಬುದನ್ನು ನೀವೇ ನಿರ್ಧರಿಸಿ" ಎಂದು ಪೂಜಾ ಬೇಡಿ ಹೇಳಿದ್ದಾರೆ.
- " class="align-text-top noRightClick twitterSection" data="
">
ಪೂಜಾ ಬೇಡಿ 1992 ರ ಹಿಟ್ ಸಿನಿಮಾ 'ಜೋ ಜೀತಾ ವಹಿ ಸಿಕಂದರ್' ಮೂಲಕ ಖ್ಯಾತರಾದವರು. ಆಗಸ್ಟ್‌ನಲ್ಲಿ, ಬೇಡಿ ಲಸಿಕೆ ಹಾಕುವ ಪ್ರಕ್ರಿಯೆಯ ವಿರುದ್ಧ ಧ್ವನಿ ಎತ್ತಿದ್ದರು. ಆಗಸ್ಟ್ ತಿಂಗಳಲ್ಲಿ ಅವರು ಬಲವಂತದ ಲಸಿಕೆ ಅಭಿಯಾನವನ್ನು ವಿರೋಧಿಸಿದ್ದರು.
ದೇಶದಲ್ಲಿ ಸಾಂಕ್ರಾಮಿಕ ರೋಗದ ಮಾರಕ ಎರಡನೇ ತರಂಗದ ನಡುವೆ ಏಪ್ರಿಲ್‌ನಲ್ಲಿ ಗೋವಾದಲ್ಲಿ ಸ್ಪೀಡ್‌ಬೋಟ್ ಸವಾರಿ ಆನಂದಿಸುವ ವಿಡಿಯೋವನ್ನು ಪೋಸ್ಟ್ ಮಾಡಿದ್ದ ಪೂಜಾ ಬೇಡಿ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.
ಸೋಮವಾರ ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿಯ ಪ್ರಕಾರ, ಭಾರತವು 13,596 ಹೊಸ ಕೊರರೊನಾ ವೈರಸ್ ಸೋಂಕುಗಳನ್ನು ವರದಿ ಮಾಡಿದೆ. ಒಟ್ಟು COVID-19 ಪ್ರಕರಣಗಳ ಸಂಖ್ಯೆ 3,40,81,315 ಕ್ಕೆ ತಲುಪಿದೆ. ಆದರೆ ಸಕ್ರಿಯ ಪ್ರಕರಣಗಳು 1,89,694 ಕ್ಕೆ ಇಳಿದಿದೆ.